- Home
- Entertainment
- Sandalwood
- ಅಡ್ವಾನ್ಸ್ ಟಿಕೆಟ್ ಬುಕಿಂಗ್‌ನಲ್ಲಿ ಕಾಂತಾರ 1 ದಾಖಲೆ, ರಿಲೀಸ್‌ಗೂ ಮೊದಲೇ ರಿಷಬ್‌ಗೆ ಭರ್ಜರಿ ಯಶಸ್ಸು
ಅಡ್ವಾನ್ಸ್ ಟಿಕೆಟ್ ಬುಕಿಂಗ್‌ನಲ್ಲಿ ಕಾಂತಾರ 1 ದಾಖಲೆ, ರಿಲೀಸ್‌ಗೂ ಮೊದಲೇ ರಿಷಬ್‌ಗೆ ಭರ್ಜರಿ ಯಶಸ್ಸು
ಅಡ್ವಾನ್ಸ್ ಟಿಕೆಟ್ ಬುಕಿಂಗ್‌ನಲ್ಲಿ ಕಾಂತಾರ 1 ದಾಖಲೆ, ರಿಲೀಸ್‌ಗೂ ಮೊದಲೇ ರಿಷಬ್ ಶೆಟ್ಟಿಗೆ ಭರ್ಜರಿ ಯಶಸ್ಸು ಕಂಡಿದ್ದಾರೆ. ಅಕ್ಟೋಬರ್ 2ರಂದ ಸಿನಿಮಾ ಬಿಡುಗಡೆಯಾಗಲಿದೆ. ಆದರೆ ರಿಲೀಸ್‌ಗೂ ಮೊದಲೇ ಕಾಂತಾರ 1 ಸಿನಿಮಾ ಹಲವು ದಾಖಲೆ ಬರೆದಿದೆ.

ಕಾಂತಾರ 1 ಸಿನಿಮಾಗಾಗಿ ಕಾತರ
ಕಾಂತಾರ 1 ಸಿನಿಮಾಗಾಗಿ ಕಾತರ
ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ಕಾಂತಾರ 1 ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ಬಿಗ್ ಬಜೆಟ್ ಮೂವಿಗಾಗಿ ದೇಶದ ಸಿನಿ ಅಭಿಮಾನಿಗಳು ಕಾಯುತ್ತಿದ್ದಾರೆ. ಕಾಂತಾರ ಚಾಪ್ಟರ್ 1 ಸಿನಿಮಾದ ಮುಂಗಡ ಟಿಕೆಟ್ ಬುಕಿಂಗ್ ಆರಂಭಗೊಂಡಿದೆ. ಇದೀಗ ಅಡ್ವಾನ್ಸ್ ಟಿಕೆಟ್ ಬುಕಿಂಗ್‌ನಲ್ಲಿ ಕಾಂತಾರ 1 ದಾಖಲೆ ಬರೆಯತ್ತಿದೆ.
ದಾಖಲೆ ಬರೆದ ಅಡ್ವಾನ್ಸ್ ಟಿಕೆಟ್ ಬುಕಿಂಗ್
ದಾಖಲೆ ಬರೆದ ಅಡ್ವಾನ್ಸ್ ಟಿಕೆಟ್ ಬುಕಿಂಗ್
ಕಾಂತಾರ 1 ಸಿನಿಮಾ ಅಡ್ವಾನ್ಸ್ ಟಿಕೆಟ್ ಬುಕಿಂಗ್‌ನಲ್ಲಿ ದಾಖಲೆ ನಿರ್ಮಾಣವಾಗಿದೆ. ಶನಿವಾರ (ಸೆ.27) ಬೆಳಗ್ಗೆ 11 ಗಂಟೆ ವೇಳೆಗೆ ಕಾಂತಾರ 1 ಸಿನಿಮಾದ 47,210 ಟಿಕೆಟ್ ಮಾರಾಟವಾಗಿದೆ. ಈ ಮೂಲಕ ಅತೀ ಕಡಿಮೆ ಸಮಯದಲ್ಲಿ ಗರಿಷ್ಠ ಟಿಕೆಟ್ ಬುಕಿಂಗ್ ದಾಖಲೆ ಬರೆದಿದೆ. ವಿಶೇಷ ಅಂದರೆ ಅಡ್ವಾನ್ಸ್ ಬುಕಿಂಗ್ ಆರಂಭಗೊಂಡ 10 ನಿಮಿಷದಲ್ಲಿ 10 ಸಾವಿರ ಟಿಕೆಟ್ ಸೋಲ್ಡ್ ಆಗಿತ್ತು.
ಅಕ್ಟೋಬರ್ 2ರಂದು ಸಿನಿಮಾ ಬಿಡುಗಡೆ
ಅಕ್ಟೋಬರ್ 2ರಂದು ಸಿನಿಮಾ ಬಿಡುಗಡೆ
ಬಹುನಿರೀಕ್ಷಿತ ಕಾಂತಾರಾ ಚಾಪ್ಟರ್ 1 ಸಿನಿಮಾ ಅಕ್ಟೋಬರ್ 2 ರಂದು ತೆರೆಗೆ ಬರುತ್ತಿದೆ. ಸಿಬಿಎಫ್‌ಸಿ ಕಾಂತಾರಾ 1 ಸಿನಿಮಾದಲ್ಲಿ ಕೆಲ ದೃಶ್ಯಗಳ ಕುರಿತು ಸೂಚನೆ ನೀಡಲಾಗಿದೆ ಎಂದು ವರದಿಯಾಗಿದೆ. ಚಿತ್ರದ ಕುತೂಹಲ ಹೆಚ್ಚಾಗುತ್ತಿದೆ. ಅಭಿಮಾನಿಗಳು ಕಾತರಗೊಂಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಎಲ್ಲಾ ದಾಖಲೆ ಪುಡಿ ಮಾಡಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
7 ಭಾಷೆಗಳಲ್ಲಿ ಸಿನಿಮಾ ಬಿಡುಗಡೆ
7 ಭಾಷೆಗಳಲ್ಲಿ ಸಿನಿಮಾ ಬಿಡುಗಡೆ
ಕಾಂತಾರಾ 1 ಸಿನಿಮಾ ಬರೋಬ್ಬರಿ 7 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ, ಹಿಂದಿ, ತೆಲುಗು, ಮಲೆಯಾಳಂ, ತಮಿಳು, ಬಂಗಾಳಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಕನ್ನಡದ ಸಿನಿಮಾ ಒಂದು ದೇಶಾದ್ಯಂತ ಈ ಮಟ್ಟಿನ ಸದ್ದು ಮಾಡಿರುವುದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.
ಸೆಪ್ಟೆಂಬರ್ 28ಕ್ಕೆ ಹೈದರಾಬಾದ್‌ನಲ್ಲಿ ಪ್ರಿ ರಿಲೀಸ್
ಸೆಪ್ಟೆಂಬರ್ 28ಕ್ಕೆ ಹೈದರಾಬಾದ್‌ನಲ್ಲಿ ಪ್ರಿ ರಿಲೀಸ್
ಸೆಪ್ಟೆಂಬರ್ 28ಕ್ಕೆ ಹೈದರಾಬಾದ್‌ನಲ್ಲಿ ಪ್ರೀ ರಿಲೀಸ್ ಈವೆಂಟ್ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಜ್ಯೂನಿಯರ್ ಎನ್‌ಟಿಆರ್ ಪಾಲ್ಗೊಳ್ಳುತ್ತಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧ ನಗರದಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿದೆ. ಅದ್ಧೂರಿಯಾಗಿ ತೆರೆಕಾಣುತ್ತಿರುವ ಕಾಂತಾರ 1 ಸಿನಿಮಾ ದೇಶ ವಿದೇಶಗಳಲ್ಲೂ ಅಬ್ಬರಿಸಲಿದೆ.