ಕಾಂತಾರ ಚಾಪ್ಟರ್-1 ಸೆಟ್ಟೇರಿದ ಮೇಲೆ ರಿಷಬ್ ಶೆಟ್ಟಿಗೆ ಸಾಲು ಸಾಲು ತೊಂದರೆ!
ಕಾಂತಾರ ಸಿನಿಮಾ ಯಶಸ್ಸಿನ ಬಳಿಕ ಕಾಂತಾರ 2 ಚಿತ್ರೀಕರಣದಲ್ಲಿ ರಿಷಬ್ ಶೆಟ್ಟಿ ಹಲವು ವಿಘ್ನಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ದೈವದಿಂದಲೇ ರಿಷಬ್ ಶೆಟ್ಟಿಗೆ ಎಚ್ಚರಿಕೆ ಬಂದಿದೆ.

ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದ ಕಾಂತಾರ ಸಿನಿಮಾ ನಟ-ನಿರ್ದೇಶಕ ರಿಷಬ್ ಶೆಟ್ಟಿಗೂ ಒಳ್ಳೆ ಹೆಸರು ತಂದುಕೊಟ್ಟಿತ್ತು. ಪಂಜುರ್ಲಿ ದೈವ, ದೈವ ನರ್ತಕರ ಕಥೆಯನ್ನು ಕನ್ನಡ ನಾಡಿನ ಜನತೆಯ ಮುಂದೆ ಇದು ಪ್ರಸ್ತುತಪಡಿಸಿತ್ತು.
ಆದರೆ, ಕಾಂತಾರ ಸಿನಿಮಾ ಬಂದ ಬಳಿಕ ಪಂಜುರ್ಲಿ ದೈವದ ವೇಷಭೂಷಣ ತೊಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವುದು, ತಮಾಷೆ ಮಾಡುವುದು ಕೂಡ ಹೆಚ್ಚಾಗಿತ್ತು. ಇದರಿಂದಾಗಿ ಕೊನೆಗೆ ತುಳುನಾಡಿನ ಜನತೆ ಕಾಂತಾರ ಸಿನಿಮಾವೊಂದು ಬರದೆ ಹೋಗಿದ್ದರೆ ಇಂಥ ಅಪಪ್ರಚಾರಗಳು ತಪ್ಪುತ್ತಿದ್ದವು ಎಂದು ಮಾತನಾಡಿಕೊಂಡರು.
ಕಾಂತಾರದ ಬಳಿಕ ಕಾಂತಾರ ಚಾಪ್ಟರ್-1 ಎನ್ನುವ ಸಿನಿಮಾವನ್ನು ರಿಷಬ್ ಶೆಟ್ಟಿ ಮಾಡುತ್ತಿದ್ದಾರೆ. ಆದರೆ, ಈ ಸಿನಿಮಾ ಸೆಟ್ಟೇರಿದ ಕ್ಷಣದಿಂದಲೂ ನಟ-ನಿರ್ದೇಶಕ ರಿಷಬ್ ಸಾಲು ಸಾಲು ತೊಂದರೆಗಳನ್ನು ಎದುರಿಸುವಂತಾಗಿದೆ.
ಹೌದು, ಕಾಂತಾರ ಚಾಪ್ಟರ್-1 ಸಿನಿಮಾಗೆ ಒಂದರ ಮೇಲೊಂದು ವಿಘ್ನ ಎದುರಾಗಿದೆ. ಕಾಂತಾರ ಬಂದಾಗಿದೆ. ಅದರ ಭಾಗವಾಗಿ ಮತ್ತೆ ಅದೇ ರೀತಿಯ ಯಾವುದೇ ಸಿನಿಮಾ ಮಾಡಬಾರದು ಎಂದು ದೈವಾರಾಧಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Kantara Movie
ಕಾಂತಾರ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ತುಳುನಾಡಿನಲ್ಲೇ ಆಗ್ರಹ ಮಾಡಲಾಗಿತ್ತು. ಇದರಿಂದ ಸಿನಿಮಾ ಹೇಗೋ ಪಾರಾಗಿ ಯಶಸ್ಸು ಕಂಡಿತ್ತು.
ಕಾಂತಾರ ಚಾಪ್ಟರ್-1 ಸಿನಿಮಾದಲ್ಲಿ ಸರಿಯಾಗಿ ವೇತನ ನೀಡಿಲ್ಲ ಎಂದು ಸಹ ಕಲಾವಿದರು ಪ್ರತಿಭಟನೆ ಮಾಡಿದ್ದು ಕೂಡ ಸುದ್ದಿಯಾಗಿತ್ತು.
ಇದಾದ ಬಳಿಕ, ಹಾಸನ ಬಳಿಕ ಡೀಮ್ಡ್ ಅರಣ್ಯದಲ್ಲಿ ಶೂಟಿಂಗ್ ಮಾಡಿದ ವಿವಾದ ಕೂಡ ಚಿತ್ರತಂಡಕ್ಕೆ ತಟ್ಟಿತ್ತು. ಸ್ಪೋಟಕ ವಸ್ತುಗಳ ಬಳಕೆ ಆರೋಪದ ಮೇಲೆ ಅರಣ್ಯ ಇಲಾಖೆ ದಾಳಿ ಮಾಡಿತ್ತು. ವನ್ಯ ಜೀವಿಗಳಿಗೆ ತೊಂದರೆ ಆಗುತ್ತೆ ಎಂದು ಎಚ್ಚರಿಕೆ ನೀಡಲಾಗಿತ್ತು.
2024ರಲ್ಲಿ ಸಹ ಕಲಾವಿದರಿದ್ದ ಮಿನಿ ಬಸ್ ಅಪಘಾತಕ್ಕೆ ಈಡಾಗಿತ್ತು. ಉಡುಪಿಯ ಜಡ್ಕಲ್ ಬಳಿ ಕಲಾವಿದರಿಂದ ಬಸ್ ಪಲ್ಟಿಯಾಗಿ ಕೆಲವರಿಗೆ ಪೆಟ್ಟಾಗಿತ್ತು.
ಈಗ ಸ್ವತಃ ರಿಷಬ್ ಶೆಟ್ಟಿಗೆ ದೈವದಿಂದಲೇ ಎಚ್ಚರಿಕೆ ಬಂದಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ನೇಮದಲ್ಲಿ ರಿಷಬ್ ಶೆಟ್ಟಿ ಭಾಗಿಯಾಗಿದ್ದರು. ಈ ವೇಳೆ ಪಂಜುರ್ಲಿ ಜಗತ್ತಿನೆಲ್ಲೆಡೆ ನಿನಗೆ ದುಷ್ಮನ್‌ಗಳಿದ್ದಾರೆ. ನಿನ್ನ ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದೆ. ಅದರೊಂದಿಗೆ ರಿಷಬ್ ಶೆಟ್ಟಿಗೆ ಶತ್ರುಕಾಟ ಇರುವ ಬಗ್ಗೆಯೂ ಎಚ್ಚರಿಕೆಯನ್ನು ನೀಡಿದೆ.
ʼಕಾಂತಾರ 1ʼ ಸಿನಿಮಾದಲ್ಲಿ ಬ್ಯುಸಿಯಿರೋ ರಿಷಬ್ ಶೆಟ್ಟಿ ಕುಟುಂಬದ ಯುಗಾದಿ ಆಚರಣೆ ಫೋಟೋಗಳಿವು!
ಈ ತೊಂದರೆಗಳ ಹೊರತಾಗಿಯೂ, ಕಾಂತಾರ: ಚಾಪ್ಟರ್-1ರ ಸಿನಿಮಾ ಶೂಟಿಂಗ್ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ವರದಿಯಾಗಿದೆ, ಅಕ್ಟೋಬರ್ 2, 2025 ರಂದು ಬಿಡುಗಡೆಯಾಗುವ ದಿನಾಂಕವನ್ನು ನಿಗದಿಪಡಿಸಲಾಗಿದೆ. ಈ ಚಿತ್ರವು ಅತ್ಯಂತ ಯಶಸ್ವಿ ಕಾಂತಾರ ಚಿತ್ರದ ಪೂರ್ವಭಾವಿಯಾಗಿದ್ದು, ಕರಾವಳಿ ಕರ್ನಾಟಕದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬೇರುಗಳನ್ನು ಆಳವಾಗಿ ಚಿತ್ರಿಸಲಾಗಿದೆ.
ಕಾಯ್ತಾ ಇರಿ, ನೋಡಲು ಮರೆಯದಿರಿ: 2025ರಲ್ಲಿ ತೆರೆ ಕಾಣುವ ಬಹು ನಿರೀಕ್ಷಿತ ಸಿನಿಮಾಗಳು ಇವೇ ನೋಡಿ