- Home
- Entertainment
- Sandalwood
- ಎವಿಆರ್ ರೆಡ್ಡಿ ಕನ್ನಡ ನಟಿ ವಿವಾದ, ಹಣ ಕೊಟ್ಟಿದ್ದಕ್ಕೆ ದಾಖಲೆ, ಇಬ್ಬರು ಜೊತೆಗಿರೋ ತೀರಾ ಖಾಸಗಿ ಫೋಟೋ ಲೀಕ್!
ಎವಿಆರ್ ರೆಡ್ಡಿ ಕನ್ನಡ ನಟಿ ವಿವಾದ, ಹಣ ಕೊಟ್ಟಿದ್ದಕ್ಕೆ ದಾಖಲೆ, ಇಬ್ಬರು ಜೊತೆಗಿರೋ ತೀರಾ ಖಾಸಗಿ ಫೋಟೋ ಲೀಕ್!
ಎವಿಆರ್ ರೆಡ್ಡಿ ಮತ್ತು ಖ್ಯಾತ ನಟಿಯ ನಡುವಿನ ಗಲಾಟೆ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ಇಬ್ಬರೂ ಆತ್ಮೀಯವಾಗಿರುವ ಖಾಸಗಿ ಫೋಟೋಗಳು ಮತ್ತು ನಟಿಗೆ ಕೋಟಿಗಟ್ಟಲೆ ಹಣ ಹಾಗೂ ವಸ್ತುಗಳನ್ನು ನೀಡಿರುವ ದಾಖಲೆಗಳು ಇದೀಗ ವೈರಲ್ ಆಗಿವೆ. ಈ ಹಿಂದೆ ನಟಿ, ರೆಡ್ಡಿ ವಿರುದ್ಧ ಕಿರುಕುಳದ ಆರೋಪ ಮಾಡಿದ್ದರು.

ತೀರಾ ಖಾಸಗಿ ಫೋಟೋ ಲೀಕ್
ಎವಿಆರ್ ರೆಡ್ಡಿ (Aravind Venkatesh Reddy) ಹಾಗೂ ಖ್ಯಾತ ನಟಿಯ ನಡುವೆ ನಡೆದ ಗಲಾಟೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಇಬ್ಬರೂ ಖಾಸಗಿಯಾಗಿ ಬಹಳ ಆತ್ಮೀಯತೆಯಿಂದ ಇರುವ ಫೋಟೋಗಳು ಲೀಕ್ ಆಗಿದೆ. ಇದರ ಜೊತೆಗೆ ನಟಿಗೆ ಕೋಟಿಗಟ್ಟಲೆ ಹಣ ನೀಡಿರುವುದಕ್ಕೆ ದಾಖಲೆಗಳು ಕೂಡ ಈಗ ವೈರಲ್ ಆಗಿದೆ. ಈ ಹಿಂದೆ ನಟಿಗೆ ಹಣ ಕೊಟ್ಟಿರುವ ಬಗ್ಗೆ ಎವಿಆರ್ ರೆಡ್ಡಿ ಪತ್ರಿಕಾಗೋಷ್ಠಿ ನಡೆಸಿ ಬಹಿರಂಗಪಡಿಸಿದ್ದರು.
ದೂರಾದ ಮೇಲೂ ಕಿರುಕುಳ ಎಂದಿದ್ದ ನಟಿ
ಈ ಪ್ರಕರಣದಲ್ಲಿ ನಟಿ ಎವಿಆರ್ ರೆಡ್ಡಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, “ನನ್ನ ಪಾಡಿಗೆ ನನ್ನನ್ನು ಬಿಡುತ್ತಿಲ್ಲ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ನಟಿಯ ದೂರಿನ ಪ್ರಕಾರ, 2021ರಲ್ಲಿ ಶ್ರೀಲಂಕಾದಲ್ಲಿ ನಡೆದ ಲಾರ್ಸ್ ಕ್ರಿಕೆಟ್ ಕಪ್ ಉದ್ಘಾಟನಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನ ನೀಡಿದ ಸಂದರ್ಭದಲ್ಲಿ ಎವಿಆರ್ ರೆಡ್ಡಿಯವರ ಪರಿಚಯವಾಗಿತ್ತು. ಆ ಬಳಿಕ ಹಲವು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಕರೆದು, ಪರಿಚಯ ಇನ್ನಷ್ಟು ಆತ್ಮೀಯತೆಯ ಹಂತಕ್ಕೆ ತಲುಪಿತು. ಕೆಲ ದಿನಗಳ ಕಾಲ ಇಬ್ಬರೂ ಪರಸ್ಪರ ಸಂಪರ್ಕದಲ್ಲಿದ್ದು, ಜೊತೆಯಲ್ಲಿಯೇ ಕಾಲ ಕಳೆಯುತ್ತಿದ್ದರು ಎಂದು ನಟಿ ತಮ್ಮ ದೂರಿನಲ್ಲಿ ಹೇಳಿಕೊಂಡಿದ್ದರು.
ಆದರೆ, ನಂತರ ಎವಿಆರ್ ರೆಡ್ಡಿಯ ವರ್ತನೆ ಸರಿಯಿಲ್ಲವೆಂದು ಅನಿಸಿದ ಕಾರಣ ತಾವು ಅವರಿಂದ ದೂರವಾಗಲು ನಿರ್ಧರಿಸಿದ್ದಾಗಿ ನಟಿ ಆರೋಪಿಸಿದ್ದಾರೆ. ದೂರವಾದ ನಂತರ ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗಿದ್ದು, ತಮ್ಮ ವಾಸದ ಮನೆಯ ಮಾಲಿಕರಿಗೆ ಅನಾಮಧೇಯ ಪತ್ರ ಬರೆದು ಬೆದರಿಕೆ ಹಾಕಲಾಗಿದೆ ಎಂಬುದನ್ನೂ ದೂರಿನಲ್ಲಿ ಉಲ್ಲೇಖಿಸಿದ್ದರು.
ತೀರಾ ಖಾಸಗಿ ಫೋಟೋಗಳು ವೈರಲ್
ಈ ಪ್ರಕರಣದ ನಡುವೆ ಇದೀಗ ಎವಿಆರ್ ರೆಡ್ಡಿ ಮತ್ತು ನಟಿ ಒಟ್ಟಿಗೆ ಇರುವ ಹಲವು ಫೋಟೋಗಳು ವೈರಲ್ ಆಗಿವೆ. ಫೋಟೋಗಳಲ್ಲಿ ಇಬ್ಬರೂ ತುಂಬಾ ಆತ್ಮೀಯವಾಗಿ ಕಾಣಿಸಿಕೊಂಡಿದ್ದು, ಸೆಲೆಬ್ರೇಷನ್‌ಗಳ ಸಂದರ್ಭದಲ್ಲಿಯೂ ಜೊತೆಯಾಗಿರುವ ದೃಶ್ಯಗಳು ಗಮನ ಸೆಳೆಯುತ್ತಿವೆ. ಈ ವೈರಲ್ ಫೋಟೋಗಳು ಪ್ರಕರಣಕ್ಕೆ ಹೊಸ ತಿರುವು ನೀಡಿವೆ. ಇದರ ಬೆನ್ನಲ್ಲೇ, ನಟಿಗೆ ಎವಿಆರ್ ರೆಡ್ಡಿಯಿಂದ ಲಕ್ಷಾಂತರ ರೂಪಾಯಿ ಹಣ ಹಾಗೂ ಲಕ್ಷಾಂತರ ಮೌಲ್ಯದ ವಸ್ತುಗಳು ನೀಡಲಾಗಿದೆ ಎಂಬ ಮಾಹಿತಿಗಳು ಬಹಿರಂಗವಾಗಿವೆ. ಬೆಲೆಬಾಳುವ ಚಿನ್ನಾಭರಣಗಳು, ದುಬಾರಿ ಫರ್ನಿಚರ್ಸ್, ಫ್ಲೈಟ್ ಟಿಕೆಟ್‌ಗಳು, ಅಕೌಂಟ್ ಸ್ಟೇಟ್ಮೆಂಟ್‌ಗಳು ಸೇರಿದಂತೆ ಅನೇಕ ದಾಖಲೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಸರಿಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ವಸ್ತು ನೀಡಿದ್ದಾಗಿ ಹೇಳಿದ್ದ ರೆಡ್ಡಿ
ಎವಿಆರ್ ರೆಡ್ಡಿಯವರ ಹೇಳಿಕೆಯ ಪ್ರಕಾರ, ನಟಿಗೆ ಸರಿಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ಹಣ ಮತ್ತು ವಸ್ತುಗಳನ್ನು ನೀಡಿದ್ದೇನೆ ಎಂದು ಅವರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಈ ಸಂಬಂಧ ಅವರು ಮಾಧ್ಯಮಗೋಷ್ಠಿ ನಡೆಸಿ, ನಟಿ ಮಾಡಿದ್ದ ಕೆಲವೊಂದು ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದರು.
ನಟಿಗೆ ಎವಿಆರ್ ರೆಡ್ಡಿ ಕೊಟ್ಟಿರುವ ಹಣದ ಲಿಸ್ಟ್
- ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಲೈಟ್ಸ್ ಹಾಗೂ ಟಿವಿ,
- 33 ಸಾವಿರ ರೂಪಾಯಿ ಮೌಲ್ಯದ ಡೈನಿಂಗ್ ಸೆಟ್,
- 1.30 ಲಕ್ಷ ರೂಪಾಯಿ ಮೌಲ್ಯದ ಹಾಸಿಗೆ,
- 10 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಫರ್ನಿಚರ್ಸ್,
- 15 ಲಕ್ಷ ರೂಪಾಯಿಗೂ ಹೆಚ್ಚು ಬೆಲೆಬಾಳುವ ಚಿನ್ನಾಭರಣಗಳು,
- ಒಂದು ಲಕ್ಷ ರೂಪಾಯಿವರೆಗೆ ವೆಚ್ಚವಾದ ಫ್ಲೈಟ್ ಟಿಕೆಟ್‌ಗಳು
ಇವೆಲ್ಲವನ್ನೂ ನಟಿ ಎವಿಆರ್ (ಅರವಿಂದ್) ರೆಡ್ಡಿಯಿಂದ ಪಡೆದಿದ್ದಾರೆಂಬ ಆರೋಪಗಳು ಇದೀಗ ಬಹಿರಂಗವಾಗಿವೆ.
ಸತ್ಯಾಸತ್ಯತೆ ಏನು?
ಒಟ್ಟಿನಲ್ಲಿ, ಎವಿಆರ್ ರೆಡ್ಡಿ ಮತ್ತು ನಟಿಯ ನಡುವಿನ ಈ ವಿವಾದ ದಿನದಿಂದ ದಿನಕ್ಕೆ ಹೊಸ ಮಾಹಿತಿಗಳೊಂದಿಗೆ ತೀವ್ರಗೊಳ್ಳುತ್ತಿದ್ದು, ಆರೋಪ–ಪ್ರತ್ಯಾರೋಪಗಳು, ವೈರಲ್ ಫೋಟೋಗಳು ಮತ್ತು ಹಣಕಾಸು ವ್ಯವಹಾರಗಳ ವಿವರಗಳು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಮುಂದಿನ ದಿನಗಳಲ್ಲಿ ತನಿಖೆ ಮತ್ತು ಕಾನೂನು ಪ್ರಕ್ರಿಯೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

