ಮಕ್ಕಳಲ್ಲಿ ಪರಿಸರ ಪ್ರೀತಿ ಬೆಳೆಸಿದ ರಾಧಿಕಾ ಪಂಡಿತ್; ಫೋಟೋ ವೈರಲ್
ಪರಿಸರ ದಿನದಂದು ಮಕ್ಕಳ ಜೊತೆ ಮನೆಯಲ್ಲಿ ಗಿಡ ನೆಡುತ್ತಿರುವ ರಾಧಿಕಾ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್....

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ರಾಧಿಕಾ ಪಂಡಿತ್ ಮತ್ತು ಮಕ್ಕಳ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತದೆ.
ಮಕ್ಕಳಲ್ಲಿ ಪರಿಸರ ಪ್ರೀತಿ ಬೆಳೆಸುವ ನಿಟ್ಟಿನಲ್ಲಿ ರಾಧಿಕಾ ಪಂಡಿತ್ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.ಇನ್‌ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿರುವ ನಟಿ ಫೋಟೋ ಹಾಕಿದ್ದಾರೆ.
ಮನೆಯಲ್ಲಿ ಮಕ್ಕಳಾದ ಐರಾ ಹಾಗೂ ಯಥರ್ವರಿಗೆ ಕುಂಡಕ್ಕೆ ಮಣ್ಣು ಹಾಕಿ ಗಿಡ ನೆಡುವುದನ್ನು ರಾಧಿಕಾ ಕಲಿಸಿದ್ದಾರೆ. ಈ ಮೂಲಕ ಮಕ್ಕಳಿಗೆ ಪರಿಸರದ ಪಾಠವನ್ನೂ ತಿಳಿಸಿಕೊಟ್ಟಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ವರ್ಷದಲ್ಲಿ ಬರುವ ಪ್ರತಿಯೊಂದು ವಿಶೇಷ ದಿನವನ್ನು ರಾಧಿಕಾ ಪಂಡಿತ್ ಮಕ್ಕಳ ಜೊತೆ ಆಚರಿಸುತ್ತಾರೆ ಅವರಿಗೆ ಅವುಗಳ ಮಹತ್ವ ತಿಳಿಸಿಕೊಡುತ್ತಾರೆ.
ಒಂದು ಮರ ಅಥವಾ ಗಿಡವನ್ನು ನೆಡಿ ಅದು ಬೆಳೆಯುವುದನ್ನು ನೋಡಿ ಮನಸ್ಸು ಕೂಡ ಬೆಳೆಯುತ್ತದೆ ಎಂದು ಬರೆದುಕೊಂಡಿದ್ದಾರೆ ರಾಧಿ.
ರಾಧಿಕಾ, ಯಥರ್ವ್ ಮತ್ತು ಐರಾ ನೆಲದ ಮೇಲೆ ಕುಳಿತುಕೊಂಡು ಗಿಡ ನೆಡುತ್ತಿರುವುದನ್ನು ನೋಡಿ ನೆಟ್ಟಿಗರು ಖುಷಿ ಪಟ್ಟಿದ್ದಾರೆ. ಸರಳ ವ್ಯಕ್ತಿತ್ವ ಎಂದು ಮೆಚ್ಚಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.