- Home
- Entertainment
- Sandalwood
- ಪಿಂಕ್ ಡ್ರೆಸ್‌ನಲ್ಲಿ ಸ್ಟೈಲ್ ಐಕಾನ್ ಆದ ಧನ್ಯಾ: ಅಣ್ಣಾವ್ರ ಮೊಮ್ಮಗಳ ಎಡ ಭುಜದ ಮೇಲೆ ನೆಟ್ಟಿಗರ ಕಣ್ಣು!
ಪಿಂಕ್ ಡ್ರೆಸ್‌ನಲ್ಲಿ ಸ್ಟೈಲ್ ಐಕಾನ್ ಆದ ಧನ್ಯಾ: ಅಣ್ಣಾವ್ರ ಮೊಮ್ಮಗಳ ಎಡ ಭುಜದ ಮೇಲೆ ನೆಟ್ಟಿಗರ ಕಣ್ಣು!
ಫಿಟ್ನೆಸ್ ಮತ್ತು ಬ್ಯೂಟಿ ಕಾನ್ಶಿಯಸ್ ಆಗಿರುವ ಧನ್ಯಾ ರಾಮ್‌ಕುಮಾರ್ ಇದೀಗ ಕ್ಯೂಟ್ ಪಿಂಕ್ ಡ್ರೆಸ್ ತೊಟ್ಟು ಮಿಂಚಿದ್ದಾರೆ. ಸದ್ಯ ಈ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
- FB
- TW
- Linkdin
Follow Us
)
2021ರಲ್ಲಿ ನಿನ್ನ ಸನಿಹಕೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದೊಡ್ಡಮನೆ ಕುಡಿ ಧನ್ಯಾ ರಾಜ್‌ಕುಮಾರ್. ಅಣ್ಣಾವ್ರ ಮೊಮ್ಮಗಳ ಮೊದಲ ಚಿತ್ರವೇ ಸೂಪರ್ ಹಿಟ್ ಪ್ರದರ್ಶನ ಕಂಡಿದೆ.
ನಿನ್ನ ಸನಿಹಕೆ ಚಿತ್ರದ ನಂತರ ಹೈಡ್ ಆಂಡ್ ಸೀಕ್, ದಿ ಜಡ್ಜ್‌ಮೆಂಟ್, ಪೌಡರ್ ಮತ್ತು ಕಾಲಪತ್ಥರ್ ಸಿನಿಮಾದಲ್ಲಿ ಧನ್ಯಾ ರಾಜ್‌ಕುಮಾರ್ ಅಭಿನಯಿಸಿದ್ದಾರೆ. ಕಳೆದ ವರ್ಷ ನಾಲ್ಕು ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗಿದೆ.
ಸಿಕ್ಕಾಪಟ್ಟೆ ಫಿಟ್ನೆಸ್ ಮತ್ತು ಬ್ಯೂಟಿ ಕಾನ್ಶಿಯಸ್ ಆಗಿರುವ ಧನ್ಯಾ ರಾಮ್‌ಕುಮಾರ್ ಇದೀಗ ಕ್ಯೂಟ್ ಪಿಂಕ್ ಡ್ರೆಸ್ ತೊಟ್ಟು ಮಿಂಚಿದ್ದಾರೆ. ಸದ್ಯ ಈ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಧನ್ಯಾ ರಾಮ್‌ಕುಮಾರ್ ಶೇರ್ ಮಾಡಿಕೊಂಡಿರುವ ಒಂದಷ್ಟು ಫೋಟೋಗಳಲ್ಲಿ ಅವರ ಎಡ ಭುಜದ ಬಳಿ ಇರೋ ಚಿಕ್ಕ ಕ್ವಶ್ಚನ್ ಮಾರ್ಕ್ ಟ್ಯಾಟೂ ಹೈಲೈಟ್ ಆಗಿದ್ದು, ಸಖತ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ.
ಧನ್ಯಾ ರಾಮ್‌ಕುಮಾರ್ ಫೋಟೋಗಳನ್ನ ನೋಡಿದ ನೆಟ್ಟಿಗರು ಹಾರ್ಟ್ ರೂಪದ ಎಮೋಜಿ ಹಾಕಿದ್ದಾರೆ. ಇನ್ನು ಕೆಲವ್ರು ಬೆಂಕಿ ಅನ್ನುವಂತಹ ಎಮೋಜಿ ಹಾಕಿ ಕಮೆಂಟ್ ಮಾಡಿದ್ದಾರೆ.
ದೊಡ್ಡ ಮನೆಯಿಂದ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿರುವ ಧನ್ಯಾ ರಾಮ್‌ಕುಮಾರ್, ಜನರ ಪ್ರೀತಿ ಗಳಿಸಬೇಕು ಸೈ ಎನ್ನಿಸಿಕೊಳ್ಳಬೇಕು ಎಂದು ನಟನೆ ತರಬೇತಿ ಪಡೆದು ತಮ್ಮ ಜರ್ನಿಯನ್ನು ಆರಂಭಿಸಿದ್ದರು.
ನಿನ್ನ ಸನಿಹಕೆ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಧನ್ಯ ರಾಮ್‌ಕುಮಾರ್, ಚೊಚ್ಚಲ ಸಿನಿಮಾದಲ್ಲಿ ಫಿಲ್ಮ್ ಫೇರ್ ಪ್ರಶಸ್ತಿ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಇದಷ್ಟೇ ಅಲ್ಲದೇ ಕಣ್ಣಾಮುಚ್ಚಾಲೆ ತೀರ್ಪು, ಪುಡಿ ಹಾಗೂ ಕಾಲಪತ್ತರ್ ಸಿನಿಮಾಗಳಲ್ಲೂ ಧನ್ಯ ರಾಮ್‌ಕುಮಾರ್ ನಟಿಸಿದ್ದಾರೆ.
ನಿನ್ನ ಸನಿಹಕೆ ಚಿತ್ರದ ಮೂಲಕವೇ ಧನ್ಯಾ ರಾಮ್‌ಕುಮಾರ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ನಟ ಸೂರಜ್ ಗೌಡ ಈ ಚಿತ್ರದಲ್ಲಿ ಧನ್ಯಾ ರಾಮ್‌ಕುಮಾರ್‌ಗೆ ಜೋಡಿ ಆಗಿದ್ದರು. ಹಾಗೇನೆ ಈ ಚಿತ್ರವನ್ನು ಇವರು ಡೈರೆಕ್ಷನ್ ಕೂಡ ಮಾಡಿದ್ದರು ಅಂತಲೇ ಹೇಳಬಹುದು.