ಜೀವನಕ್ಕೆ ಹುಮ್ಮಸ್ಸು ತಂದ ಡಾ. ರಾಜ್ ಹಾಡುಗಳಿದು; ನೀವು ಕೇಳಿದ್ದೀರಾ?
ಮಾನವನಾಗಿ ಹುಟ್ಟಿದ ಮೇಲೆ ಒಮ್ಮೆಯಾದರೂ ಅಣ್ಣಾವ್ರ ಸಿನಿಮಾ ಹಾಡುಗಳನ್ನು ಕೇಳಬೇಕು. ಈ ಲಿಸ್ಟ್‌ನಲ್ಲಿರುವ ಹಾಡುಗಳನ್ನು ಕೇಳಿದ್ದೀರಾ?

ಕನ್ನಡ ಚಿತ್ರರಂಗ ವರನಟ, ಓನ್ ಆಂಡ್ ಓನ್ಲಿ ನಟಸಾರ್ವಭೌಮ ಡಾ. ರಾಜ್‌ಕುಮಾರ್ (Dr Rajkumar) ಅವರ 94ನೇ ಹುಟ್ಟುಹಬ್ಬದ ಸಂಭ್ರಮ.
ರಾಜ್ಯಾದ್ಯಂತ ಅಭಿಮಾನಿಗಗಳು ರಾಜ್ ಅಣ್ಣ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಈ ವೇಳೆ ಅಣ್ಣಾವ್ರ ಸೂಪರ್ ಹಿಟ್ ಹಾಡುಗಳನ್ನು ಕೇಳುತ್ತಿದ್ದಾರೆ.
ಅಣ್ಣಾವ್ರ ಅದೆಷ್ಟೋ ಹಾಡುಗಳು ಜೀವನಕ್ಕೆ ಹುಮ್ಮಸ್ಸು ತಂದಿದೆ. ಬಂಗಾರದ ಮನುಷ್ಯ ಸಿನಿಮಾ ನೋಡಿ ಅದೆಷ್ಟೋ ಜನ ಕೆಲಸ ಬಿಟ್ಟು ಹಳ್ಳಿ ಕಡೆ ಮುಖ ಮಾಡಿದರು.
'ಬಾಳುವಂತ ಹೂವೇ…. ಬಾಡುವಾಸೆ ಏಕೆ' ಹಾಡು ಕೇಳಿದಾಗ ಭರವಸೆ ಸಿಕ್ಕಿದ್ದು ಸುಳ್ಳಲ್ಲ. ಆಕಸ್ಮಿಕ ಚಿತ್ರದ ಹಾಡು ಇದಾಗಿದ್ದು ಅಣ್ಣಾವ್ರ ಜೊತೆ ಮಾಧವಿ ಕಾಣಿಸಿಕೊಂಡಿದ್ದಾರೆ.
'ಬಾನಿಗೊಂದು ಎಲ್ಲೆ ಎಲ್ಲಿದೆ ? ನಿನ್ನಾಸೆಗೆಲ್ಲಿ ಕೊನೆ ಇದೆ?!'ಹಾಡು ಪ್ರೇಮದ ಕಾಣಿಕೆ ಚಿತ್ರದ್ದು. ಈ ಸಿನಿಮಾದಲ್ಲಿ ರಾಜ್‌ಕುಮಾರ್ ಜೊತೆ ಆರತಿ ಅಭಿನಯಿಸಿದ್ದಾರೆ. ಕೇಳಿದಾಗ ಸಂಯಮ ಸಿಕ್ಕದ್ದು ಸುಳ್ಳಲ್ಲ.
'ಏನೆಂದು ನಾ ಹೇಳಲಿ?ಮಾನವನಾಸೆಗೆ ಕೊನೆ ಎಲ್ಲಿ !?'ಹಾಡು ಗಿರಿಯ ಕಾಣಿಕೆ ಚಿತ್ರದ ಹಾಡು ಕೇಳಿದಾಗ ವಸ್ತುಸ್ಥಿತಿಯ ಕುರಿತು ಮರುಕ ಹುಟ್ಟಿದ್ದು ಸುಳ್ಳಲ್ಲ.
'ಹಾಲಲ್ಲಾದರು ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ' ಹಾಡು ದೇವತಾ ಮನುಷ್ಯ ಚಿತ್ರದ್ದು ಕೇಳಿದಾಗ ಹಾತಾಶ ಮನಸ್ಸಿಗೆ ಸಾಂತ್ವನ ಸಿಕ್ಕದ್ದು ಸುಳ್ಳಲ್ಲ.
'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಆಕಸ್ಮಿಕ ಚಿತ್ರದ ಹಾಡು . ಹಾಡಿಗಾದ ಭಾಷೆಯ ಕುರಿತು ಧನ್ಯತೆ ಮೂಡಿದ್ದು ಸುಳ್ಳಲ್ಲ .
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.