MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಗಿಲ್ಲಿ ಸಿನಿಮಾಗೆ ಕಾವ್ಯಾ ಶೈವ ನಾಯಕಿ ಅಲ್ವಾ?; ಹೊಸ ಸಿನಿಮಾ ಶೂಟಿಂಗ್ ಆರಂಭಿಸಿ ಶಾಕ್ ಕೊಟ್ಟ ಬಿಗ್‌ಬಾಸ್‌ ಚೆಲುವೆ!

ಗಿಲ್ಲಿ ಸಿನಿಮಾಗೆ ಕಾವ್ಯಾ ಶೈವ ನಾಯಕಿ ಅಲ್ವಾ?; ಹೊಸ ಸಿನಿಮಾ ಶೂಟಿಂಗ್ ಆರಂಭಿಸಿ ಶಾಕ್ ಕೊಟ್ಟ ಬಿಗ್‌ಬಾಸ್‌ ಚೆಲುವೆ!

ಬಿಗ್‌ಬಾಸ್‌ 12 ವಿಜೇತ ಗಿಲ್ಲಿ ನಟ 'ಪಳಾರ್' ಸಿನಿಮಾ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಕಾವ್ಯಾ ಶೈವ ನಾಯಕಿಯಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕಾವ್ಯಾ 'ದಿ ಪ್ರಾಬ್ಲಮ್‌' ಎಂಬ ಹೊಸ ಚಿತ್ರದ ಶೂಟಿಂಗ್ ಆರಂಭಿಸಿದ್ದು, ಗಿಲ್ಲಿ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ.

1 Min read
Author : Santosh Naik
Published : Jul 15 2026, 04:48 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : X

ಬಿಗ್‌ಬಾಸ್‌ 12 ಗೆಲ್ಲುವ ಮೂಲಕ ವೃತ್ತಿಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಿರುವ ಗಿಲ್ಲಿ ನಟ, ಕೆವಿಎನ್‌ ಪ್ರೊಡಕ್ಷನ್ಸ್‌ ನಿರ್ಮಾಣದ ಹೊಸ ಸಿನಿಮಾ ಪಳಾರ್‌ ಮೂಲಕ ಸ್ಯಾಂಡಲ್‌ವುಡ್‌ಗೆ ಹೀರೋ ಆಗಿ ಪದಾರ್ಪಣೆ ಮಾಡಲಿದ್ದಾರೆ. ಈಗಾಗಲೇ ಹಲವು ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಿರುವ ಗಿಲ್ಲಿ ಪಳಾರ್‌ ಮೂಲಕ ಪೂರ್ಣ ಪ್ರಮಾಣದ ನಾಯಕನಾಗುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : X

ಕಳೆದ ತಿಂಗಳು ಗಿಲ್ಲಿ ಹೊಸ ಸಿನಿಮಾ ಘೋಷಣೆ ಮಾಡಿದ ಬೆನ್ನಲ್ಲಿಯೇ ಈ ಸಿನಿಮಾಕ್ಕೆ ನಾಯಕಿ ಯಾರಾಗಬಹುದು ಅನ್ನೋ ಕುತೂಹಲ ಹೆಚ್ಚಾಗಿದೆ. ಇಲ್ಲಿಯವರೆಗೂ ಸಿನಿಮಾ ತಂಡ ಯಾವುದೇ ಗುಟ್ಟುಬಿಟ್ಟುಕೊಟ್ಟಿಲ್ಲ. ಹೆಚ್ಚಿನವರು ಈ ಸಿನಿಮಾಕ್ಕೆ ಕಾವ್ಯಾ ಶೈವ ಅವರೇ ನಾಯಕಿಯಾಗಬಹುದು ಎಂದಿದ್ದಾರೆ.

Related Articles

Related image1
ಕೇಂದ್ರ ಸರ್ಕಾರಿ ನೌಕರಿಗೆ ಗುಡ್​ಬೈ ಹೇಳಿದ Bigg Boss ಕಾವ್ಯಾ ಶೈವ! ಈ ಹೆಸರು ಬಂದಿದ್ದು ಹೇಗೆ
Related image2
ವೇದಿಕೆ ಮೇಲೆ ಕಾವ್ಯಾ ಶೈವ ಸಿಗ್ನಲ್​, ಕೂದಲು ಸರಿಮಾಡಿಕೊಂಡ ಗಿಲ್ಲಿ: ಶುರುವಾಯ್ತು ಅಭಿಮಾನಿಗಳ ವರಾತ
36
Image Credit : X

ಕಾವ್ಯಾ ಶೈವ ಹಾಗೂ ಗಿಲ್ಲಿ ನಟ ಬಿಗ್‌ಬಾಸ್‌ 12ನ ಫೇವರಿಟ್‌ ಜೋಡಿ. ಆರಂಭದಿಂದ ಕೊನೆಯವರೆಗೂ ಇವರಿಬ್ಬರ ಕಾಂಬಿನೇಷನ್‌ ಸಖತ್‌ ವರ್ಕೌಟ್‌ ಆಗಿತ್ತು. ಇದೇ ಪೇರ್‌ಅನ್ನು ಪಳಾರ್ ಸಿನಿಮಾದಲ್ಲೂ ನೋಡಬಹುದು ಎಂದು ಅಭಿಮಾನಿಗಳು ಕಾದಿದ್ದರು.

46
Image Credit : X

ಇದರ ನಡುವೆ ಶಾಕಿಂಗ್‌ ಎನ್ನುವಂತೆ ಕಾವ್ಯಾ ಶೈವ ಹೊಸ ಸಿನಿಮಾದ ಶೂಟಿಂಗ್ ಆರಂಭಿಸಿದ್ದಾರೆ. ಬಿಗ್‌ಬಾಸ್‌ನಿಂದ ಬಂದ ಬಳಿಕ ಖಾಸಗಿ ಕಾರ್ಯಕ್ರಮಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಿದ್ದ ಕಾವ್ಯಾ ಶೈವ 'ದಿ ಪ್ರಾಬ್ಲಮ್‌' ಹೆಸರಿನ ಸಿನಿಮಾ ಶೂಟಿಂಗ್ ಆರಂಭಿಸಿದ್ದಾರೆ.

56
Image Credit : X

ಈಗಾಗಲೇ ಸಿನಿಮಾದ ಶೂಟಿಂಗ್‌ ಸ್ಟಿಲ್‌ಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಸಿನಿಮಾದ ನಾಯಕ ಯಾರು, ನಿರ್ದೇಶಕ, ನಿರ್ಮಾಪಕ ಯಾರು ಅನ್ನೋ ಮಾಹಿತಿ ಇನ್ನೂ ಪ್ರಕಟವಾಗಿಲ್ಲ. ಕಾವ್ಯಾ ಶೈವ ಹೊಸ ಸಿನಿಮಾ ಶೂಟಿಂಗ್‌ ಆರಂಭಿಸಿದ ಬೆನ್ನಲ್ಲಿಯೇ ಗಿಲ್ಲಿ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.

66
Image Credit : X

ಗಿಲ್ಲಿ ಅಭಿಮಾನಿಗಳು ಪಳಾರ್‌ ಸಿನಿಮಾದಲ್ಲಿ ಕಾವ್ಯಾ ಶೈವ ಅವರೇ ನಾಯಕಿಯಾಗಬೇಕು ಎಂದು ಬಯಸಿದ್ದರು. ಆದರೆ, ಅವರ ನಿರೀಕ್ಷೆ ಸುಳ್ಳಾಗುವ ಲಕ್ಷಣ ಕಂಡಿದೆ. ಕಾವ್ಯಾ ಹೊಸ ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದರೆ, ಗಿಲ್ಲಿ ಕೂಡ ಹೊಸ ಸಿನಿಮಾದಲ್ಲಿ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಗಿಲ್ಲಿ ನಟ
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ
ಸುದ್ದಿ

Latest Videos
Recommended Stories
Recommended image1
ಕಣ್ಣೀರಿನ ಲೆಕ್ಕ ಕೇಳಬೇಡಿ, ಅಜ್ಜಿ ಮೇಲಿನ ನನ್ನ ಪ್ರೀತಿ ಅಳೆಯಬೇಡಿ.. ಟ್ರೋಲ್‌ಗೆ ಬೇಸರಗೊಂಡ ಎಸ್‌ ಜಾನಕಿ ಮೊಮ್ಮಗಳು ಅಪ್ಸರಾ
Recommended image2
380 ಕೋಣಗಳು, 700 ವರ್ಷದ ಇತಿಹಾಸ... 'ಕರಾವಳಿ' ಬಗ್ಗೆ ಹೊಸ ಮಾಹಿತಿ ಹೊರಬಿತ್ತು!
Recommended image3
ಪತಿ ತರುಣ್ ಸುಧೀರ್ ಜೊತೆ ನಟಿ ಸೋನಲ್ ಮೊಂತೆರೊ ರೊಮ್ಯಾಂಟಿಕ್ ಡೇಟ್
Related Stories
Recommended image1
ಕೇಂದ್ರ ಸರ್ಕಾರಿ ನೌಕರಿಗೆ ಗುಡ್​ಬೈ ಹೇಳಿದ Bigg Boss ಕಾವ್ಯಾ ಶೈವ! ಈ ಹೆಸರು ಬಂದಿದ್ದು ಹೇಗೆ
Recommended image2
ವೇದಿಕೆ ಮೇಲೆ ಕಾವ್ಯಾ ಶೈವ ಸಿಗ್ನಲ್​, ಕೂದಲು ಸರಿಮಾಡಿಕೊಂಡ ಗಿಲ್ಲಿ: ಶುರುವಾಯ್ತು ಅಭಿಮಾನಿಗಳ ವರಾತ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved