ಮೌನದಲ್ಲೇ ಮಾತನಾಡಬಹುದು ಎಂದು ತೋರಿಸಿದ್ದು 'ಕಾಂತಾರ': ಸಪ್ತಮಿ ಗೌಡ
ಕಾಂತಾರ ಚಿತ್ರದಲ್ಲಿ ಲೀಲಾ ಆಗಿ ಕಾಣಿಸಿಕೊಂಡ ಸಪ್ತಮಿ ಗೌಡ. ಪಾತ್ರದ ಬಗ್ಗೆ ಚಿತ್ರೀಕರಣದ ಬಗ್ಗೆ ಹೇಳಿಕೊಂಡಿದ್ದಾರೆ.
ಪಾಪ್‌ಕಾರ್ನ್ ಮಂಕಿ ಟೈಗರ್ (Popcorn monkey tiger) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನ್ಯಾಷನಲ್ ಸ್ವಿಮ್ಮರ್ ಸಪ್ತಮಿ ಗೌಡ (Sapthami Gowda).
ರಿಷಬ್ ಶೆಟ್ಟಿ (Rishab Shetty) ನಿರ್ದೇಶನ , ಹೊಂಬಾಳೆ ಫಿಲ್ಮ್ಸ (Hombale films) ನಿರ್ಮಾಣ ಮಾಡುತ್ತಿರುವ ಕಾಂತಾರ ಚಿತ್ರದಲ್ಲಿ ಸಪ್ತಮಿ ಗೌಡ ಅಭಿನಯಿಸುತ್ತಿದ್ದಾರೆ.
'ಕಾಂತಾರ (Kantara) ಸಿನಿಮಾ ಚಿತ್ರೀಕರಣ ಕುಂದಾಪುರದಲ್ಲಿ ಮಾಡಲಾಗಿತ್ತು. ಊರಿಗೆ ಹತ್ತಿರವಿರುವ ಕಾಡಿನ ಪ್ರದೇಶದಲ್ಲಿ ಹಳ್ಳಿ ಸೆಟ್ ಹಾಕಲಾಗಿತ್ತು' ಎಂದು ಸಪ್ತಮಿ ಗೌಡ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ಕರಾವಳಿ ಹಳ್ಳಿ ಸೆಟ್ ನೋಡಲು ನೈಜವಾಗಿತ್ತು. ಅಲ್ಲಿ ನಾವು 5 ತಿಂಗಳುಗಳ ಕಾಲ ಚಿತ್ರೀಕರಣ ಮಾಡಿದ್ದೀವಿ. ಕೊನೆ ಹಂತದಲ್ಲಿ ಅದು ನಮ್ಮ ಮನೆ ಅನಿಸುತ್ತಿತ್ತು ಅಷ್ಟು ಕನೆಕ್ಟ್ ಆದೆವು'
'ನಾನು ಚಿತ್ರದಲ್ಲಿ ಲೀಲಾ (Kantara leela) ಪಾತ್ರ ಮಾಡುತ್ತಿರುವೆ. ವಿದ್ಯಾಭ್ಯಾಸ ಮುಗಿಸಿ ಆಫೀಸ್ ಟ್ರೈನರ್ ಆಗಿ ಫಾರೆಸ್ಟ್ ಡಿಪಾರ್ಟ್ಮೆಂಟ್ ಸೇರಿಕೊಂಡಿರುವೆ'
'ಲೀಲಾ ತುಂಬಾ Calm and composed ಹುಡುಗಿ. ರಿಷಬ್ ಸರ್‌ಗೆ ಲೀಡಿಂಗ್ ಲೇಡಿಯಾಗಿ ಅಭಿನಯಿಸಿರುವೆ. ನನ್ನ ಪಾತ್ರ ನನಗೆ ತುಂಬಾ ಪಾಠ ಹೇಳಿಕೊಟ್ಟಿದೆ'
'ಮೌನವಾಗಿದ್ದು ನೂರಾರು ಪದಗಳನ್ನು ಜನರಿಗೆ ತಿಳಿಸಬಹುದು ಎಂದು ಈ ಚಿತ್ರ ಮತ್ತು ಲೀಲಾ ಪಾತ್ರ ನನಗೆ ಹೇಳಿಕೊಟ್ಟಿದೆ. ಕಲಾವಿದೆಯಾಗಿ ನನಗೆ ತುಂಬಾನೇ ಖುಷಿ ಕೊಟ್ಟಿದೆ'
'ರಿಷಬ್ ಸರ್ ಸೆಟ್‌ಗೆ ಎನರ್ಜಿ ಕೊಡುತ್ತಾರೆ. ನಾವು ವೀಕೆಂಡ್‌ನಲ್ಲೂ ಚಿತ್ರೀಕರಣ ಮಾಡಿದ್ದೀವಿ. ಪ್ರತಿಯೊಬ್ಬರು ಚಿತ್ರೀಕರಣಕ್ಕೆ ಹೇಳಿರುವ ಸಮಯಕ್ಕಿಂತ ಬೇಗ ಬರುತ್ತಿದ್ದರು, ಅಲ್ಲಿದ್ದು ಮಜಾ ಮಾಡುತ್ತಿದ್ದೆವು'
'ವೃತ್ತಿ ಜೀವನದಲ್ಲಿ ನಾನು ಎಷ್ಟು ಪಾತ್ರಗಳನ್ನು ಮಾಡಿದ್ದರೂ ಲೀಲಾ ಪಾತ್ರ ರಿಯಲ್ ಲೈಫ್‌ನಲ್ಲೂ ಪರಿಣಾಮ ಬೀರುತ್ತದೆ. ಆಕೆಯ ಶಾಂತ ಗುಣವನ್ನು ನಾನು ಅಳವಡಿಸಿಕೊಂಡಿರುವೆ' ಎಂದಿದ್ದಾರೆ ಸಪ್ತಮಿ.