- Home
- Entertainment
- Sandalwood
- ಆಫರ್ಸ್ ಬಂದ್ರೂ ಸಿನಿಮಾಕ್ಕೆ ಬೆನ್ನು ತೋರಿದ ಐಶ್ವರ್ಯ ಉಪೇಂದ್ರ: ಮಗಳ ಬಗ್ಗೆ ನಟ ಹೇಳಿದ್ದೇನು
ಆಫರ್ಸ್ ಬಂದ್ರೂ ಸಿನಿಮಾಕ್ಕೆ ಬೆನ್ನು ತೋರಿದ ಐಶ್ವರ್ಯ ಉಪೇಂದ್ರ: ಮಗಳ ಬಗ್ಗೆ ನಟ ಹೇಳಿದ್ದೇನು
ರಿಯಲ್ ಸ್ಟಾರ್ ಉಪೇಂದ್ರ ಅವರ ಪುತ್ರಿ ಐಶ್ವರ್ಯ ಉಪೇಂದ್ರ 'ದೇವಕಿ' ಚಿತ್ರದ ನಂತರ ಬೇರೆ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಅವರಿಗೆ ಸಾಕಷ್ಟು ಆಫರ್‌ಗಳು ಬಂದರೂ, ನಟನೆಯಲ್ಲಿ ಆಸಕ್ತಿ ಇಲ್ಲದ ಕಾರಣ ಎಲ್ಲವನ್ನೂ ನಿರಾಕರಿಸುತ್ತಿದ್ದಾರೆ ಎಂದು ಉಪೇಂದ್ರ ಅವರೇ ಬಹಿರಂಗಪಡಿಸಿದ್ದಾರೆ.

ಸ್ಟಾರ್ ಮಕ್ಕಳಿಗೆ ಛಾನ್ಸ್
ಸಾಮಾನ್ಯವಾಗಿ ಸ್ಟಾರ್ ಮಕ್ಕಳು ಸ್ಟಾರ್ ಆಗುವುದು ಇದ್ದೇ ಇದೆ. ಅವರಿಗೆ ಸಿನಿಮಾದಲ್ಲಿಯೂ ಸಹಜವಾಗಿ ಆಫರ್‌ಗಳು ಸಿಗುತ್ತವೆ. ಎಲ್ಲಾ ಪ್ರಕರಣದಲ್ಲಿ ಅಲ್ಲದಿದ್ದರೂ ಬಹುತೇಕವಾಗಿ ಸ್ಟಾರ್ ಮಕ್ಕಳು, ಏನೂ ಹಿನ್ನೆಲೆ ಇಲ್ಲದೇ ಬರುವ ಮಕ್ಕಳಿಗಿಂತಲೂ ಹೆಚ್ಚಿನ ಆಫರ್ ಪಡೆಯುವುದು ಇದೆ. ಒಮ್ಮೆ ಎಂಟ್ರಿ ಕೊಟ್ಟ ಮೇಲೆ ಅವರ ತನವನ್ನು ಅವರು ಸಾಬೀತು ಮಾಡಿಕೊಳ್ಳಬೇಕಷ್ಟೇ. ಕೊನೆಗೆ ಉಳಿಯುವುದು ಅದೊಂದೇ.

ಉಪ್ಪಿ ಪುತ್ರಿ ಐಶ್ವರ್ಯ
ಅದೇ ರೀತಿ ರಿಯಲ್ ಸ್ಟಾರ್ ಉಪೇಂದ್ರ ಅವರ ಪುತ್ರಿ ಐಶ್ವರ್ಯ ಉಪೇಂದ್ರ ಅವರೂ ಸಿನಿಮಾ ಲೋಕಕ್ಕೆ ಕಾಲಿಟ್ಟಿದ್ದರು. 2019ರಲ್ಲಿ ರಿಲೀಸ್ ಆಗಿದ್ದ ಹೌರಾ ಬ್ರಿಡ್ಜ್' ಚಿತ್ರದಲ್ಲಿ ಐಶ್ವರ್ಯ ಉಪೇಂದ್ರ ನಟಿಸಿದ್ದರು. ಆ ಬಳಿಕ ಈ ಚಿತ್ರದ ಹೆಸರನ್ನು ದೇವಕಿ ಎಂದು ಬದಲಾಯಿಸಲಾಗಿತ್ತು.
ದೇವಕಿ ಚಿತ್ರದಲ್ಲಿ ನಟನೆ
ಅಮ್ಮ ಪ್ರಿಯಾಂಕ ಉಪೇಂದ್ರ ಜೊತೆ ಈ ಚಿತ್ರದಲ್ಲಿ ಐಶ್ವರ್ಯ ಕಾಣಿಸಿಕೊಂಡಿದ್ದರು. 'ದೇವಕಿ' ಆಗಿ ಪ್ರಿಯಾಂಕಾ ಕಾಣಿಸಿಕೊಂಡಿದ್ದರು. ಚಿತ್ರಕ್ಕೆ ಸರಿ ಎನ್ನಿಸುವ ಹೆಸರು ಇರಲಿ ಎಂದು ನಿರ್ದೇಶಕ ಲೋಹಿತ್ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದರು. ನಟ ಉಪೇಂದ್ರ ಪುತ್ರಿ ಐಶ್ವರ್ಯ ಉಪೇಂದ್ರ ಮೊದಲ ಬಾರಿಗೆ ಈ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದರು.
ಏಕೆ ಕಾಣಿಸಿಕೊಳ್ತಿಲ್ಲ ಐಶ್ವರ್ಯ?
ಆದರೆ ಅದಾದ ಬಳಿಕ ಐಶ್ವರ್ಯ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿಲ್ಲ. ಏಳು ವರ್ಷವಾದರೂ ಒಂದೇ ಸಿನಿಮಾ ಮಾಡಲಿಲ್ಲ. ಇದೀಗ ಐಶ್ವರ್ಯ ಅವರಿಗೆ 21 ವರ್ಷ ವಯಸ್ಸು. ನಾಯಕಿಯಾಗಿ ಕಾಣಿಸಿಕೊಳ್ಳುವ ವಯಸ್ಸಿದು. ಆದರೂ ಚಿತ್ರದಲ್ಲಿ ಏಕೆ ಕಾಣಿಸಿಕೊಳ್ಳಲಿಲ್ಲ ಎನ್ನುವುದು ಅವರ ಅಭಿಮಾನಿಗಳ ಪ್ರಶ್ನೆ.
ಸಿಕ್ಕಾಪಟ್ಟೆ ಆಫರ್ಸ್
sampoornanewsಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ನಟ ರಿವೀಲ್ ಮಾಡಿದ್ದಾರೆ. ಒಂದು ಚಿತ್ರ ಆದ ಮೇಲೆ ಮಗಳಿಗೆ ಸಿಕ್ಕಾಪಟ್ಟೆ ಆಫರ್ಸ್ ಬರ್ತಿವೆ. ಆದರೆ ಅವಳಿಗೆ ಸಿನಿಮಾದಲ್ಲಿ ಸ್ವಲ್ಪವೂ ಇಷ್ಟವಿಲ್ಲ. ಅವಳ ಮನಸ್ಸಿನಲ್ಲಿ ಏನಿದೆ ಎನ್ನುವುದು ಗೊತ್ತಿಲ್ಲ. ಆಫರ್ಸ್ ಎಲ್ಲಾ ರಿಜೆಕ್ಟ್ ಮಾಡುತ್ತಿದ್ದಾಳೆ, ಸಿನಿಮಾ ಬೇಡ ಎನ್ನುತ್ತಿದ್ದಾಳೆ. ಅದಕ್ಕಾಗಿ ನಾವು ಒತ್ತಾಯ ಮಾಡುತ್ತಿಲ್ಲ ಎಂದಿದ್ದಾರೆ.
ಪುತ್ರನ ಮೊದಲ ಸಿನಿಮಾ
ಸದ್ಯ ಮಗ ಆಯುಷ್ ಒಂದು ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾನೆ. ಈ ಸಿನಿಮಾ ಬಳಿಕ ಅವನ ನಿರ್ಧಾರ ಏನು ಎನ್ನುವುದನ್ನು ನೋಡಬೇಕಿದೆ. ಅವನಿಗೆ ಇಷ್ಟವಾದರೆ ಮುಂದುವರೆಯುತ್ತಾನೆ, ಇಲ್ಲದಿದ್ದರೆ ಅವನ ಇಷ್ಟ. ಏನು ಮಾಡುತ್ತಾನೋ ನೋಡಬೇಕಿದೆ ಎಂದು ಉಪೇಂದ್ರ ಹೇಳಿದ್ದಾರೆ.
ಹೆಸರಿಡದ ಫಿಲ್ಮ್
ಅಂದಹಾಗೆ ಆಯುಷ್, ಶ್ರೀಕಲ್ಪವೃಕ್ಷ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ, ಅಭಿಷೇಕ್ ಎನ್ ಸಿರಿವಂತ್ ನಿರ್ಮಾಣ ಮಾಡುತ್ತಿರುವ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮೇಕಿಂಗ್ ಹಂತದಲ್ಲೇ ಇದೊಂದು ರೊಮ್ಯಾಂಟಿಕ್ ಲವ್ ಸ್ಟೋರಿ ಎನ್ನುವುದು ಗೊತ್ತಾಗುತ್ತಿದೆ. ಕಾಶ್ಮೀರದ ಕೊರೆಯುವ ಚಳಿಯಲ್ಲಿ, ಹಿಮಚ್ಚಾದಿತ ಲೊಕೇಶನ್‌ಗಳನ್ನು ದೃಶ್ಯಗಳನ್ನು ಸೆರೆಹಿಡಿಯಲಾಗ್ತಿದೆ. ಹಾಡುಗಳನ್ನು ಕೂಡ ಅಲ್ಲೇ ಚಿತ್ರೀಕರಣ ಮಾಡಿದ್ದಾರೆ. ಚಿತ್ರದ ನಾಯಕಿ ಯಾರು? ಬೇರೆ ಯಾರೆಲ್ಲಾ ಚಿತ್ರದಲ್ಲಿ ನಟಿಸಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

