- Home
- Entertainment
- Movie Reviews
- 1 ಗಂಟೆ 15 ನಿಮಿಷದ ಈ ಹಾರರ್ ಸೈಕಲಾಜಿಕಲ್ ಚಿತ್ರ ನೋಡಿದ್ರೆ ಪಾತ್ರಗಳು ನಿಮ್ಮ ಸುತ್ತವೇ ಸುತ್ತಿದ ಅನುಭವ ಆಗುತ್ತೆ
1 ಗಂಟೆ 15 ನಿಮಿಷದ ಈ ಹಾರರ್ ಸೈಕಲಾಜಿಕಲ್ ಚಿತ್ರ ನೋಡಿದ್ರೆ ಪಾತ್ರಗಳು ನಿಮ್ಮ ಸುತ್ತವೇ ಸುತ್ತಿದ ಅನುಭವ ಆಗುತ್ತೆ
1996ರಲ್ಲಿ ನಡೆದ ನಿಜ ಘಟನೆಯಾಧಾರಿತ 'ಪೋಶಮ್ ಪಾ' ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವು, ತನ್ನ ಮಕ್ಕಳನ್ನೇ ಕೊಲ್ಲುವ ತಾಯಿಯ ಕಥೆಯನ್ನು ಹೇಳುತ್ತದೆ. ಈ ಚಿತ್ರವು ಜೀ5 ಓಟಿಟಿಯಲ್ಲಿ ಲಭ್ಯವಿದ್ದು, ಮಹೀ ಗಿಲ್, ಸಯಾನಿ ಗುಪ್ತಾ ಮತ್ತು ರಾಗಿಣಿ ಖನ್ನಾ ನಟಿಸಿದ್ದಾರೆ.
16

ಇಂದು ಓಟಿಟಿ ಓಪನ್ ಮಾಡಿದ್ರೆ ಸಾಲು ಸಾಲು ಸಿನಿಮಾ ಮತ್ತು ವೆಬ್ ಸಿರೀಸ್‌ಗಳು ನೋಡಲು ಸಿಗುತ್ತವೆ. ಕೆಲವೊಮ್ಮೆ ಯಾವ ಸಿನಿಮಾ/ವೆಬ್ ಸಿರೀಸ್ ನೋಡಬೇಕೆಂಬ ಗೊಂದಲ ಉಂಟಾಗುತ್ತದೆ. ಇಂದು ನಾವು ನಿಮಗೆ ಸಸ್ಪೆನ್ಸ್‌ಗಳಿಂದ ತುಂಬಿದ ಬೆಸ್ಟ್ ಹಾರರ್ ಥ್ರಿಲ್ಲರ್ ಸಿನಿಮಾ ಬಗ್ಗೆ ಹೇಳುತ್ತಿದ್ದೇವೆ.
26
ಒಂದು ರೀತಿಯಲ್ಲಿ ಸೈಕಾಲಜಿಕಲ್ ಚಿತ್ರವಾಗಿದ್ದು, ನಿಮ್ಮ ಮನಸ್ಸನ್ನು ತೀಕ್ಷ್ಣವಾಗಿ ಕಾಡುತ್ತದೆ. ಕೇವಲ 1 ಗಂಟೆ 15 ನಿಮಿಷದ ಸೈಕಲಾಜಿಕಲ್ ಚಿತ್ರ ವೀಕ್ಷಣೆ ಬಳಿಕ ಇಡೀ ದಿನ ಚಿತ್ರದ ಪಾತ್ರಗಳು ನಿಮ್ಮ ಸುತ್ತವೇ ಸುಳಿದಂತಹ ಅನುಭವಾಗುತ್ತದೆ.ಈ ಚಿತ್ರಕ್ಕೆ IMDBಯಲ್ಲಿ 10ಕ್ಕೆ 6.2 ರೇಟಿಂಗ್ ನೀಡಲಾಗಿದೆ. ಹಾಗಾದ್ರೆ ಯಾವುದು ಈ ಸಿನಿಮಾ ಅಂತೀರಾ? ಯಾವ ಓಟಿಟಿ ಪ್ಲಾಟ್‌ಫಾರಂನಲ್ಲಿ ಇದನ್ನು ನೋಡಬಹುದು ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿ
36
ಈ ಚಿತ್ರದ 1996ರಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿದ್ದು, ಓರ್ವ ಬಡ ಮಹಿಳೆ ಜೀವನದಲ್ಲಿ ನಡೆಯುವ ಅಚ್ಚರಿ ಘಟನೆಯೇ ಚಿತ್ರದ ಕಥೆ. ಈ ಬಡ ಮಹಿಳೆ ತನ್ನ ಜೀವನ ನಿರ್ವಹಣೆಗಾಗಿ ಇತರರ ಮನೆಗಳಲ್ಲಿ ಕೆಲಸ ಮಾಡಿಕೊಂಡಿರುತ್ತಾಳೆ. ಈಕೆಗೆ ಇಬ್ಬರು ಹೆಣ್ಣು ಮಕ್ಕಳು ಸಹ ಇರುತ್ತಾರೆ. ಆದ್ರೆ ಚಿತ್ರದ ಕಥೆಯಲ್ಲಿ ಆಕೆಯೇ ತನ್ನ ಮಕ್ಕಳನ್ನು ಕೊಲ್ಲಲು ಆರಂಭವಾದಾಗ ರೋಚಕ ತಿರುವು ಸಿಗುತ್ತದೆ.
46
2020ರಲ್ಲಿ ಬಿಡುಗಡೆಯಾದ ಪೋಶಮ್ ಪಾ (Posham Pa) ಸಿನಿಮಾ ಬಗ್ಗೆ ನಾವು ಹೇಳುತ್ತಿದ್ದೇವೆ. ಜಿ5 ಓಟಿಟಿಯಲ್ಲಿ ಈ ಸಿನಿಮಾ ಲಭ್ಯವಿದ್ದು, ಮನೆಯಲ್ಲಿಯೇ ಕುಳಿತು ವೀಕ್ಷಿಸಬಹುದಾಗಿದೆ.2020ರಲ್ಲಿ ತೆರೆಕಂಡ ಪೋಶಮ್ ಪಾ ಚಿತ್ರದಲ್ಲಿ ಮಹೀ ಗಿಲ್ (Mahie Gill), ಸಯಾನಿ ಗುಪ್ತಾ, ರಾಗಿಣಿ ಖನ್ನಾ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.
56
5 ವರ್ಷಗಳ ಹಿಂದೆಯೇ ಬಿಡುಗಡೆ
ಒಟಿಟಿಯಲ್ಲಿ ಬಿಡುಗಡೆಯಾದ ಪೋಶಮ್ ಪಾ ವೀಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡು ಹೆಚ್ಚು ವೀಕ್ಷಣೆಗೆ ಒಳಗಾಗುತ್ತಿದೆ. ನಿರ್ದೇಶಕಿ ಸುಮನ್ ಮುಖ್ಯೋಪಾದ್ಯಯ (Suman Mukhopadhyay) ಚಿತ್ರದ ತಾರಾಬಳಗವನ್ನು ಅತ್ಯಂತ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಂಡಿದ್ದಾರೆ.
66
ಚಿತ್ರದ ಎಲ್ಲಾ ಕಲಾವಿದರ ನೈಜ ನಟನೆಯಿಂದಾಗಿ ಎಲ್ಲವೂ ಸತ್ಯ ಎಂಬ ಮನವರಿಕೆ ವೀಕ್ಷಕರಿಗೆ ಆಗುತ್ತದೆ. 5 ವರ್ಷಗಳ ಹಿಂದೆಯೇ ಒಟಿಟಿಯಲ್ಲಿ ಪೋಶಮ್ ಪಾ ಬಿಡುಗಡೆಯಾಗಿದೆ. ಮಾನಸಿಕ ಗೊಂದಲಕ್ಕೆ ಒಳಗಾದ ತಾಯಿ (Psychologically disturbed mother) ಪ್ರಜಕ್ತಾ ಪಾತ್ರದಲ್ಲಿ ಮಹೀ ಗಿಲ್ ನಟಿಸಿದ್ದಾರೆ.
Latest Videos