- Home
- Entertainment
- Sandalwood
- ಪುತ್ರಿ ಜೊತೆ ನಟ ಗಣೇಶ್: ಅಪರೂಪದ ಕ್ಯೂಟ್ ಫೋಟೋಸ್ ವೈರಲ್- ಮಗಳಿಗೆ ಡಾನ್ಸ್ ಹೇಳಿಕೊಟ್ಟ ಅಪ್ಪ
ಪುತ್ರಿ ಜೊತೆ ನಟ ಗಣೇಶ್: ಅಪರೂಪದ ಕ್ಯೂಟ್ ಫೋಟೋಸ್ ವೈರಲ್- ಮಗಳಿಗೆ ಡಾನ್ಸ್ ಹೇಳಿಕೊಟ್ಟ ಅಪ್ಪ
ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಹುಟ್ಟುಹಬ್ಬದಂದು 'ಪಿನಾಕ' ಮತ್ತು 'ಬೃಂದಾ ವಿಹಾರಿ' ಎಂಬ ಎರಡು ಹೊಸ ಚಿತ್ರಗಳ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಇದೇ ವೇಳೆ, ಅವರ ಪುತ್ರಿ ಚಾರಿತ್ರ್ಯ ಹಂಚಿಕೊಂಡ ತಂದೆ-ಮಗಳ ಡಾನ್ಸ್ ವಿಡಿಯೋ ವೈರಲ್ ಆಗಿದ್ದು, ಚಾರಿತ್ರ್ಯ ಅವರ ಭಾವನಾತ್ಮಕ ಪೋಸ್ಟ್ ಗಮನ ಸೆಳೆದಿದೆ.

ಗಣೇಶ್ ಡಬಲ್ ಧಮಾಕಾ
ನಿನ್ನೆಯಷ್ಟೇ ಅರ್ಥಾತ್ ಜುಲೈ 2ರಂದು 'ಗೋಲ್ಡನ್ ಸ್ಟಾರ್' ಗಣೇಶ್ ಅವರು ಹುಟ್ಟುಹಬ್ಬ ಆಚರಿಸಿಕೊಂಡರು. ಇದೇ ಸಂದರ್ಭದಲ್ಲಿ ಗಣೇಶ್ ಅವರು ಎರಡು ಗುಡ್ನ್ಯೂಸ್ ಕೊಟ್ಟಿದ್ದರು. ಒಂದು 'ಪಿನಾಕ' ಹಾಗೂ 'ಬೃಂದಾ ವಿಹಾರಿ' ಸಿನಿಮಾಗಳ ಬಿಡುಗಡೆ ದಿನಾಂಕದ ಬಗ್ಗೆ ಘೋಷಿಸಿದರು. ಕೇವಲ 15 ದಿನಗಳ ಅಂತರದಲ್ಲಿ ಈ ಎರಡೂ ಬಿಗ್ ಬಜೆಟ್ ಚಿತ್ರಗಳು ಬಿಡುಗಡೆ ಆಗಲಿವೆ.
ಪಿಚ್ಚರ್ ಸಿನಿಮಾ
ಇದರ ನಡುವೆಯೇ, ನಿರ್ಮಾಪಕಿಯಾಗಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ಅವರು ಇದೀಗ ಹೊಸ ಸಿನಿಮಾ ಸಿದ್ಧಪಡಿಸಿದ್ದು, ಅದು ಜುಲೈ 24 ರಂದು ಬಿಡುಗಡೆಯಾಗಲಿದೆ. ಚಿತ್ರದ ಹೆಸರು ಪಿಚ್ಚರ್ (Pichchar Kannada Movie) ಎಂದು. ಇದರ ಮೂಲಕ ಹಿನ್ನೆಲೆ ಗಾಯಕಿಯಾಗಿಯೂ ಎಂಟ್ರಿ ಕೊಡುತ್ತಿದ್ದಾರೆ ಶಿಲ್ಪಾ.
ಚಾರಿತ್ರ್ಯಳ ವಿಡಿಯೋ
ಇವೆಲ್ಲವುಗಳ ನಡುವೆ, ಗಣೇಶ್ ಮತ್ತು ಶಿಲ್ಪಾ ಅವರ ಪುತ್ರಿ ಚಾರಿತ್ರ್ಯಳ ಕ್ಯೂಟ್ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ಅಪ್ಪ ಗಣೇಶ್ ಮಗಳಿಗೆ ಡಾನ್ಸ್ ಹೇಳಿಕೊಡುತ್ತಿದ್ದಾರೆ. ಇದನ್ನು ಚಾರಿತ್ರ್ಯ ಶೇರ್ ಮಾಡಿಕೊಂಡಿದ್ದಾರೆ.
ತಂದೆ-ಮಗಳ ಜೋಡಿ ಡಾನ್ಸ್
ನನ್ನ ಮೊದಲ ಮತ್ತು ಶಾಶ್ವತ ಪ್ರೀತಿ, ನನ್ನ ಸುರಕ್ಷಿತ ಸ್ಥಳ ಮತ್ತು ನನ್ನ ಜೀವನದುದ್ದಕ್ಕೂ ನಾನು ಯಾವಾಗಲೂ ನೋಡುವ ವ್ಯಕ್ತಿ. ಪ್ರೀತಿ ಮತ್ತು ಶಕ್ತಿ ನಿಜವಾಗಿಯೂ ಹೇಗಿರುತ್ತದೆ ಎಂದು ನನಗೆ ಕಲಿಸಿದ್ದಕ್ಕಾಗಿ ಧನ್ಯವಾದಗಳು. ನೀವು ನನ್ನ ದೊಡ್ಡ ಸ್ಫೂರ್ತಿ ಮತ್ತು ನಿಮ್ಮನ್ನು ನನ್ನ ಅಪ್ಪ ಎಂದು ಕರೆಯಲು ನಾನು ತುಂಬಾ ಕೃತಜ್ಞನಾಗಿದ್ದೇನೆ, ನೀವು ಎಲ್ಲಿದ್ದರೂ ಮನೆ ಯಾವಾಗಲೂ ಇರುತ್ತದೆ. ನಾನು ನಿಮ್ಮನ್ನು ಅನಂತವಾಗಿ ಪ್ರೀತಿಸುತ್ತೇನೆ, ಹುಟ್ಟುಹಬ್ಬದ ಶುಭಾಶಯಗಳು ಎನ್ನುವ ಮೂಲಕ ಮಗಳು ಚಾರಿತ್ರ್ಯ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಅಪ್ಪ-ಮಗಳ ಕ್ಯೂಟ್ ಫೋಟೋ
ಇದರ ಜೊತೆಗೆ, ಚಾರಿತ್ರ್ಯ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡದ್ದು ಸ್ವಲ್ಪ ಕಮ್ಮಿನೇ. ಇದೀಗ ಅಪ್ಪ-ಮಗಳ ಕ್ಯೂಟ್ ಫೋಟೋಶೂಟ್ಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.
ಬಾಲನಟಿಯಾಗಿ...
ಅಂದಹಾಗೆ ಚಾರಿತ್ರ್ಯ ಗಣೇಶ್ ಇದಾಗಲೇ ಸ್ಯಾಂಡಲ್ವುಡ್ಗೂ ಎಂಟ್ರಿಕೊಟ್ಟಿದ್ದು, 'ಚಮಕ್' ಸಿನಿಮಾದಲ್ಲಿ ಸಣ್ಣದೊಂದು ಪಾತ್ರ ನಿರ್ವಹಿಸಿದ್ದಾರೆ. ಆದರೆ ನಾಯಕಿಯಾಗಿ ಅವರು ಯಾವಾಗ ಎಂಟ್ರಿ ಕೊಡುತ್ತಾರೆ ಎನ್ನುವ ಕಾತರದಿಂದ ಕಾಯುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅಮ್ಮ ಶಿಲ್ಪಾ ಅವರು, ಸದ್ಯ ಅದ್ಯಾವ ರೀತಿಯ ಪ್ಲ್ಯಾನ್ ಇಲ್ಲ, ಅವಳಿಗೆ ಏನು ಇಷ್ಟನೋ ಅದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಕೊಟ್ಟಿದ್ದೇವೆ ಎಂದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

