ಪತ್ನಿ ಸಂಗೀತಾ ಭಟ್ ಬಿಕಿನಿ ಫೋಟೋ ಕ್ಲಿಕ್ ಮಾಡಿದ 'ಭಾಗ್ಯ ಲಕ್ಷ್ಮಿ' ಧಾರಾವಾಹಿ ನಟ ತಾಂಡವ್!
ವೈರಲ್ ಆಯ್ತು ನಟಿ ಸಂಗೀತಾ ಭಟ್ ಪಿಂಕ್ ಬಿಕಿನಿ ಲುಕ್ ಫೋಟೋ . ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ಫೋಟೋ ಕ್ಲಿಕ್ ಮಾಡಿದ್ದು ಪತಿನೇ....
ಕ್ರಿಯೇಟಿವ್ ಕನ್ನಡ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ನಾಯಕಿಯಾಗಿ ಹೆಸರು ಮಾಡಿರುವ ಸಂಗೀತಾ ಭಟ್ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ.
ಮೀಟೂ ಆರೋಪದ ನಂತರ ಸಂಗೀತಾ ಬಣ್ಣದ ಲೋಕದಿಂದ ಕೊಂಚ ದೂರ ಉಳಿದು ಬಿಟ್ಟರು. ಆದರೆ ಅವರ ಪತಿ ಸುದರ್ಶನ್ ಕಿರುತೆರೆಗೆ ಎಂಟ್ರಿ ಕೊಟ್ಟರು.
ಇನ್‌ಸ್ಟಾಗ್ರಾಂನಲ್ಲಿ ಪಿಂಕ್ ಬಿಕಿನಿ ಧರಿಸಿಕೊಂಡು ಪೂಲ್ ಬಳಿ ಸಂಗೀತಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ. 'Imperfection is beauty.Madness is genius' ಎಂದು ಬರೆದುಕೊಂಡಿದ್ದಾರೆ.
'ತುಂಬಾ ಬೋರಿಂಗ್ ವ್ಯಕ್ತಿ ಆಗಿರುವುದಕ್ಕಿಂತ ತುಂಬಾ ಹಾಸ್ಯಾಸ್ಪದವಾಗಿರುವುದು ಬೇಸ್ಟ್ ಎಂದು ಮರ್ಲಿನ್ ಮನ್ರೋ ಹೇಳಿದ್ದಾರೆ' ಎಂದಿದ್ದಾರೆ.
ಈ ಫೋಟೋದ ಮತ್ತೊಂದು ವಿಶೇಷತೆ ಏನೆಂದರೆ ಸಂಗೀತಾ ಭಟ್ ಈ ಹಾಟ್ ಫೋಟೋಗಳನ್ನು ಕ್ಲಿಕ್ ಮಾಡಿರುವುದು ಪತಿ ತಾಂಡವ್ ಉರ್ಫ್ ಸುದರ್ಶನ್.
ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಈ ಫೋಟೋಗಳಿಗೆ ವಿಚಿತ್ರ ವಿಚಿತ್ರ ಕಾಮೆಂಟ್‌ಗಳು ಬರಬಹುದು ಎಂದು ಸಂಗೀತಾ ಕಾಮೆಂಟ್ ಮಾಡುವ ಆಯ್ಕೆನ ಡಿಲೀಟ್ ಮಾಡಿದ್ದಾರೆ.