ತಮಿಳಿನಿಂದ ಕನ್ನಡಕ್ಕೆ ಮರಳಿದ ಜಿಂಕೆ ಮರಿ ನಂದಿತಾ ಶ್ವೇತಾ: ಕಿಚ್ಚ ಸುದೀಪ್ ಸಪೋರ್ಟ್
ಆ್ಯಕ್ಷನ್ ಥ್ರಿಲ್ಲರ್ ‘ಬೆನ್ನಿ’ ಸಿನಿಮಾ ಮೂಲಕ ತುಂಬಾ ವರ್ಷಗಳ ಬಳಿಕ ಕನ್ನಡ ಸಿನಿಮಾದಲ್ಲಿ ನಟಿ ನಂದಿತಾ ಶ್ವೇತಾ ನಟಿಸಿದ್ದಾರೆ.

ನಂದಿತಾ ಶ್ವೇತಾ ಮರಳಿ ಕನ್ನಡಕ್ಕೆ ಬಂದಿದ್ದಾರೆ. ಆ್ಯಕ್ಷನ್ ಥ್ರಿಲ್ಲರ್ ‘ಬೆನ್ನಿ’ ಸಿನಿಮಾ ಮೂಲಕ ತುಂಬಾ ವರ್ಷಗಳ ಬಳಿಕ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ‘ಪೆಪೆ’ ಚಿತ್ರ ನಿರ್ದೇಶಿಸಿದ್ದ ಶ್ರೀಲೇಶ್ ಎಸ್ ನಾಯರ್ ನಿರ್ದೇಶನ ಮಾಡಿರುವ ಈ ಚಿತ್ರದ ಫಸ್ಟ್ ಲುಕ್ ಟೀಸರ್‌ಗೆ ಕಿಚ್ಚ ಸುದೀಪ್ ಧ್ವನಿ ನೀಡಿದ್ದಾರೆ.
‘ಹೊಂದಿಸಿ ಬರೆಯಿರಿ’ ಚಿತ್ರದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ತಂದೆ ಮತ್ತು ಮಗಳ ಬದುಕಿನ ಘಟನೆಗಳ ಸುತ್ತಾ ಈ ಸಿನಿಮಾ ಸಾಗುತ್ತದೆ.
ನಟಿ ಶ್ವೇತಾ ಇಲ್ಲಿ ಬೆನ್ನಿಯಾಗಿ ಟೈಲಟ್ ರೋಲ್ ಪ್ಲೇ ಮಾಡುತ್ತಿದ್ದಾರೆ. ತಂದೆ ಮತ್ತು ಮಗಳ ಬದುಕಿನಲ್ಲಿ ಎದುರಾಗುವ ಘಟನೆಗಳ ವಿರುದ್ಧ ನಡೆಯುವ ಪ್ರಸ್ತುತ ಕಾಲಘಟ್ಟ ಕಥಾಹಂದರವನ್ನು ಬೆನ್ನಿ ಹೊಂದಿದೆ.
ದಕ್ಷಿಣದ ಭಾರತದ ಪ್ರಮುಖ ನಟರು ‘ಬೆನ್ನಿ’ಗೆ ಜೊತೆಯಾಗಲಿದ್ದಾರೆ. ಕನ್ನಡ ಮಾತ್ರವಲ್ಲ ತೆಲುಗು, ತಮಿಳು ಹಾಗೂ ಮಲಯಾಳಂ ಈ ಚಿತ್ರ ಮೂಡಿ ಬರುತ್ತಿದೆ. ಸಂಡೇ ಸಿನಿಮಾಸ್ ಬ್ಯಾನರ್ನಡಿ ರಾಮೇನಹಳ್ಳಿ ಜಗನ್ನಾಥ್ ಚಿತ್ರವನ್ನು ನಿರ್ಮಿಸಿ ಪ್ರೆಸೆಂಟ್ ಮಾಡುತ್ತಿದ್ದಾರೆ.
ಸಚಿನ್ ಬಸ್ರೂರ್ ಸಂಗೀತ, ಗುರುಪ್ರಸಾದ್ ನಾರ್ನಾದ್ ಛಾಯಾಗ್ರಹಣ, ಮನು ಶೇಡ್ಗಾರ್ ಹಾಗೂ ರಂಜನ್ ನರಸಿಂಹಮೂರ್ತಿ ಸಂಕಲನ ಸಿನಿಮಾಕ್ಕಿದೆ. ವಿಶೇಷವಾಗಿ ಇದು ಮಹಿಳಾ ಪ್ರಧಾನ ಸಿನಿಮಾ.
ನಂದಿತಾ ಶ್ವೇತಾ ಈ ಹಿಂದೆ ಲೂಸ್‌ಮಾದ ನಾಯಕನಾಗಿ ನಟಿಸಿದ್ದ ‘ನಂದಾ ಲವ್ಸ್ ನಂದಿತಾ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ‘ಜಿಂಕೆ ಮರಿನಾ’ ಹಾಡಿನ ಮೂಲಕ ಖ್ಯಾತಿ ಗಳಿಸಿದ್ದ ಈ ನಟಿ ಆ ನಂತರ ತಮಿಳು ಚಿತ್ರರಂಗಕ್ಕೆ ಹೋಗಿ ಅಲ್ಲಿ 26ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.