- Home
- Entertainment
- Sandalwood
- ಟೋಬಿ ಬೆಡಗಿ ಚೈತ್ರಾ ಆಚಾರ್ ನೋಡಿದವ್ರೆಲ್ಲಾ ಫುಲ್ ಶಾಕು: ಏನಮ್ಮ ನಿನ್ನ ಅವತಾರ ಎಂದ ಫ್ಯಾನ್ಸ್!
ಟೋಬಿ ಬೆಡಗಿ ಚೈತ್ರಾ ಆಚಾರ್ ನೋಡಿದವ್ರೆಲ್ಲಾ ಫುಲ್ ಶಾಕು: ಏನಮ್ಮ ನಿನ್ನ ಅವತಾರ ಎಂದ ಫ್ಯಾನ್ಸ್!
ನಟಿ ಚೈತ್ರಾ ಜೆ ಆಚಾರ್, ಕನ್ನಡದ ಭರವಸೆಯ ನಟಿಯರಲ್ಲೊಬ್ಬರು. ಚೈತ್ರಾ ನಟಿಸಿರುವ 'ಟೋಬಿ' ಸಿನಿಮಾ ಈ ಹಿಂದೆ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಚೈತ್ರಾ ನಟನೆಗೆ ಭರಪೂರ ಪ್ರಶಂಸೆ ವ್ಯಕ್ತವಾಗಿತ್ತು.

ಸ್ಯಾಂಡಲ್‌ವುಡ್ ಬ್ಯೂಟಿ ಚೈತ್ರಾ ಆಚಾರ್ ಅವರು ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸಂಚಲನ ಮೂಡಿಸುತ್ತಲೇ ಇರುತ್ತಾರೆ. ಇದೀಗ ‘ಟೋಬಿ’ ಹುಡುಗಿಯ ನ್ಯೂ ಲುಕ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ.
ಕಪ್ಪು ಬಣ್ಣದ ಶಾರ್ಟ್ ಟಾಪ್ ಮತ್ತು ನೀಲಿ ಬಣ್ಣದ ಜೀನ್ಸ್ ತೊಟ್ಟು ನಟಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ನಯಾ ಲುಕ್ ಸಖತ್ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ವಿವಿಧ ಭಂಗಿಯಲ್ಲಿ ಚೈತ್ರಾ ಕ್ಯಾಮೆರಾ ಕಣ್ಣಿಗೆ ಪೋಸ್ ಮಾಡಿರೋದು ಪಡ್ಡೆಹೈಕ್ಳ ಗಮನ ಸೆಳೆದಿದೆ.
ಚೈತ್ರಾ ಆಚಾರ್ Shutter- speed ಎಷ್ಟು..? ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ‘ಟೋಬಿ’ ಸುಂದರಿಯ ಮೈಮಾಟಕ್ಕೆ ಪಡ್ಡೆಹುಡುಗರು ಹಾಟ್, ಸೆಕ್ಸಿ, ಊಫ್, ಮಿನಿ ಆಲಿಯಾ ಭಟ್ ತರ ಕಾಣಿಸುತಿದ್ದೀರಿ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಇತ್ತೀಚೆಗೆ ಚೈತ್ರಾ ಫೋಟೋಶೂಟ್‌ವೊಂದಕ್ಕೆ ನೆಗೆಟಿವ್ ಕಾಮೆಂಟ್ ಮತ್ತು ಟ್ರೋಲ್ ಆಗಿತ್ತು. ಅದಕ್ಕೆ ಖಡಕ್ ಆಗಿ ಚೈತ್ರಾ ರಿಯಾಕ್ಟ್ ಮಾಡಿದ್ದರು. ದೇವರ ಹಾಡು ಹಾಡ್ತಾರೆ ಆದರೆ ಹಾಕುವ ಬಟ್ಟೆ ಈ ತರಹ ಎಂದು ಕಾಮೆಂಟ್ ಮಾಡುವವರಿಗೆ ನಟಿ ತಕ್ಕ ಉತ್ತರ ನೀಡಿದ್ದರು.
ಬೇರೇ ಮನೆ ಹೆಣ್ಣು ಮಗಳ ಮರ್ಯಾದೆ ತೆಗೆಯಬೇಕು ಎಂದು ಪಣ ತೊಟ್ಟವರಿಗೆ ಏನು ಹೇಳೋದು ಅಂತಾ ನಟಿ ಗರಂ ಆಗಿದ್ದರು. ನನಗೆ ಯಾವ ವಿಚಾರ ತಪ್ಪು ಅಥವಾ ಸರಿ. ಎಲ್ಲಿ ಯಾವ ತರಹ ಇರಬೇಕು ಅನ್ನೋದು ಚೆನ್ನಾಗಿ ಗೊತ್ತು. ನಾನು ಬೆಳೆದು ಹಾದಿಯಲ್ಲಿ ನನ್ನ ಪೋಷಕರು ಮತ್ತು ಶಿಕ್ಷಕರು ನನಗೆ ಕಲಿಸಿ ಕೊಟ್ಟಿದ್ದಾರೆ ಎಂದು ನಟಿ ಪ್ರತಿಯುತ್ತರ ನೀಡಿದ್ದರು.
ನನ್ನ ಸಿನಿಮಾಗಳ ಮೂಲಕ ಜನಕ್ಕೆ ರೀಚ್ ಆಗುತ್ತೀದ್ದಿನಿ. ನಾನು ಏನೋ ಕೆಲಸ ಮಾಡಿದಾಗ ಒಳ್ಳೆತನದಿಂದ ಹಾರೈಸೋದು ತುಂಬಾ ಕಮ್ಮಿ. ಅವರನ್ನ ಕೆಳಗೆ ಇಳಿಸುವಂತಹ ಮನಸ್ಥಿತಿ ಇರೋರು. ಯಾವುದೇ ರೀತಿಯ ಪೋಸ್ಟ್ ಇದ್ದರು ಕೆಟ್ಟ ಕಾಮೆಂಟ್‌ಗಳನ್ನೇ ಮಾಡುತ್ತಾರೆ ಅಂತಹವರಿಗೆ ಏನು ಹೇಳೋದು ಎಂದು ಅಸಮಾಧಾನ ಹೊರಹಾಕಿದ್ದರು.
2023ರಲ್ಲಿ ‘ಟೋಬಿ’ ಮತ್ತು ‘ಸಪ್ತಸಾಗರದಾಚೆ ಎಲ್ಲೋ’ ಪಾರ್ಟ್ 2 ಈ ಚಿತ್ರಗಳು ಚೈತ್ರಾ ಆಚಾರ್ ಕೆರಿಯರ್‌ಗೆ ಬಿಗ್ ಬ್ರೇಕ್ ನೀಡಿದೆ. ಇದೀಗ ದೀಕ್ಷಿತ್ ಶೆಟ್ಟಿ ಜೊತೆಗಿನ ‘ಬ್ಲಿಂಕ್’ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳು ಚೈತ್ರಾ ಕೈಯಲ್ಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.