ವಿವಾದಗಳ ಬೆನ್ನಲೆ ನಟಿ ಸಪ್ತಮಿ ಗೌಡ ಮದುವೆ ಲುಕ್ ಫೋಟೋ ವೈರಲ್!
ಮಧುಮಗಳಂತೆ ರೆಡಿಯಾಗಿರುವ ಸಪ್ತಮಿ ಗೌಡ ಫೋಟೋಗಳು ವೈರಲ್. ಗೊಂದಲದಲ್ಲಿ ಇರುವ ಅಭಿಮಾನಿಗಳಿಗೆ ಉತ್ತರ ಸಿಗುತ್ತಾ?

ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸಪ್ತಮಿ ಗೌಡ. ಕಾಂತಾರ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ನಟಿಯಾಗಿಬಿಟ್ಟರು.
ಇದಾದ ಮೇಲೆ ಹೊಂಬಾಳೆ ಫಿಲ್ಮಂ ನಿರ್ಮಾಣ ಮಾಡಿರುವ ಯುವ ಸಿನಿಮಾದಲ್ಲಿ ಯುವ ರಾಜ್‌ಕುಮಾರ್ ಜೊತೆ ನಟಿಸಿದ ಸಪ್ತಮಿ ಗೌಡ ಈಗ ವಿವಾದದಲ್ಲಿ ಸಲುಕಿಕೊಂಡಿದ್ದಾರೆ.
ನಟ ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಬೈರಪ್ಪ ದಾಂಪತ್ಯದಲ್ಲಿ ಬಿರುಕು ಮೂಡಲು ನಟಿ ಸಪ್ತಮಿ ಗೌಡ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ.
ಈ ವಿವಾದಗಳ ಬೆನ್ನಲೆ ಸಪ್ತಮಿ ಗೌಡ ಮಧುಮಗಳಂತೆ ಅಲಂಕಾರ ಮಾಡಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದ್ದಕ್ಕಿದ್ದಂತೆ ಸಪ್ತಮಿ ಗೌಡ ಮದುವೆ ಆಗುತ್ತಿದ್ದಾರೆ, ಸದ್ದಿಲ್ಲದೆ ಅಪ್ತಮಿ ಗೌಡ ಮದುವೆ ಆಗಿ ಎಂದೆಲ್ಲಾ ಸುದ್ದಿಯಾಗುತ್ತಿದೆ ಆದರೆ ಈ ಫೋಟೋಗಳ ಹಿಂದೆ ಇರುವ ಕಥೆನೇ ಬೇರೆ.
ಇನ್‌ಸ್ಟಾಗ್ರಾಂ ಖಾತೆ ಓಪನ್ ಮಾಡಿದ ಸಮಯದಿಂದ ಇದುವರೆಗೂ ಸಪ್ತಮಿ ಗೌಡ ಯಾವೆಲ್ಲಾ ಮದುವೆಗಳಲ್ಲಿ ಭಾಗಿಯಾಗಿದ್ದಾರೆ ಆಗ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಮಧುಮಗಳಂತೆ ಸಪ್ತಮಿಯನ್ನು ನೋಡಿದರೆ ಯಾರಿಗೆ ಆದರೂ ಒಮ್ಮೆ ಮದುವೆ ಯೊಚನೆ ಬರುವುದು ಸಹಜ. ಒಂದಲ್ಲ ಒಂದು ದಿನ ಸಪ್ತಮಿ ಮಧುಮಗಳಂತೆ ರೆಡಿ ಆಗಲೇ ಬೇಕು ಅಂತಾರೆ ಫ್ಯಾನ್ಸ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.