- Home
- Entertainment
- Sandalwood
- ಸ್ವಂತ ಮನೆಗೆ ಕನ್ನಡ ಧ್ವಜದ ಬಣ್ಣ; ʼಅʼ ಎಂದು ನಾಮಕರಣ; ನಟ ಧರ್ಮಣ್ಣ ಕಡೂರು ಕನ್ನಡಾಭಿಮಾನಕ್ಕೆ ಹೊಡಿರಿ ಹಲಗಿ!
ಸ್ವಂತ ಮನೆಗೆ ಕನ್ನಡ ಧ್ವಜದ ಬಣ್ಣ; ʼಅʼ ಎಂದು ನಾಮಕರಣ; ನಟ ಧರ್ಮಣ್ಣ ಕಡೂರು ಕನ್ನಡಾಭಿಮಾನಕ್ಕೆ ಹೊಡಿರಿ ಹಲಗಿ!
ಕನ್ನಡದ ಕೆಲ ಸಿನಿಮಾಗಳಲ್ಲಿ ಹಾಸ್ಯನಟರಾಗಿ ಕಾಣಿಸಿಕೊಂಡಿರುವ ನಟ ಧರ್ಮಣ್ಣ ಕಡೂರು ಅವರಿಗೆ ಇಂದು ಶುಭದಿನ ಎನ್ನಬಹುದು. ಇವರ ಕುಟುಂಬ ಹೊಸ ಮನೆಗೆ ಕಾಲಿಟ್ಟಿದೆ.

ರಾಮಾ ರಾಮಾ ರೇ ಸಿನಿಮಾ ನಟ ಧರ್ಮಣ್ಣ ಕಡೂರು ಅವರು ಸೋಶಿಯಲ್ ಮೀಡಿಯಾದಲ್ಲಿ ಮನೆಯ ಗೃಹಪ್ರವೇಶದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ದೇವರ ಆಶೀರ್ವಾದ ನಿಮ್ಮಗಳ ಪ್ರೀತಿಯಿಂದ 60 ರೂಪಾಯಿ ಮನೆ ಬಾಡಿಗೆಯಿಂದ ಇವತ್ತು ಇಂತ ಒಂದು ಗೂಡನ್ನು ಕಟ್ಟಿಕೊಂಡಿದ್ದೇವೆ. ಅ ಗೂಡಿಗೆ ತುಂಬಾ ಇಷ್ಟ ಪಟ್ಟು ಪ್ರೀತಿಯಿಂದ ಇಟ್ಟ ಹೆಸರು ಇದು "ಅ" ಎಂದು ಧರ್ಮಣ್ಣ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ನಟ ಧರ್ಮಣ್ಣ ಅವರು ʼರಾಜಯೋಗʼ ಸಿನಿಮಾದಲ್ಲಿ ಹೀರೋ ಆಗಿ ಕೂಡ ನಟಿಸಿದ್ದಾರೆ. ಹಾಸ್ಯನಟರು ಹೀರೋ ಆಗಿ ಗೆದ್ದ ಉದಾಹರಣೆಗಳು ತುಂಬ ಇವೆ.
ಧರ್ಮಣ್ಣ ಕಡೂರು ಅವರು ತಮ್ಮ ಹೊಸ ಮನೆಗೆ ʼಅʼ ಎಂದು ಹೆಸರು ಇಟ್ಟಿದ್ದಾರೆ. ʼಅʼ ಎಂದು ಒಂದು ಅಕ್ಷರ ಯಾಕೆ ಇಟ್ಟರು ಎನ್ನೋದಕ್ಕೆ ಅವರೇ ಉತ್ತರ ಕೊಡಬೇಕು.
ಇನ್ನು ಕನ್ನಡ ನಾಡಿನಲ್ಲಿ ಹುಟ್ಟಿ, ಕನ್ನಡ ಸಿನಿಮಾಗಳಿಂದ ಬದುಕ್ತಿರುವ ಧರ್ಮಣ್ಣ ಕಡೂರು ಅವರು ಕೆಂಪು, ಹಳದಿ ಬಣ್ಣದ ನಮ್ಮ ಬಾವುಟದ ಕಲರ್ ಮಧ್ಯೆ ʼಅʼ ಎಂದು ಬರೆಸಿ ಕನ್ನಡ ಪ್ರೇಮ ಸಾರಿದ್ದಾರೆ.
ನಟ ಧರ್ಮಣ್ಣ ಅವರು ತಿಂಗಳಿಗೆ ಅರವತ್ತು ರೂಪಾಯಿ ಕೊಟ್ಟು ಬಾಡಿಗೆ ಮನೆಯಲ್ಲಿ ಇರಲು ಆರಂಭಿಸಿದ್ದರು. ಈಗ ಸ್ವಂತ ಮನೆಗೆ ಕಾಲಿಟ್ಟಿದ್ದಾರೆ.
ನಟ ಧರ್ಮಣ್ಣ ಕಡೂರು ಅವರಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿವೆ. ಶೂಟಿಂಗ್ ಇಲ್ಲ ಅಂದ್ರೆ ಅವರು ಊರಿಗೆ ಹೋಗಿ ಅಲ್ಲೇ ಇರುತ್ತಾರೆ.