- Home
- Entertainment
- Sandalwood
- Ekka Box Office Collection: ನಿರ್ಮಾಪಕರ ಜೇಬು ತುಂಬಿಸ್ತಿದೆ ಬ್ಯಾಂಗಲ್ ಬಂಗಾರಿ; ಈವರೆಗಿನ ಕಲೆಕ್ಷನ್ ಎಷ್ಟು?
Ekka Box Office Collection: ನಿರ್ಮಾಪಕರ ಜೇಬು ತುಂಬಿಸ್ತಿದೆ ಬ್ಯಾಂಗಲ್ ಬಂಗಾರಿ; ಈವರೆಗಿನ ಕಲೆಕ್ಷನ್ ಎಷ್ಟು?
Ekka Movie Box Office Collection: ಕನ್ನಡ ಚಿತ್ರರಂಗದಲ್ಲಿ ಚೇತರಿಕೆ ಕಾಣದೇ ಇರುವ ಸಮಯದಲ್ಲಿ 'ಎಕ್ಕ' ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಹಳ್ಳಿಯಿಂದ ಬೆಂಗಳೂರಿಗೆ ಬರುವ ಮುತ್ತು ಎಂಬಾತನ ಜೀವನದಲ್ಲಿ ನಡೆಯುವ ಘಟನೆಗಳೇ ಚಿತ್ರದ ಕಥಾವಸ್ತು.

ಕನ್ನಡ ಚಿತ್ರರಂಗ
ಕನ್ನಡ ಚಿತ್ರರಂಗ ಹಲವು ಸವಾಲುಗಳನ್ನು ಎದುರಿಸುತ್ತಿದೆ. 2025ರ ಅರ್ಧ ವರ್ಷ ಕಳೆದ್ರೂ ಕನ್ನಡ ಚಿತ್ರರಂಗದಲ್ಲಿ ಚೇತರಿಕೆ ಕಾಣುತ್ತಿಲ್ಲ. ಪಕ್ಕದ ತಮಿಳು, ಮಲಯಾಳಂ ಮತ್ತು ತೆಲಗು ಚಿತ್ರರಂಗ ಈ ವರ್ಷದಲ್ಲಿ ಉತ್ತರ ಪ್ರದರ್ಶನ ನೀಡುವ ಮೂಲಕ ಬಾಕ್ಸ್ ಆಫಿಸ್‌ನಲ್ಲಿಯೂ ಸದ್ದು ಮಾಡುತ್ತಿವೆ. ಇದೀಗ ಸ್ಯಾಂಡಲ್‌ವುಡ್‌ಗೆ ಸಮಾಧಾನಕರ ಸುದ್ದಿಯೊಂದು ಬಂದಿದೆ.
ಉತ್ತಮ ಪ್ರದರ್ಶನ
ಈ ವಾರ ಬಿಡುಗಡೆಯಾಗಿರುವ ಎಕ್ಕ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಗಳಿಕೆಯಲ್ಲೂ ಮುನ್ನುಗ್ಗುತ್ತಿದೆ. ರೋಹಿತ್ ಪದಕಿ ನಿರ್ದೇಶನದ, ದೊಡ್ಮನೆ ಕುಡಿ ಯುವ ರಾಜ್‌ಕುಮಾರ್ ನಾಯಕ ನಟನಾಗಿ ನಟಿಸಿರುವ ಎಕ್ಕ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಸುದ್ದಿ ಮಾಡುತ್ತಿದೆ. ಜುಲೈ 18ರಂದು ಬಿಡುಗಡೆಯಾದ ಎಕ್ಕ ಸಿನಿಮಾ, ವೀಕೆಂಡ್ ಬಳಿಕ ವೀಕ್ ಡೇಸ್‌ನಲ್ಲಿಯೂ ಪ್ರೇಕ್ಷಕರನ್ನು ಸೆಳೆಯುತ್ತಿದೆ.
ಎಕ್ಕ ಸಿನಿಮಾ ಗಳಿಕೆ
ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದ ಎಕ್ಕ ಸಿನಿಮಾ ಗಳಿಕೆಯಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ವರ್ಷ ಬಿಡುಗಡೆಯಾದ ಕನ್ನಡ ಚಿತ್ರಗಳಲ್ಲಿ ಅತ್ಯುತ್ತಮ ಓಪನಿಂಗ್ ಕಲೆಕ್ಷನ್ ಪಡೆದ ಎಕ್ಕ ಚಿತ್ರದ ಇತ್ತೀಚಿನ ಗಳಿಕೆಯ ವರದಿಯೂ ಹೊರಬಿದ್ದಿದೆ. ಈವರೆಗೆ ಎಕ್ಕ ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ ಕಲೆಕ್ಷನ್ ಮಾಡಿದೆಷ್ಟು ಗೊತ್ತಾ?
10 ಕೋಟಿ
ಕರ್ನಾಟಕ ಟಾಕೀಸ್ ಸೇರಿದಂತೆ ಕನ್ನಡದ ಪ್ರಮುಖ ಚಿತ್ರ ಗಳಿಕೆ ಟ್ರ್ಯಾಕರ್‌ಗಳ ಪ್ರಕಾರ, ಎಕ್ಕಾ ಸಿನಿಮಾ ಈಗಾಗಲೇ 10 ಕೋಟಿ ಗಳಿಸಿದೆ. ಈ ವರ್ಷ ಕನ್ನಡ ಚಿತ್ರರಂಗದಲ್ಲಿ 10 ಕೋಟಿ ಗ್ರಾಸ್ ಗಳಿಸಿದ ಮೊದಲ ಚಿತ್ರ ಇದಾಗಿದೆ. ಸಂಜನಾ ಆನಂದ್, ಸಂಪದ ಹುಲಿವಾನ, ಅತುಲ್ ಕುಲ್ಕರ್ಣಿ, ಆದಿತ್ಯ, ಶ್ರುತಿ, ಸಾಧು ಕೋಕಿಲ, ರಾಹುಲ್ ದೇವ್ ಶೆಟ್ಟಿ, ಪೂರ್ಣಚಂದ್ರ ಮೈಸೂರ್, ಅರುಣ್ ಸಾಗರ್, ಹರಿಣಿ ಶ್ರೀಕಾಂತ್, ಡಾ. ಸೂರಿ, ಪುನೀತ್ ರುದ್ರನಾಗ್, ಅರ್ಚನಾ ಕೊಟ್ಟಿಗೆ, ಜಾಲಿ ಜಾಕ್, ಬೇಬಿ ಆರ್ಯ ಶ್ರೀರಾಮ್ ಮುಂತಾದವರು ಚಿತ್ರದ ಇತರ ಪಾತ್ರಗಳಲ್ಲಿ ನಟಿಸಿದ್ದಾರೆ.
ಎಕ್ಕ ಚಿತ್ರತಂಡ
ಪಿಆರ್‌ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲಂಸ್, ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ಗಳಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ-ಭೋಗೇಂದ್ರ, ಕಾರ್ತಿಕ್ ಗೌಡ, ಯೋಗಿ ಜಿ ರಾಜ್ ಚಿತ್ರವನ್ನು ನಿರ್ಮಿಸಿದ್ದಾರೆ. ಸತ್ಯ ಹೆಗ್ಡೆ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ಮತ್ತು ದೀಪು ಎಸ್ ಕುಮಾರ್ ಸಂಕಲನವಿದೆ.
ಚಿತ್ರದ ಕಥೆ ಏನು?
ಹಳ್ಳಿಯಲ್ಲಿದ್ದ ಅಮಾಯಕ ಮುತ್ತು ಜೀವನೋಪಾಯಕ್ಕೆ ಕೆಲಸ ಅರಸಿ ಬೆಂಗಳೂರಿಗೆ ಬರುತ್ತಾನೆ. ಒಳ್ಳೆ ದಾರಿಯಲ್ಲಿ ದುಡಿದು ಜೀವನ ನಡೆಯೋ ಮುತ್ತು ಕೈಗೆ ರಕ್ತ ಅಂಟಿಕೊಳ್ಳಿತ್ತೆ. ಮುಂದೇನಾಗುತ್ತೆ ಅನ್ನೋದು ಸಿನಿಮಾದಲ್ಲಿ ನೋಡ್ಬೇಕು. 'ರತ್ನನ್ ಪ್ರಪಂಚ' ಕಟ್ಟಿದ್ದ ನಿರ್ದೇಶಕ ರೋಹಿತ್ ಪದಕಿ ಈ ಬಾರಿ ಯುವ ರಾಜ್ಕುಮಾರ್ಗಾಗಿ 'ಎಕ್ಕ'ದ ಎಲೆ ಹಾಕಿದ್ದಾರೆ. ಇದೊಂದು ಪಕ್ಕಾ ಲೋಕಲ್ ಸ್ಟೋರಿ.