ತೂಕದ ಬಗ್ಗೆ ಮಾತನಾಡಿದರೆ ನೋವಾಗುತ್ತೆ ಅಂದ್ರೂ ಕಾಮೆಂಟ್ ಮಾಡ್ತೀರಾ: ಮೇಘನಾ ರಾಜ್
ಸಖತ್ ಬ್ಯುಸಿಯಾಗಿರುವ ಮೇಘನಾ ರಾಜ್ ಬಾಡಿ ಶೇಮಿಂಗ್ ಬಗ್ಗೆ ಧ್ವನಿ ಎತ್ತಿದ್ದಾರೆ. ತಮ್ಮ ಫಿಟ್ನೆಸ್ ಬಗ್ಗೆ ಹೇಳಿದಿಷ್ಟು....

ಕನ್ನಡ ಚಿತ್ರರಂಗದ ಮನೆ ಹುಡುಗಿ ಅಂತ ಹೇಳಿದ ಅಥವಾ ಕೇಳಿದ ತಕ್ಷಣ ಎಲ್ಲರಿಗೂ ನೆನಪಾಗೋದು ಓನ್ ಆಂಡ್ ಓನ್ಲಿ ಮೇಘನಾ ರಾಜ್ ಸರ್ಜಾ.
ಸಿಂಗಲ್ ಪೇರೆಂಟ್ ಆಗಿ ರಾಯನ್ ರಾಜ್ ಸರ್ಜಾನ ಬೆಳೆಸುತ್ತಿರುವ ಮೇಘನಾ ರಾಜ್ ಪದೇ ಪದೇ ಬಾಡಿ ಶೇಮಿಂಗ್ ಎದುರಿಸುತ್ತಾರೆ. ಈ ವಿಚಾರದ ಬಗ್ಗೆ ಬಹಳ ಹಿಂದೆ ಧ್ವನಿ ಎತ್ತಿದ್ದರು.
ನನ್ನ ದೇಹದ ತೂಕವನ್ನು ಪಾಯಿಂಟ್ ಮಾಡಿ ಯಾರಾದರೂ ಮಾತನಾಡಿದರೆ ಖಂಡಿತಾ ನನಗೆ ಬೇಸರವಾಗುತ್ತದೆ, ನಾನು ಮಹಿಳೆ ಎಂದು ಮೇಘನಾ ರಾಜ್ ಹಳೆ ಸಂದರ್ಶನದಲ್ಲಿ ಹೇಳಿದ್ದರು.
ಕೆಲವೊಮ್ಮೆ ನಾನು ಯೊಚನೆ ಮಾಡುತ್ತೀನಿ ನನ್ನ ಜೀವದಲ್ಲಿ ಈ ರೀತಿ ಘಟನೆ ಆಗಿರಲಿಲ್ಲ ಅಂದ್ರೆ ಜನರು ನನಗೆ ಇಷ್ಟೊಂದು ಪ್ರೀತಿ ಕೊಡುವರೇ? ಪ್ರೆಗ್ನೆನ್ಸಿ ಆದ್ಮೇಲೆ ಯಾರೂ ನನ್ನನ್ನು ಜಡ್ಜ್ ಮಾಡುತ್ತಿಲ್ಲ
ಆದರೆ ನನ್ನ ಜೀವನ ಮೊದಲಿನಂತೆ ಕಲರ್‌ಫುಲ್ ಆಗಿದ್ದರೆ ಖಂಡಿತ ನಾನು ಆದಷ್ಟು ಬೇಗ ಫಿಟ್ ಆಗಬೇಕು ಹಾಗೂ ಕಮ್ ಬ್ಯಾಕ್ ನಿರೀಕ್ಷೆ ಮಾಡುತ್ತಿದ್ದರು. ಒಂದು ವೇಳೆ ಕಮ್ ಬ್ಯಾಕ್ ಮಾಡಿಲ್ಲ ಅಂದ್ರೂ ಕಾಮೆಂಟ್ ಮಾಡುತ್ತಿದ್ದರು.
ನನ್ನ ಜೀವನದಲ್ಲಿ ಈ ಘಟನೆ ನಡೆದಿರಲಿಲ್ಲ ಅಂದ್ರೆ ಯಾರೂ ದಯೆ ತೋರಿಸುತ್ತಿರಲಿಲ್ಲ ನನಗೂ ಸಾಕಷ್ಟು ಯೋಚನೆಗಳು ಬರುತ್ತದೆ' ಎಂದು ಬಾಲಿವುಡ್ ಬಬಲ್ ಸಂದರ್ಶನದಲ್ಲಿ ಮೇಘನಾ ರಾಜ್ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.