ಮದುವೆ ಸಿಂಪಲ್ ಆಗಿದ್ರೂ ಜೀವನ ಗ್ರಾಂಡ್ ಆಗಿದೆ; 24ನೇ ವೆಡ್ಡಿಂಗ್ ಅನಿವರ್ಸರಿ ಖುಷಿಯಲ್ಲಿ ಶಾಲಿನಿ ಸತ್ಯನಾರಾಯಣ್
24 ವರ್ಷ ಫುಲ್ ಖುಷಿಯಾಗಿರುತ್ತೀರಾ ಅಲ್ವಾ ಸರ್...ಮೇಡಂ ವಸಿ ಕಾಮಿಡಿ ಮಾಡ್ತಾರಾ? ನೆಟ್ಟಿಗರ ಕಾಮೆಂಟ್ ವೈರಲ್...
Shalini Sathyanarayan ಕನ್ನಡ ಕಿರುತೆರೆಯ ಜನಪ್ರಿಯ ನಟಿ ಹಾಗೂ ನಿರೂಪಕಿ ಶಾಲಿನಿ ಸತ್ಯನಾರಾಯಣ್ ಹಾಗೂ ಅನಿಲ್ ಕುಮಾರ್ ತಮ್ಮ 24ನೇ ವೆಡ್ಡಿಂಗ್ ಆನಿವರ್ಸರಿ ಆಚರಿಸಿಕೊಳ್ಳುತ್ತಿದ್ದಾರೆ.
'24 ವರ್ಷ ಒಟ್ಟಿಗೆ ಜೀವನ ಹಂಚಿಕೊಂಡಿದ್ದೀವಿ, ಒಬ್ಬರಿಗೊಬ್ಬರು ಜೊತೆಯಾಗಿ ನಿಂತಿದ್ದೀವಿ. ಮದುವೆ ಸಿಂಪಲ್ ಆಗಿದ್ದರೂ ಜೀವನ ಗ್ರ್ಯಾಂಡ್ ಆಗಿದೆ' ಎಂದು ಶಾಲಿನಿ ಬರೆದುಕೊಂಡಿದ್ದಾರೆ.
'ನಾವು ದಿನವೂ ಒಳ್ಳೆಯ ಪಾರ್ಟ್ನರ್ಗಳಾಗಿ ಇರಬೇಕು ಎಂದು ಆಯ್ಕೆ ಮಾಡಿಕೊಂಡವರು. ಪ್ರೀತಿಗಿಂತ ಹೆಚ್ಚಾಗಿ ಏನೋ ನಮ್ಮನ್ನು ಒಟ್ಟಿಗೆ ಇರಿಸಿದೆ. 25ನೇ ವರ್ಷಕ್ಕೆ ಕಾಲಿಡುವ ಖುಷಿಯಲ್ಲಿದ್ದೀವಿ' ಎಂದ ಶಾಲಿನಿ.
'ನಾವಿಬ್ಬರೂ ಪರಿಚಯ ಆಗಿ 24 ವರ್ಷಗಳೇ ಕಳೆದಿದೆ.ಸಾಮಾನ್ಯವಾಗಿ ನಾನು ಯಾರೊಟ್ಟಿಗೂ ಬೆರೆಯುವ ವ್ಯಕ್ತಿ ಅಲ್ಲ. ಯಾರು ಅಂದ್ರೆ ಯಾರ ಹತ್ರಾನೂ ಮಿಂಗಲ್ ಆಗಲ್ಲ. ಆಗಬೇಕು ಅಂದ್ರೆ ನನಗೆ ತುಂಬಾ ಕಷ್ಟ ಆಗುತ್ತದೆ' ಎಂದು ಶಾಲಿನಿ ಬಗ್ಗೆ ವೇದಿಕೆ ಮೇಲೆ ಪತಿ ಒಮ್ಮೆ ಮಾತನಾಡಿದ್ದರು.
'ಯಾಕೆ ನಾನು ಮತ್ತೊಬ್ಬರ ಜೊತೆ ಬೆರೆಯುವುದಿಲ್ಲ ಅಂದ್ರೆ ಫುಲ್ ಪ್ಯಾಕೇಜ್ ಆಗಿ ನನ್ನ ಪತ್ನಿ ಇದ್ದಾಳೆ. ಶಾಲಿನಿ ನನ್ನ ಜೊತೆ ಇದ್ರೆ ಯಾವ ಕೊರತೆಯೂ ಇರೋಲ್ಲ'
'ಸ್ನೇಹಿತರ ಜೊತೆ ಬೆರೆಯುವುದಿಲ್ಲ ಕುಟುಂಬಸ್ಥರ ಜೊತೆ ಬರೆಯುವುದಿಲ್ಲ ನಾನು ಮನೆಯಿಂದ ಹೊರ ಹೋಗುವುದೇ ಇಲ್ಲ ಯಾಕೆ ಹೋಗಲ್ಲ ಅಂದ್ರೆ ಶಾಲಿನಿಯೇ ನಂಗೆ ಎಲ್ಲವೂ ಆಗಿ ಸಪೋರ್ಟ್ ಮಾಡುತ್ತಾಳೆ'
'ಮದುವೆಯಾದ ದಿನದಿಂದ ಇದುವರೆಗೂ ನಮ್ಮ ದಿನ ಆರಂಭ ಆಗುವುದೇ ಒಂದು ನಗು, ಮುತ್ತು ಮತ್ತು ಅಪ್ಪುಗೆಯಿಂದ. ಅದೇ ರೀತಿ ರಾತ್ರಿಯೂ ನಾವು ತಬ್ಬಿಕೊಂಡು ಮುತ್ತು ಕೊಟ್ಟು ಮಲಗುತ್ತೇವೆ' ಎಂದಿದ್ದಾರೆ ಅನಿಲ್.