MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಅವಳಿ ಮಕ್ಕಳ ಆಗಮನಕ್ಕೆ ಕ್ಷಣಗಣನೆ... ಹೆಸರು ರಿವೀಲ್​ ಮಾಡಿದ ನಟಿ Bhavana Ramanna

ಅವಳಿ ಮಕ್ಕಳ ಆಗಮನಕ್ಕೆ ಕ್ಷಣಗಣನೆ... ಹೆಸರು ರಿವೀಲ್​ ಮಾಡಿದ ನಟಿ Bhavana Ramanna

ಐವಿಎಫ್​ ಮೂಲಕ ಅವಳಿ ಮಕ್ಕಳನ್ನು ಹೆರಲಿರುವ ನಟಿ ಭಾವನಾ ಮಕ್ಕಳ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಇದೇ ವೇಳೆ ಇದಾಗಲೇ ಹೆಣ್ಣು ಮಗುವಿನ ಹೆಸರನ್ನೂ ಡಿಸೈಡ್​ ಮಾಡಿದ್ದಾರೆ ನಟಿ. ಅವರು ಹೇಳಿದ್ದೇನು? 

2 Min read
Author : Suchethana D
| Updated : Aug 04 2025, 11:39 AM IST
Share this Photo Gallery
  • FB
  • TW
  • Linkdin
  • Whatsapp
18
ಭಾವನಾ ಮಕ್ಕಳ ಆಗಮನಕ್ಕೆ ಕ್ಷಣಗಣನೆ...
Image Credit : Youtube

ಭಾವನಾ ಮಕ್ಕಳ ಆಗಮನಕ್ಕೆ ಕ್ಷಣಗಣನೆ...

ಐವಿಎಫ್​ ಮೂಲಕ ಅವಳಿ ಮಕ್ಕಳನ್ನು ಹೆರಲಿರುವ ನಟಿ ಭಾವನಾ ರಾಮಣ್ಣ (Bhavana Ramanna) ಸದ್ಯ ಸಕತ್​ ಸುದ್ದಿಯಲ್ಲಿದ್ದಾರೆ. ಮೊನ್ನೆಯಷ್ಟೇ ನಟಿ ಅದ್ಧೂರಿಯ ಸೀಮಂತ ಮಾಡಿಕೊಂಡಿದ್ದಾರೆ. ಇನ್ನೇನು ಮಕ್ಕಳ ಆಗಮನಕ್ಕೆ ನಟಿ ಸೇರಿದಂತೆ ಅವರ ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ. ಅಷ್ಟಕ್ಕೂ ಐವಿಎಫ್​ ಮೂಲಕ ಹಲವಾರು ಮಂದಿ ಮಕ್ಕಳನ್ನು ಪಡೆಯುತ್ತಿದ್ದರೂ, ಭಾವನಾ ಸುದ್ದಿ ಮಾತ್ರ ಸಕತ್​ ಸದ್ದು ಮಾಡುತ್ತಿರಲು ಕೆಲವು ಕಾರಣಗಳು ಇವೆ. ಮೊದಲನೆಯದ್ದು ಆಕೆ ಸೆಲೆಬ್ರಿಟಿ, ಇನ್ನೊಂದು ಆಕೆ ಅವಿವಾಹಿತೆ, ಮತ್ತೊಂದು ಮದುವೆಯಾಗಲು ಆಕೆ ಒಪ್ಪದೇ ಮಕ್ಕಳನ್ನು ಪಡೆಯಲು ಚಿಂತಿಸಿರುವುದು... ಇವೆಲ್ಲವೂ ಸೇರಿ ನಟಿ ಭಾವನಾ ಆರು ತಿಂಗಳ ಗರ್ಭಿಣಿ ಎನ್ನುವ ಸುದ್ದಿ ತಿಳಿದಾಗಿನಿಂದಲೂ ಇದರ ಬಗ್ಗೆ ಪರ-ವಿರೋಧಗಳ ದೊಡ್ಡ ಚರ್ಚೆಯೇ ಶುರುವಾಗಿದೆ. In Vitro Fertilization (IVF) ಮೂಲಕ ಮಗು ಪಡೆಯುತ್ತಿರುವುದಕ್ಕೆ ಹಲವರು ಅಭಿನಂದನೆ ಸಲ್ಲಿಸಿದರೆ, ಮತ್ತಷ್ಟು ಮಂದಿ ಈ ಕ್ರಮ ಸರಿಯಲ್ಲ ಎನ್ನುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ಮದುವೆಯ ಬಗ್ಗೆ ಮಾತನಾಡಿದ್ದ ಭಾವನಾ
Image Credit : Asianet News

ಮದುವೆಯ ಬಗ್ಗೆ ಮಾತನಾಡಿದ್ದ ಭಾವನಾ

ಈ ಬಗ್ಗೆ ಇದಾಗಲೇ ನಟಿ ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ನಿರ್ಧಾರವನ್ನು ಮಾಡಿದ್ಯಾಕೆ ಎನ್ನುವ ಬಗ್ಗೆಯೂ ಹೇಳಿದ್ದಾರೆ. 40 ವರ್ಷ ವಯಸ್ಸಿನ ಭಾವನಾ ಮದುವೆಯ ಬಗ್ಗೆ ತಾತ್ಸಾರ ಏಕೆ ಹೊಂದಿದ್ದಾರೆ ಎನ್ನುವ ಪ್ರಶ್ನೆಯೂ ಎದುರಾಗಿದ್ದು, ಅದಕ್ಕೂ ನಟಿ ಇದಾಗಲೇ ಉತ್ತರ ಕೊಟ್ಟಿಯಾಗಿದೆ.

Related Articles

Related image1
ಮುಕೇಶ್​ ಅಂಬಾನಿ ಕುಟುಂಬದಲ್ಲಿರೋದು ನಾಲ್ವರು IVF ಮಕ್ಕಳು! ಕುತೂಲಹದ ವಿಷ್ಯ ರಿವೀಲ್​
Related image2
IVF ಹೇಗೆಲ್ಲಾ ನಡೆಯತ್ತೆ? ಕರ್ನಾಟಕದಲ್ಲಿ ಎಷ್ಟು ಖರ್ಚಾಗತ್ತೆ? 5 ಹಂತಗಳ ಸಂಪೂರ್ಣ ಮಾಹಿತಿ ಕೊಟ್ಟ ವೈದ್ಯೆ
38
ಮದುವೆಯ ಬಗ್ಗೆ ಮಾತನಾಡಿದ್ದ ಭಾವನಾ
Image Credit : X

ಮದುವೆಯ ಬಗ್ಗೆ ಮಾತನಾಡಿದ್ದ ಭಾವನಾ

ನನಗೆ ಸಂಗಾತಿ ಬೇಕೇ ಬೇಕು ಎನ್ನುವ ಮನಸ್ಥಿತಿ ಕೂಡ ಇಲ್ಲ. ನನ್ನ ಮಾತುಗಳನ್ನೆಲ್ಲಾ ಕೇಳಿಸಿಕೊಳ್ಳಲು ಒಳ್ಳೆಯ ಸ್ನೇಹಿತರು ಇದ್ದಾರೆ. ಅದಕ್ಕಾಗಿ ಇವೆಲ್ಲಾ ಬೇಕು ಎನ್ನಿಸುವುದಿಲ್ಲ ಎನ್ನುತ್ತಲೇ ಒಂದು ವೇಳೆ ಏನಾದರೂ ಮುಂದಿನ ದಿನಗಳಲ್ಲಿ ಹಾಗೆ ಆದರೆ ಆಗಲೂಬಹುದು ಎನ್ನುವ ಮೂಲಕ ಮದುವೆಯೇ ಆಗಬೇಕು ಎಂದು ಹಣೆಯಲ್ಲಿ ಬರೆದಿದ್ದರೆ ಮದುವೆ ಆಗುತ್ತೇನೆ ಎಂದಿದ್ದಾರೆ.

48
ಮಕ್ಕಳ ಹೆಸರಿನದ್ದೇ ಚರ್ಚೆ
Image Credit : Asianet News

ಮಕ್ಕಳ ಹೆಸರಿನದ್ದೇ ಚರ್ಚೆ

ಸಾಮಾನ್ಯವಾಗಿ ಗರ್ಭಿಣಿಯಾದ ಬಳಿಕ ಅಪ್ಪ-ಅಮ್ಮ ಆಗುವವರು ತಮ್ಮ ಮಕ್ಕಳ ಹೆಸರು ಏನಿಡಬಹುದು ಎಂದು ಚರ್ಚಿಸುವುದು ಸರ್ವೇ ಸಾಮಾನ್ಯ. ಹುಟ್ಟುವ ಮಗು ಗಂಡೋ, ಹೆಣ್ಣೋ ಎಂದು ತಿಳಿದಿರದ ಕಾರಣ, ಎರಡೂ ಹೆಸರುಗಳನ್ನು ಹುಡುಕಿರುತ್ತಾರೆ. ಹೆಚ್ಚಿನವರು ನಕ್ಷತ್ರ, ರಾಶಿಗೆ ಅನುಗುಣವಾಗಿ ಹೆಸರನ್ನು ಇಟ್ಟರೂ ಕೊನೆಗೆ ಕರೆಯುವುದಕ್ಕಾಗಿ ಮುದ್ದಾದ ಹೆಸರುಗಳನ್ನು ಇಡಲು ಮೊದಲೇ ರೆಡಿಯಾಗಿರುತ್ತಾರೆ.

58
ಹೆಣ್ಣು ಮಗುವಿನ ಹೆಸರು ರೆಡಿ
Image Credit : X

ಹೆಣ್ಣು ಮಗುವಿನ ಹೆಸರು ರೆಡಿ

ಅದೇ ರೀತಿ ಭಾವನಾ ಕೂಡ ಹೆಸರು ಏನು ಇಡಬೇಕು ಎಂದು ನಿಗದಿ ಮಾಡಿದ್ದಾರೆ. ಆದರೆ ಅವರಿಗೆ ಅವಳಿ ಮಕ್ಕಳಾಗುವುದು ಕನ್​ಫರ್ಮ್​ ಆಗಿದೆ. ಆದರೆ ಮಕ್ಕಳು ಗಂಡೋ, ಹೆಣ್ಣೋ ಅಥವಾ ಎರಡೂ ಗಂಡೋ, ಎರಡೂ ಹೆಣ್ಣೋ ಎನ್ನುವುದು ತಿಳಿಯಬೇಕಿದೆ.

68
ಹೆಣ್ಣು ಮಗುವಿನ ಹೆಸರು ರೆಡಿ
Image Credit : X

ಹೆಣ್ಣು ಮಗುವಿನ ಹೆಸರು ರೆಡಿ

ಮಕ್ಕಳಿಗೆ ಏನೆಂದು ಹೆಸರು ಇಡುವಿರಿ ಎನ್ನುವ ಪ್ರಶ್ನೆಗೆ ಭಾವನಾ ಅವರು, ಸದ್ಯ ಹೆಣ್ಣುಮಗುವಿನ ಹೆಸರನ್ನು ಮಾತ್ರ ಯೋಚನೆ ಮಾಡಿದ್ದೇನೆ. ಆಕೆಗೆ ನನ್ನ ಅಮ್ಮನ ಅಮ್ಮ ಅಂದ್ರೆ ಅಜ್ಜಿಯ ಹೆಸರಾಗಿರುವ ರುಕ್ಮಿಣಿ (Rukmini) ಇಡಬೇಕು ಎಂದುಕೊಂಡಿದ್ದೇನೆ ಎಂದಿದ್ದಾರೆ. ಆದರೆ ಗಂಡು ಮಗುವಿನ ಹೆಸರನ್ನು ಇನ್ನೂ ಯೋಚಿಸಿಲ್ಲ ಎಂದಿರೋ ನಟಿಗೆ ಮನಸ್ಸಿನಲ್ಲಿ ಒಂದಾದರೂ ಹೆಣ್ಣುಮಗು ಆಗಲಿ ಎನ್ನುವ ಕಾತರ ಇರುವುದು ತಿಳಿದಿದೆ.

78
ಐವಿಎಫ್​ ಚಿಕಿತ್ಸೆ ನಡೆಯುವುದು ಹೇಗೆ?
Image Credit : Asianet News

ಐವಿಎಫ್​ ಚಿಕಿತ್ಸೆ ನಡೆಯುವುದು ಹೇಗೆ?

ಇನ್ನು ಈ ಚಿಕಿತ್ಸೆ ಕುರಿತು ಹೇಳುವುದಾದರೆ, ಐವಿಎಫ್ ಪ್ರಕ್ರಿಯೆಯು ಸಾಮಾನ್ಯವಾಗಿ ಅಂಡಾಶಯದ ಪ್ರಚೋದನೆಯಿಂದ ಭ್ರೂಣ ವರ್ಗಾವಣೆಯವರೆಗೆ ಸುಮಾರು 4-6 ವಾರಗಳನ್ನು ತೆಗೆದುಕೊಳ್ಳುತ್ತದೆ. IVF ಪ್ರಕ್ರಿಯೆಯಲ್ಲಿ, ಮೊಟ್ಟೆಗಳನ್ನು ಉತ್ಪಾದಿಸಲು ಅಂಡಾಶಯಗಳನ್ನು ಉತ್ತೇಜಿಸಲು ಮಹಿಳೆಗೆ ಆರಂಭದಲ್ಲಿ ಕೆಲವಷ್ಟು ಔಷಧಿಗಳನ್ನು ನೀಡಲಾಗುತ್ತದೆ. ಮೊಟ್ಟೆಗಳು ಪಕ್ವವಾದ ನಂತರ, ಅವುಗಳನ್ನು ಅಂಡಾಶಯಗಳಿಂದ ಹೊರತೆಗೆಯಲಾಗುತ್ತದೆ.

88
ಐವಿಎಫ್​ ಚಿಕಿತ್ಸೆ ನಡೆಯುವುದು ಹೇಗೆ?
Image Credit : Google

ಐವಿಎಫ್​ ಚಿಕಿತ್ಸೆ ನಡೆಯುವುದು ಹೇಗೆ?

ಪ್ರಯೋಗಾಲಯದಲ್ಲಿ ವೀರ್ಯದೊಂದಿಗೆ ಮೊಟ್ಟೆಗಳನ್ನು ಫಲವತ್ತಾಗಿಸಲಾಗುತ್ತದೆ. ಫಲವತ್ತಾದ ಮೊಟ್ಟೆಗಳು ಭ್ರೂಣಗಳಾಗಿ ಬೆಳೆಯಲು ಅವಕಾಶ ನೀಡಲಾಗುತ್ತದೆ. ಉತ್ತಮ ಗುಣಮಟ್ಟದ ಭ್ರೂಣಗಳನ್ನು ಮಹಿಳೆಯ ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ. ಸುಮಾರು 10-14 ದಿನಗಳ ನಂತರ ಗರ್ಭಧಾರಣೆಯ ಪರೀಕ್ಷೆ ಮಾಡಲಾಗುತ್ತದೆ.
 

ಮಗುವಿನ ಹೆಸರಿನ ಬಗ್ಗೆ ನಟಿ ಏನು ಮಾತನಾಡಿದ್ದಾರೆ  ನೋಡಿ…

 
 
 
 
View this post on Instagram
 
 
 
 
 
 
 
 
 
 
 

A post shared by PublicNext (@publicnext_official)

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸ್ಯಾಂಡಲ್‌ವುಡ್
ಸಂಬಂಧಗಳು
ಮದುವೆ
 
3rd ODI • AUS vs ENG 2026
Live
AUSAUS
-
ENGENG
(21.2 ov)144/2
ENG chose to bat.
Schedule ›
2nd TEST • PAK vs SL 2026
Live
PAKPAK
(44.0 ov)143/4
SLSL
98
Day 2 - Session 1
Schedule ›
26th T20 • WBBLT20
HH-WHH-W
Thu, 19 Nov, 2026
PS-WPS-W
10:10 am
Match yet to begin.
Schedule ›
27th T20 • WBBLT20
BH-WBH-W
Thu, 19 Nov, 2026
ST-WST-W
01:40 pm
Match yet to begin.
Schedule ›
2nd ODI • AUS vs ENG 2026
Result
AUSAUS
220
ENGENG
355/6
ENG beat AUS by 135 runs
Schedule ›
5th ODI • NZ vs IND 2026
Result
NZNZ
187
INDIND
209
IND beat NZ by 22 runs
Schedule ›
1st ODI • AUS vs ENG 2026
Result
AUSAUS
132/3
ENGENG
131
AUS won by 7 wickets
Schedule ›
4th ODI • NZ vs IND 2026
Result
NZNZ
333
INDIND
89
NZ beat IND by 244 runs
Schedule ›
3rd ODI • NZ vs IND 2026
abandoned
NZNZ
-
INDIND
-
Match abandoned
Schedule ›
1st TEST • PAK vs SL 2026
Result
PAKPAK
434 & 284/8
SLSL
446
Match drawn
Schedule ›
Latest Videos
Recommended Stories
Recommended image1
ಅಂದಿನ ಕಾಲದಲ್ಲೇ ₹1 ಕೋಟಿ ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿದ್ದ ಕನ್ನಡದ ಮೊದಲ ಸಿನಿಮಾ ಯಾವುದು ಗೊತ್ತಾ?
Recommended image2
ಕನ್ನಡಿಗರೇ, ಈ ಮಾತು ನೆನಪಿಟ್ಟುಕೊಳ್ಳಿ..! ಕನ್ನಡ ಭಾಷೆ ಉಳಿಸುವ ಬಗ್ಗೆ ನಟ ಡಾಲಿ ಧನಂಜಯ್ ಕೊಟ್ಟ ಸಂದೇಶವೇನು?
Recommended image3
ರಾಮಾಯಣ ಅಬ್ಬರದ ನಡುವೆ ವರ್ಷಕ್ಕೆ ₹200 ಕೋಟಿ ಗಳಿಕೆಯ 3 ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟ ನಟ ಸೂರ್ಯ!
Related Stories
Recommended image1
ಮುಕೇಶ್​ ಅಂಬಾನಿ ಕುಟುಂಬದಲ್ಲಿರೋದು ನಾಲ್ವರು IVF ಮಕ್ಕಳು! ಕುತೂಲಹದ ವಿಷ್ಯ ರಿವೀಲ್​
Recommended image2
IVF ಹೇಗೆಲ್ಲಾ ನಡೆಯತ್ತೆ? ಕರ್ನಾಟಕದಲ್ಲಿ ಎಷ್ಟು ಖರ್ಚಾಗತ್ತೆ? 5 ಹಂತಗಳ ಸಂಪೂರ್ಣ ಮಾಹಿತಿ ಕೊಟ್ಟ ವೈದ್ಯೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved