ನಟಿ ರಾಶಿಕಾ ಶೆಟ್ಟಿಯವರು ಯೋಗರಾಜ್ ಭಟ್ ನಿರ್ದೇಶನದ 'ಕಡಲು' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅಷ್ಟೇ ಅಲ್ಲ, ಕನ್ನಡ ಹಾಗೂ ತೆಲುಗು ಸೀರಿಯಲ್‌ಗಳಲ್ಲೂ ನಟಿಸಿದ್ದಾರೆ. ಕನ್ನಡದಲ್ಲಿ ‘ದೊರೆಸಾನಿ’, ತೆಲುಗಿನಲ್ಲಿ 'ಸಾವಿತ್ರಮ್ಮಗಾರಿ ಅಬ್ಬಾಯಿ' ಸೀರಿಯಲ್‌ನಲ್ಲಿ ನಟಿಸಿದ್ದಾರೆ ರಾಶಿಕಾ. 

ನಟಿ ರಾಶಿಕಾ ಶೆಟ್ಟಿ ಹಿನ್ನೆಲೆ

ಸದ್ಯಕ್ಕೆ ಕನ್ನಡದ ಯಾವುದೇ ಸಿನಿಮಾಗಳಿಗಿಂತ ಹೆಚ್ಚಾಗಿ ಮನರಂಜನಾಪ್ರಿಯರನ್ನು ರಂಜಿಸುತ್ತಿರುವುದು ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ. ಈ ಶೋದಲ್ಲಿ ಸ್ಪರ್ಧಿಯಾಗಿ ಮನೆಯೊಳಗೆ ಇರುವ ಸ್ಪರ್ಧಿಗಳಲ್ಲಿ ನಟಿ ರಾಶಿಕಾ ಶೆಟ್ಟಿ (Rashika Shetty) ಕೂಡ ಒಬ್ಬರು. ಈ ನಟಿಯ ಬಗ್ಗೆ ಹಲವು ಜನರಿಗೆ ಮಾಹಿತಿ ಅಷ್ಟೇನೂ ಇಲ್ಲ. ಅಚ್ಚರಿಯ ಸಂಗತಿ ಏನೆಂದರೆ, ರಾಶಿಕಾ ಶೆಟ್ಟಿ ಬಾಲನಟಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದವರು. ಸದ್ಯ ಬಿಗ್ ಬಾಸ್ ಮನೆಯಲ್ಲಿ ಮಿಂಚುತ್ತಿದ್ದಾರೆ. ಹಾಗಿದ್ದರೆ ರಾಶಿಕಾ ಶೆಟ್ಟಿ ಯಾರು?

ನಟಿ ರಾಶಿಕಾ ಶೆಟ್ಟಿಯವರು ಮೂಲತಃ ಚಿಕ್ಕಮಗಳೂರಿನವರು. ಚಿಕ್ಕಂದಿನಲ್ಲೇ ಅವರು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಸ್ಯಾಂಡಲ್‌ವುಡ್ ನಟಿ ರಮ್ಯಾ-ರಕ್ಷಿತಾ ಹಾಗೂ ಡೈಸಿ ಬೋಪಣ್ಣ ಅಭಿನಯದ 'ತನನಂ ತನನಂ' ಸಿನಿಮಾದ 'ಕಂಡೆಕಂಡೆ ಗೋವಿಂದನಾ' ಹಾಡಿನಲ್ಲಿ ಈ ರಾಶಿಕಾ ಶೆಟ್ಟಿ ನಟಿಸಿದ್ದಾರೆ. ಆದರೆ ಆಗಿನ್ನೂ ಅವರು ತುಂಬಾ ಚಿಕ್ಕವರು, 1ನೇ ಕ್ಲಾಸಿನಲ್ಲಿ ಓದುತ್ತಿದ್ದಾಗ ಆ ಚಿತ್ರದ ಹಾಡಿನಲ್ಲಿ ರಾಶಿಕಾ ಕಾಣಿಸಿಕೊಂಡಿದ್ದರು.

ಯೋಗರಾಜ್ ಭಟ್ ನಿರ್ದೇಶನದ 'ಕಡಲು' ಸಿನಿಮಾದಲ್ಲಿ ನಾಯಕಿ

ಬಳಿಕ, ಬಹಳಷ್ಟು ಜನರಿಗೆ ಗೊತ್ತಿರುವಂತೆ ನಟಿ ರಾಶಿಕಾ ಶೆಟ್ಟಿಯವರು ಯೋಗರಾಜ್ ಭಟ್ ನಿರ್ದೇಶನದ 'ಕಡಲು' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅಷ್ಟೇ ಅಲ್ಲ, ಕನ್ನಡ ಹಾಗೂ ತೆಲುಗು ಸೀರಿಯಲ್‌ಗಳಲ್ಲೂ ನಟಿಸಿದ್ದಾರೆ. ಕನ್ನಡದಲ್ಲಿ 'ದೊರೆಸಾನಿ' ಧಾರಾವಾಹಿಯಲ್ಲಿ ನಟಿಸಿರುವ ರಾಶಿಕಾ ಶೆಟ್ಟಿಯವರು ತೆಲುಗಿನಲ್ಲಿ 'ಸಾವಿತ್ರಮ್ಮಗಾರಿ ಅಬ್ಬಾಯಿ' ಸೀರಿಯಲ್‌ನಲ್ಲಿ ನಟಿಸಿ ಟಾಲಿವುಡ್‌ ಮನೆಮನೆಗಳಲ್ಲೂ ಜನಪ್ರಿಯರಾಗಿದ್ದಾರೆ. ಇಂತಪ್ಪ ರಾಶಿಕಾ ಶೆಟ್ಟಿ ಇದೀಗ ಬಿಗ್ ಬಾಸ್ ಮನೆಯಲ್ಲಿ ಆಟ ಆಡುತ್ತ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ.

ಸದ್ಯ ಬಿಗ್ ಬಾಸ್ ಕನ್ನಡ ಶೋದಲ್ಲಿ ರಾಶಿಕಾ ಶೆಟ್ಟಿ

ಸದ್ಯ ಬಿಗ್ ಬಾಸ್ ಕನ್ನಡ ಶೋದಲ್ಲಿ ರಾಶಿ ಶೆಟ್ಟಿಯವರು ತಮ್ಮದೇ ಆದ ಸ್ಟೈಲಿನಲ್ಲಿ ಗೇಮ್ ಆಡುತ್ತಿದ್ದಾರೆ. ಅವರಿಗೆ ಅವರದೇ ಆದ ಅಭಿಮಾನಿ ಬಳಗವಿದೆ. ಚಿಕ್ಕಮಗಳೂರ ಮಲ್ಲಿಗೆ ರಾಶಿ ಶೆಟ್ಟಿ ಅವರು ಬಿಗ್ ಬಾಸ್ ಶೋ ಫೈನಲಿಸ್ಟ್ ಆಗಲಿ, ವಿನ್ನರ್ ಅಗಲಿ ಎಂದು ಅವರ ಫ್ಯಾನ್ಸ್ ಬಳಗ ಸಹಜವಾಗಿಯೇ ಆಶಿಸುತ್ತಿದೆ. ಮುಂದೇನು ಎನ್ನುವುದನ್ನು ಕಾದು ನೋಡಬೇಕಿದೆ. ಸೋಷಿಯಲ್ ಮೀಡಿಯಾಗಳಲ್ಲಿ ರಾಶಿಕಾ ಫ್ಯಾನ್ಸ್ ಅವರಿಗೆ 'ಆಲ್‌ ದಿ ಬೆಸ್ಟ್‌' ಹೇಳುತ್ತಿದ್ದಾರೆ.