ಅವಳಿ ಮಕ್ಕಳ ಜೊತೆ ಅದ್ಧೂರಿಯಾಗಿ ಯುಗಾದಿ ಆಚರಿಸಿದ ಅಮೂಲ್ಯ; ಏನೇ ಇರ್ಲಿ ಹೆಣ್ಮಕ್ಕಳಿಗೆ ಸೀರೆ ಮೇಲೇ ಕಣ್ಣು!!
ಸಾಮಾಜಿಕ ಜಾಲತಾಣದಲ್ಲಿ ಹೊಸ ವರ್ಷದ ಫೋಟೋ ಅಪ್ಲೋಡ್ ಮಾಡಿದ ನಟಿ ಅಮೂಲ್ಯ ಗೌಡ. ಅಮ್ಮು ಸೀರೆಗೆ ನೆಟ್ಟಿಗರು ಫಿದಾ....
ಕನ್ನಡ ಚಿತ್ರರಂಗದ ಚೆಲುವಿನ ಚಿತ್ತಾರ ಅಮೂಲ್ಯ ಗೌಡ ವರ್ಷದ ಮೊದಲ ಹಬ್ಬ ಯುಗಾದಿಯನ್ನು ಕುಟುಂಬದ ಜೊತೆ ಅದ್ಧೂರಿಯಾಗಿ ಆಚರಿಸಿದ್ದಾರೆ.
'ಹೊಸ ವರ್ಷ ಹಾಗೂ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು' ಎಂದು ಅಮೂಲ್ಯ ಬರೆದುಕೊಂಡಿದ್ದಾರೆ. ಪಿಎಸ್‌ಕೆ ಸ್ಟುಡಿಯೋ ಫೋಟೋಗ್ರಾಫಿ ಅವರು ಕ್ಲಿಕ್ ಮಾಡಿದ್ದಾರೆ.
ಅಮೂಲ್ಯ ಧರಿಸಿರುವ ಆಭರಣಗಳು ಗಜರಾಜ ಆಭರಣ ಹಾಗೂ ಮೇಕಪ್ ಮಾಡಿರುವುದು ಯತೀಶ್ ಎಂಬುವವರು. ಬ್ಲೌಸ್‌ನ ಡಿಸೈನ್ ಮಾಡಿರುವುದು ಸಾನ್ವಿ.
'ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ಕಹಿಯಾದ ಬೇವಿನ ಅಂಚಿನಲ್ಲಿ ಸಿಹಿಯಾದ ಬೇವಿನ ಸಿಂಚನ ಸಿಗಲಿ. ನಿಮ್ಮ ಬಾಳಲ್ಲಿ ಹೊಸ ಚೈತನ್ಯ, ಉತ್ಸಾಹ, ನೆಮ್ಮದಿ ಇರಲಿ' ಎಂದು ಅಮೂಲ್ಯ ಪತಿ ಜಗದೀಶ್ ಬರೆದುಕೊಂಡಿದ್ದಾರೆ.
ಆರೇಂಜ್ ಮತ್ತು ಪಿಂಕ್ ಬಣ್ಣದ ಸೀರೆಯಲ್ಲಿ ಅಮೂಲ್ಯ ಮಿಂಚಿದ್ದಾರೆ...ಗೋಲ್ಡನ್ ಶೇರ್ವಾನಿಯಲ್ಲಿ ಜಗದೀಶ್ ಮತ್ತು ವೈಟ್ ಶೇರ್ವಾನಿಯಲ್ಲಿ ಮಕ್ಕಳು ಕಾಣಿಸಿಕೊಂಡಿದ್ದಾರೆ.
ಮನೆ ಮುಂದೆ ಮೂರ್ನಾಲ್ಕು ಹಾರಗಳಿಂದ ಅಲಂಕಾರ ಮಾಡಿದ್ದಾರೆ. ಹಸು ಕರುಗಳಿಗೂ ವಿಶೇಷ ಪೂಜೆ ಮಾಡಿದ್ದಾರೆ. ಅಮೂಲ್ಯ ಸೀರೆ ಸೋಷಿಯಲ್ ಮೀಡಿಯಾದಲ್ಲಿ ಹೆಣ್ಣು ಮಕ್ಕಳ ಗಮನ ಸೆಳೆದಿದೆ. ಅನೇಕರು ಸೀರೆ ಎಲ್ಲಿಂದ ತಂದಿರುವುದು ಎಂದು ಕೇಳಿದ್ದಾರೆ.
ಅಥರ್ವ್ ಮತ್ತು ಆಧವ್ ಆಗಮನದ ನಂತರ ಅಮೂಲ್ಯ ಪ್ರತಿಯೊಂದು ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಇವರ ಫ್ಯಾಮಿಲಿ ಮ್ಯಾಚಿಂಗ್ ಫೋಟೋ ಸಖತ್ ವೈರಲ್ ಆಗುತ್ತದೆ...