- Home
- Entertainment
- Sandalwood
- Celebrity Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ಜೋಡಿ ದೀಪಕ್ ಮಹಾದೇವ್ ಮತ್ತು ಚಂದನಾ!
Celebrity Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ಜೋಡಿ ದೀಪಕ್ ಮಹಾದೇವ್ ಮತ್ತು ಚಂದನಾ!
ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟ ದೀಪಕ್ ಮಹಾದೇವ್ ಮತ್ತು ನಟಿ ಚಂದನಾ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋಗಳಿವು....

ಡಿಸೆಂಬರ್ 2ರಂದು ದೀಪಕ್ ಮಹಾದೇವ್ ಮತ್ತು ಚಂದನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್‌ನಲ್ಲಿ ಮದುವೆ ನಡೆದಿದೆ ಎನ್ನಲಾಗಿದೆ.
ಪ್ರೀ ವೆಡ್ಡಿಂಗ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಇನ್‌ಸ್ಟಾಗ್ರಾಂನಲ್ಲಿ ದೀಪಕ್ ವೆಡ್ಡಿಂಗ್ ಕೌಂಟ್‌ಡೌನ್ ಆರಂಭಿಸಿದ್ದರು.
ಡಿಸೆಂಬರ್ 1ರಂದು ಆರತಕ್ಷತೆ ಹಮ್ಮಿಕೊಂಡಿದ್ದರು. ಇಬ್ಬರು ಒಂದೇ ಬಣ್ಣದ ಡಿಸೈನರ್ ಉಡುಪು ಧರಿಸಿದ್ದಾರೆ. ಭವ್ಯ ಎಂಬುವವರು ಮೇಕಪ್ ಮಾಡಿದ್ದಾರೆ.
ಡಿಸೆಂಬರ್ 2ರಂದು ಮುಹೂರ್ತ ಹಮ್ಮಿಕೊಂಡಿದ್ದರು. ಸಿಲ್ಕ್ ಪಂಚೆಯಲ್ಲಿ ದೀಪಕ್ ಮತ್ತು ಸಿಲ್ವರ್ ಬಣ್ಣದ ಸೀರೆಯಲ್ಲಿ ಚಂದನಾ ಕಂಗೊಳಿಸುತ್ತಿದ್ದರು.
ಇದೇ ವರ್ಷ ಜುಲೈ ತಿಂಗಳಲ್ಲಿ ಇಬ್ಬರು ನಿಶ್ಚಿತಾರ್ಥ (Engagement) ಮಾಡಿಕೊಳ್ಳುವ ಮೂಲಕ ತಮ್ಮ ಲವ್ ಮ್ಯಾಟರ್‌ನ ಅಫೀಶಿಯಲ್ ಮಾಡಿದ್ದರು.
ಖಾಸಗಿ ಟಿವಿ ಅವಾರ್ಡ್ ಕಾರ್ಯಕ್ರಮದಲ್ಲಿ ದೀಪಕ್ ಮತ್ತು ಚಂದನಾ ಮೊದಲು ಭೇಟಿಯಾಗಿದ್ದಂತೆ. ಒಂದೂವರೆ ವರ್ಷಗಳ ಕಾಲ ಇಬ್ಬರು ಸ್ನೇಹಿತರಾಗಿದ್ದರಂತೆ.
ಸ್ನೇಹಿತರಾಗಿದ್ದ ಅವರು ಪೋಷಕರು ಒಪ್ಪಿಗೆ ಪಡೆದುಕೊಂಡು ಈ ಸಂಬಂಧವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಬೇಕು ಎಂದು ನಿರ್ಧಾರ ಮಾಡಿದ್ದರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.