- Home
- Entertainment
- Sandalwood
- ಕೆಜಿಎಫ್ ಯಶ್ ಆದ್ಮೇಲೆ ಬಾಲಿವುಡ್ ವರುಣ್ ಧವನ್ ಜೊತೆ ಅವಿನಾಶ್; ಹಾರಿಬಿಟ್ರಾ ಸರ್ ಎಂದ ನೆಟ್ಟಿಗರು!
ಕೆಜಿಎಫ್ ಯಶ್ ಆದ್ಮೇಲೆ ಬಾಲಿವುಡ್ ವರುಣ್ ಧವನ್ ಜೊತೆ ಅವಿನಾಶ್; ಹಾರಿಬಿಟ್ರಾ ಸರ್ ಎಂದ ನೆಟ್ಟಿಗರು!
ಕನ್ನಡ, ತೆಲುಗು ಮತ್ತು ತಮಿಳು ನಂತರ ಬಾಲಿವುಡ್ ಅಂಗಳಕ್ಕೆ ಹಾರಿದ ಅವಿನಾಶ್. ವರುಣ್ ಧವನ್ ಜೊತೆಗಿನ ಸಿನಿಮಾದಲ್ಲಿ ಕನ್ನಡದ ವಿಲನ್....

ಕೆಜಿಎಫ್ ಚಿತ್ರದಲ್ಲಿ ಆಂಡ್ರ್ಯೂಸ್ ಮಾತ್ರದಲ್ಲಿ ಕಾಣಿಸಿಕೊಂಡಿರುವ ಅವಿನಾಶ್ ತೆಲುಗು ಮತ್ತು ತಮಿಳು ಮಾತ್ರವಲ್ಲ ಬಾಲಿವುಡ್ ಅಂಗಳಕ್ಕೂ ಕಾಲಿಟ್ಟಿದ್ದಾರೆ.
ವರುಣ್ ಧವನ್ ಚಿತ್ರದಲ್ಲಿ ಚಿತ್ರದಲ್ಲಿ ಅವಿನಾಶ್ ನಟಿಸುತ್ತಿದ್ದಾರೆ ಎನ್ನಲಾಗಿದೆ. ಪಾತ್ರದ ಬಗ್ಗೆ ಎಲ್ಲೂ ರಿವೀಲ್ ಮಾಡಿಲ್ಲವಾದರೂ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ.
ಡಾಲಿ ಧನಂಜಯ್ ಜೊತೆ ಹೋಯ್ಸಳಾ ಚಿತ್ರದಲ್ಲಿ ನಟಿಸಿರುವ ಅವಿನಾಶ್ ಮುರ್ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದರು ಶೀಘ್ರದಲ್ಲಿ ಅನೌನ್ಸ್ ಮಾಡಲಿದ್ದಾರೆ.
ಹಲವು ವರ್ಷಗಳಿಂದ ವಾರದಲ್ಲಿ 6 ದಿನ ತಪ್ಪದೆ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಾರೆ. ಪ್ರಯಾಣ ಮಾಡುವಾಗ ಡಂಬಲ್‌ಗಳನ್ನು ತೆಗೆದುಕೊಂಡು ಹೋಗುತ್ತಾರಂತೆ.
ವೃತ್ತಿ ಜೀವನದಲ್ಲಿ ಸಾಧನೆ ಮತ್ತು ಹೆಸರು ಮಾಡಲು ಕಾರಣ ಕೆಜಿಎಫ್. ಜೀವನದಲ್ಲಿ ಹೊಸ ಫೇಸ್ ಕೊಟ್ಟಿದೆ ಎಂದೂ ಕೆಜಿಎಫ್ ಮರೆಯುವುದಿಲ್ಲ ಎನ್ನುತ್ತಾರೆ ಅವಿನಾಶ್.
ವಿಭಿನ್ನ ಪಾತ್ರಗಳನ್ನು ಮಾಡಲು ಇಷ್ಟ ಪಡುವ ಅವಿನಾಶ್ ಪ್ರಕಾಶ್ ರಾಜ್ ನೆಚ್ಚಿನ ನಟ ಎನ್ನುತ್ತಾರೆ. ಯಾವುದೇ ಪಾತ್ರ ಕೊಟ್ಟರೂ ಸೈ ಎನ್ನುವ ಗುಣ ಇವರಿಗೆ ಇಷ್ಟವಂತೆ.
ಇಷ್ಟು ಸಿನಿಮಾಗಳಲ್ಲಿ ಖಡಕ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವಿನಾಶ್....ಚಿತ್ರಕಥೆಗೆ ತಕ್ಕಂತೆ ವಿಲನ್ ಶೇಡ್ ಬದಲಾಗುತ್ತಂತೆ, ನಿರ್ದೇಶಕರಿಗೆ ಸರೆಂಡರ್ ಆಗಿ ನಟಿಸುತ್ತಾರಂತೆ.