ಮಾಡರ್ನ್ ಹುಡುಗಿಯಾಗಿ ಮೂಗಿನ ಎರಡೂ ಸೈಡ್ ಚುಚ್ಚಿಸಿಕೊಂಡ Kantara ನಟಿ ಸಪ್ತಮಿ ಗೌಡ!
ವೈರಲ್ ಅಗುತ್ತಿದೆ ಕಾಂತಾರ ನಟಿ ಸಪ್ತಮಿ ಗೌಡ ಮೂಗು ಚುಚ್ಚಿಸಿಕೊಂಡಿರುವ ಫೋಟೋ. ಟ್ರೆಂಡ್ ಪ್ರಶ್ನೆ ಮಾಡಿದ ನೆಟ್ಟಿಗರು....
ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ state swimmer ಸಪ್ತಮಿ ಗೌಡ ಇದೀಗ ಹೊಸ ಟ್ರೆಂಡ್ ಫಾಲೋ ಮಾಡುತ್ತಿದ್ದಾರೆ.
ಸದ್ಯ ರಿಷಬ್ ಶೆಟ್ಟಿ ಜೊತೆ ಕಾಂತಾರ ಸಿನಿಮಾದಲ್ಲಿ ಅಭಿನಯಿಸಿರುವ ಸಪ್ತಮಿ ಗೌಡ ಮೂಗಿನ ಎರಡೂ ಸೈಡ್ ಚುಚ್ಚಿಸಿಕೊಂಡಿದ್ದಾರೆ. ನೋಡಲು ಸಖತ್ ಡಿಫರೆಂಟ್ ಆಗಿ ಕಾಣಿಸುತ್ತಿದ್ದಾರೆ.
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಸಣ್ಣ ಕೂದಲಿ ಬಣ್ಣ ಹಾಕಿಸಿಕೊಳ್ಳುವಾಗ, ಹೇರ್ ಕಟ್ ಮಾಡಿಸುವಾಗ, ಟ್ಯಾಟೋ ಹಾಕಿಸಿಕೊಳ್ಳುವಾಗ ಎರಡು ಎರಡು ಸಲ ಯೋಚನೆ ಮಾಡುತ್ತಾರೆ ಆದರೆ ಸಪ್ತಮಿ ಡೇರಿಂಗ್ ಆಗಿ ನಿರ್ಧಾರ ತೆಗೆದುಕೊಂಡಿದ್ದಾರೆ.
52 ಸಾವಿರ ಇನ್‌ಸ್ಟಾಗ್ರಾಂ ಫಾಲೋವರ್ಸ್ ಹೊಂದಿರುವ ಸಪ್ತಮಿ ಗೌಡ ಮಾಡ್ರನ್ ಮತ್ತು ಟ್ರೆಡಿಷನಲ್ ಲುಕ್‌ಗೆ ಮೂಗುತ್ತಿ ಧರಿಸಿರುವ ಫೋಟೋ ಹಂಚಿಕೊಂಡಿದ್ದಾರೆ. ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಸಪ್ತಮಿ ಗೌಡ ಈ ಲುಕ್ ಕಾಂತಾರ ಚಿತ್ರಕ್ಕೆ ಸೂಕ್ತವಾಗಿದೆ ಆದರೆ ಸಿನಿಮಾಗಾಗಿ ಈ ಸಾಹಸ ಮಾಡಿದ್ದಾರೆ ಅಂದ್ರೆ ಅಚ್ಚರಿನೇ. ಏಕೆಂದರೆ ಮುಂದೆ ಆಯ್ಕೆ ಮಾಡಿಕೊಳ್ಳವ ಸಿನಿಮಾಗಳ ಮೇಲ್ಲೂ ಈ ಲುಕ್ ಪರಿಣಾಮ ಬೀರುತ್ತದೆ.
ಡಾಲಿ ಧನಂಜಯ್ ಸಿನಿಮಾ ನಂತರ ಬಹಳ ಸಮಯ ತೆಗೆದುಕೊಂಡು ಸಪ್ತಮಿ ಕಾಂತಾರ ಒಪ್ಪಿಕೊಂಡಿದ್ದಾರೆ. ಸದಾ ಭಜಾರಿ ಪಾತ್ರನೇ ಮಾಡುತ್ತಿದ್ದರೆ ವೃತ್ತಿಯಲ್ಲಿ ಏನೂ ಬೆಳವಣಿಗೆ ಅನಿಸುವುದಿಲ್ಲ ಕಾದು ಆಯ್ಕೆ ಮಾಡಿಕೊಂಡಿರುವ ಕಾಂತಾರ ಕಥೆ.
ಇನ್‌ಸ್ಟಾಗ್ರಾಂನಲ್ಲಿ ನನ್ನ ಫೋಟೋ ನೋಡಿ ರಿಷಬ್ ಶೆಟ್ಟಿ ಕಾಂತಾರ ಚಿತ್ರಕ್ಕೆ ಆಯ್ಕೆ ಮಾಡಿದ್ದರು. ಸಣ್ಣ ಪುಟ್ಟ ಸೀನ್‌ಗಳನ್ನು ವಿವರಿಸಿ ಆಡಿಷನ್ ಮಾಡಿದ್ದರು. ಹೊಂಬಾಳೆ ಬ್ಯಾನರ್‌ನಲ್ಲಿ ಎರಡನೇ ಸಿನಿಮಾ ಮಾಡುತ್ತಿರುವುದಕ್ಕೆ ಖುಷಿ ಇದೆ ಎಂದಿದ್ದಾರೆ.