KGF 2 ಟ್ರೇಲರ್ ಬಿಡುಗಡೆಗೆ ನಟ ಡಾ ಶಿವರಾಜ್‌ಕುಮಾರ್ ವಿಶೇಷ ಅತಿಥಿ
ಕರಣ್ ಜೋಹರ್ ನಿರೂಪಣೆ, ಸಂಜಯ್ ದತ್ ಉಪಸ್ಥಿತಿ ಅದ್ಧೂರಿ ಕಾರ್ಯಕ್ರಮ. ದೇಶದ ನಾನಾ ಭಾಗದ ಪತ್ರಕರ್ತರು ಭಾಗಿ.

ಡಾ.ಶಿವರಾಜ್‌ಕುಮಾರ್ ಅತಿಥಿ
ಮಾ.27ರಂದು ಸಂಜೆ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಕನ್ನಡ, ತಮಿಳು, ಮಲಯಾಳಂ, ತೆಲುಗು ಮತ್ತು ಹಿಂದಿ ಸೇರಿದಂತೆ ಐದು ಭಾಷೆಯ ಟ್ರೇಲರ್ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಕರಣ್ ನಿರೂಪಣೆ
ಶಿವರಾಜ್ ಕುಮಾರ್ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ, ನಿರೂಪಕ ಕರಣ್ ಜೋಹರ್ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.
ದೊಡ್ಡ ಸ್ಟಾರ್ ಬಳಗ
ಯಶ್ (Yash), ಸಂಜಯ್ ದತ್ (Sanjay Dutt), ರವೀನಾ ಟಂಡನ್, ಪ್ರಶಾಂತ್ ನೀಲ್ (Prashanth Neel), ನಿರ್ಮಾಪಕ ವಿಜಯ್ ಕಿರಗಂದೂರು ಉಪಸ್ಥಿತರಿರುತ್ತಾರೆ.
ವಿಭಿನ್ನ ಕಾರ್ಯಕ್ರಮ
ಕನ್ನಡದ ಚಿತ್ರಕ್ಕೆ ಬಾಲಿವುಡ್‌ನ ಗಣ್ಯ ವ್ಯಕ್ತಿ ಕರಣ್ ಜೋಹರ್ ನಿರೂಪಣೆ ಮಾಡುತ್ತಿರುವುದು ಇದೇ ಮೊದಲು. ಈ ಟ್ರೇಲರ್ ರಿಲೀಸ್ ಕಾರ್ಯಕ್ರಮ ವಿಶಿಷ್ಟವಾಗಿ, ವಿಭಿನ್ನವಾಗಿ ನಡೆಯಲಿದೆ.
ಸ್ಟಾರ್ ಹೋಟೆಲ್‌ನಲ್ಲಿ ಕಾರ್ಯಕ್ರಮ
ತಾರಾ ಹೋಟೆಲ್‌ನಲ್ಲಿ ಈ ಸಮಾರಂಭ ನಡೆಯಲಿದ್ದು, ದೇಶದ ನಾನಾ ಭಾಗದ ಪತ್ರಕರ್ತರು ಆಗಮಿಸಲಿದ್ದಾರೆ. ಯಾವುದೇ ಕ್ಯಾಮೆರಾಗಳಿಗೆ ಪ್ರವೇಶ ಇರುವುದಿಲ್ಲ. ಚಿತ್ರತಂಡವೇ ವಿಡಿಯೋ ಶೂಟ್ ಮಾಡಿ ಮಾಧ್ಯಮಗಳಿಗೆ ನೀಡುವ ಸಾಧ್ಯತೆ ಇದೆ.
ಏಪ್ರಿಲ್ ಸಿನಿಮಾ ರಿಲೀಸ್
ಜೊತೆಗೆ ಸಚಿವ ಅಶ್ವತ್ಥ ನಾರಾಯಣ ಪಾಲ್ಗೊಳ್ಳಲಿದ್ದಾರೆ. ಅಪ್ಪು ಅಗಲಿಕೆಯ ಹಿನ್ನೆಲೆಯಲ್ಲಿ ಪ್ರಿ-ರಿಲೀಸ್ ಈವೆಂಟ್ ನಡೆಸದಿರಲು ಚಿತ್ರತಂಡ ತೀರ್ಮಾನಿಸಿದೆ. ಏ.14ರಂದು ವಿಶ್ವಾದ್ಯಂತ ಸುಮಾರು 7000 ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಕೆಜಿಎಫ್ 2 ಹವಾ ಶುರು
ಕೆಜಿಎಫ್ 2 ಏಪ್ರಿಲ್ 14ರಂದು ದೇಶ, ವಿದೇಶದಾದ್ಯಂತ ಬಿಡುಗಡೆಯಾಗಲಿದೆ. ಇಡೀ ವಿಶ್ವದ ದಾಖಲೆಯ ಏಳು ಸಾವಿರ ಚಿತ್ರಮಂದಿರಗಳಲ್ಲಿ ಕೆಜಿಎಫ್ 2 ಅಬ್ಬರಿಸಲಿದೆ. ಕರ್ನಾಟಕದಲ್ಲಿ 450ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆ ಆದರೆ, ವಿವಿಧ ರಾಜ್ಯಗಳ ಸಾವಿರಾರು ಥಿಯೇಟರ್‌ಗಳು ರಾಕಿ ಮಾಡೋ ಮ್ಯಾಜಿಕ್‌ಗೆ ಸಾಕ್ಷಿಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.