- Home
- Entertainment
- Sandalwood
- ಕಮಲ್ ಹಾಸನ್ ಮುಂದೆ ನಿಲ್ಲುವ ಶಕ್ತಿ, ಪ್ರತಿಭೆ ಕಿಚ್ಚ ಸುದೀಪ್ ಅವರಿಗೆ ಇದೆ: ನಿರ್ದೇಶಕ ಜೋಗಿ ಪ್ರೇಮ್
ಕಮಲ್ ಹಾಸನ್ ಮುಂದೆ ನಿಲ್ಲುವ ಶಕ್ತಿ, ಪ್ರತಿಭೆ ಕಿಚ್ಚ ಸುದೀಪ್ ಅವರಿಗೆ ಇದೆ: ನಿರ್ದೇಶಕ ಜೋಗಿ ಪ್ರೇಮ್
ಕಿಚ್ಚ ಸುದೀಪ್ಗೆ ‘ಕಿಂಗ್ ಕಿಚ್ಚ’ ಎಂಬ ಹೊಸ ಬಿರುದು ಕೊಟ್ಟಿದ್ದಾರೆ ನಿರ್ದೇಶಕ ಜೋಗಿ ಪ್ರೇಮ್. ಕಮಲ್ ಹಾಸನ್ಗೆ ಸಾಟಿಯಾಗಬಲ್ಲ ಪ್ರತಿಭೆ ಸುದೀಪ್ ಅವರಲ್ಲಿದೆ ಎಂದು ಹೇಳಿರುವ ಪ್ರೇಮ್ ಮಾತು ಈಗ ಗಮನ ಸೆಳೆಯುತ್ತಿದೆ.

ಸುದೀಪ್ ಪ್ರತಿಭೆಗೆ ಮನಸೋತ ಜೋಗಿ ಪ್ರೇಮ್
‘ಕಮಲ್ ಹಾಸನ್ ಅವರಿಗೆ ಸಮನಾಗಿ ಸ್ಪರ್ಧೆ ನೀಡುವ, ಅವರ ಮುಂದೆ ನಿಲ್ಲುವ ಶಕ್ತಿ ಮತ್ತು ಪ್ರತಿಭೆ ಇರುವುದು ಕಿಚ್ಚ ಸುದೀಪ್ ಅವರಿಗೆ ಮಾತ್ರ’. ಹೀಗೆ ಹೇಳಿದ್ದು ನಿರ್ದೇಶಕ ಜೋಗಿ ಪ್ರೇಮ್.
ಹೊಸ ಬಿರುದು
ಅದು ‘ದಾದಾ ಆನ್ ಹಾಲಿಡೇ’ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ. ಈಗಾಗಲೇ ಸುದೀಪ್ ಅವರಿಗೆ ಕಿಚ್ಚ, ಅಭಿನಯದ ಚಕ್ರವರ್ತಿ, ಬಾದ್ಷಾ ಹೀಗೆ ಹಲವು ಸ್ಟಾರ್ ಬಿರುದುಗಳಿವೆ. ಇದರ ಸಾಲಿಗೆ ಈಗ ಹೊಸ ಬಿರುದು ಸೇರಿಕೊಂಡಿದೆ. ಅದುವೇ ‘ಕಿಂಗ್ ಕಿಚ್ಚ’ ಎಂಬುದು. ಈ ಬಿರುದು ನೀಡಿರುವುದು ನಿರ್ದೇಶಕ ಜೋಗಿ ಪ್ರೇಮ್ ಅವರು.
ಅವರಿಗೆ ಅವರೇ ಸಾಟಿ
ಈ ಬಗ್ಗೆ ನಿರ್ದೇಶಕ ಪ್ರೇಮ್ ಮಾತನಾಡುತ್ತಾ, ನಟ ಸುದೀಪ್ ಅವರ ಜೊತೆಗೆ ನನ್ನದು ತುಂಬಾ ಆತ್ಮೀಯ ಒಡನಾಟ. ಅವರ ಜೊತೆಗೆ ಸಾಕಷ್ಟು ಟ್ರಾವಲ್ ಮಾಡಿದ್ದೇನೆ. ಅವರ ವ್ಯಕ್ತಿತ್ವ, ಅವರ ಗುಣ ಏನೆಂಬುದು ನನಗೆ ಗೊತ್ತು. ಅಲ್ಲದೆ ನಟನೆಯಲ್ಲೂ ಅವರನ್ನು ಮೀರಿಸಲು ಸಾಧ್ಯವಿಲ್ಲ. ಅವರಿಗೆ ಅವರೇ ಸಾಟಿ. ಕಲಾವಿದ ಎಂದರೆ ಭಾರತದಲ್ಲಿ ನೆನಪಾಗುವುದು ಕಮಲ್ ಹಾಸನ್.
ಪ್ರತಿಭಾವಂತ ಕಲಾವಿದ ಸುದೀಪ್
ಅಂಥ ಕಮಲ್ ಹಾಸನ್ ಅವರಿಗೇ ಸ್ಪರ್ಧೆ ಕೊಡುವ ಮತ್ತು ಅವರ ಮುಂದೆ ನಿಲ್ಲುವ ಭಾರತದ ಮತ್ತೊಬ್ಬ ಪ್ರತಿಭಾವಂತ ಕಲಾವಿದ ಯಾರಾದರು ಇದ್ದಾರೆ ಅಂದರೆ ಅದು ಸುದೀಪ್ ಮಾತ್ರ. ಈ ಕಾರಣಕ್ಕೆ ಅವರ ಹೆಸರಿಗೆ ನಾನು ಕಿಂಗ್ ಕಿಚ್ಚ ಎನ್ನುವ ಬಿರುದು ಕೊಟ್ಟಿದ್ದೇನೆ ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

