- Home
- Entertainment
- Sandalwood
- ಗಂಡ ಮಕ್ಳು ನಂಗೂ ಬೇಕು, ಸಮಯ ಸಿಕ್ಕರೆ ಮದ್ವೆ ಮಾಡ್ಕೊಳ್ತೀನಿ: 'ಕುರುಬನ ರಾಣಿ' ನಟಿ ಹೇಳಿಕೆ ವೈರಲ್
ಗಂಡ ಮಕ್ಳು ನಂಗೂ ಬೇಕು, ಸಮಯ ಸಿಕ್ಕರೆ ಮದ್ವೆ ಮಾಡ್ಕೊಳ್ತೀನಿ: 'ಕುರುಬನ ರಾಣಿ' ನಟಿ ಹೇಳಿಕೆ ವೈರಲ್
ನಗ್ಮಾ ಮದುವೆ ಅಗಿದ್ದಾರಾ? ಮದುವೆ ಆಗಿಲ್ವಾ? ಯಾಕೆ ಪದೇ ಪದೇ ಗಾಸಿಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ? ಎಲ್ಲದಕ್ಕೂ ಇಲ್ಲಿದೆ ಉತ್ತರ...

1974ರ ಡಿಸೆಂಬರ್ 25ರಂದು ಹುಟ್ಟಿರುವ ನಗ್ಮಾ ಅವರು ವಯಸ್ಸು 48 ಆದರೂ ಇದುವರೆಗೂ ಸಿಂಗಲ್ ಆಗಿದ್ದಾರೆ. ನಟಿ ನಗ್ಮಾ 2008 ರಿಂದ ಚಿತ್ರರಂಗಕ್ಕೆ ಬ್ರೇಕ್ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದರು.
ರಾಜಕೀಯದಲ್ಲಿ ಸಕ್ರಿಯರಾಗಿರುವ ನಗ್ಮಾ ಮದುವೆ ವಿಚಾರ ಹಲವು ಸಲ ಸುದ್ದಿಯಾಗಿದೆ. ಅನೇಕರು ಹೆಸರು ಕೇಳಿ ಬಂದಿತ್ತು. ಮಾಜಿ ನಾಯಕ ಸೌರವ್ ಗಂಗೂಲಿ ಜೊತೆಗಿನ ಪ್ರೇಮ ಪ್ರಕರಣ ವೈರಲ್ ಆಗಿತ್ತು.
ಅದಾದ ಬಳಿಕ ಮದುವೆಯಾದ ಶರತ್ ಕುಮಾರ್, ಮನೋಜ್ ತಿವಾರಿ ಮತ್ತು ರವಿ ಕಿಶಾನ್ಜತೆಯೂ ಹೆಸರು ಕೇಳಿಬಂದಿತ್ತು. ಹೀಗಾಗಿ ಮದುವೆ ಬಗ್ಗೆ ಯಾರಿಗೂ ಅಷ್ಟಾಗಿ ಕ್ಲಾರಿಟಿ ಇರಲಿಲ್ಲ...
ಇದೀಗ ತಮ್ಮ ಮದುವೆಯ ಕುರಿತು ನಗ್ಮಾ ಮೌನ ಮುರಿದಿದ್ದಾರೆ. ನಾನು ಮದುವೆ ಆಗುವುದಿಲ್ಲ ಎಂದು ಯಾವತ್ತಿಗೂ ಹೇಳಿಲ್ಲ, ಅಥವಾ ಮದುವೆಯಾಗುವುದಿಲ್ಲ ಎಂದು ಯೋಚಿಸಿಯೂ ಇಲ್ಲ.
ನನಗೂ ಮದುವೆಯಾಗುವ ಆಸೆ ಇದೆ. ಸಂಗಾತಿ ಮತ್ತು ಮಕ್ಕಳಾಗುವ ಭರವಸೆ ಈಗಲೂ ಇದೆ. ಮದುವೆಯ ಮೂಲಕ ಸಂಸಾರ ಆರಂಭಿಸುವ ಯೋಚನೆ ಇದೆ.
ಸಮಯ ಸಿಕ್ಕರೆ ತನ್ನ ಮದುವೆ ಆಗಬಹುದಾ ಎಂದು ನೋಡುತ್ತೇನೆ. ಮದುವೆಯಾದರೆ ನನಗೂ ತುಂಬಾ ಖುಷಿಯಾಗುತ್ತದೆ ಎಂದಿದ್ದಾರೆ ನಗ್ಮಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.