- Home
- Entertainment
- Sandalwood
- 'ಲೋ ನವೀನ' ಸಿನಿಮಾ ವೀಕ್ಷಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್: ನವೀನ್ ಸಜ್ಜುಗೆ ಹೇಳಿದ ಮಾತು ವೈರಲ್!
'ಲೋ ನವೀನ' ಸಿನಿಮಾ ವೀಕ್ಷಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್: ನವೀನ್ ಸಜ್ಜುಗೆ ಹೇಳಿದ ಮಾತು ವೈರಲ್!
ಗಾಯಕ, ಸಂಗೀತ ನಿರ್ದೇಶಕ ಹಾಗೂ ಇದೀಗ ನಾಯಕನಟನಾಗಿ ಗುರುತಿಸಿಕೊಂಡಿರುವ ನವೀನ್ ಸಜ್ಜು ಅಭಿನಯದ ಚೊಚ್ಚಲ ಸಿನಿಮಾ ‘ಲೋ ನವೀನ’ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದು, ಇದೀಗ ದೊಡ್ಮನೆ ಕುಟುಂಬದಿಂದಲೂ ವಿಶೇಷ ಪ್ರಶಂಸೆ ಸಿಕ್ಕಿದೆ.

ವಿಶೇಷ ಪ್ರಶಂಸೆ
ಗಾಯಕ, ಸಂಗೀತ ನಿರ್ದೇಶಕ ಹಾಗೂ ಇದೀಗ ನಾಯಕನಟನಾಗಿ ಗುರುತಿಸಿಕೊಂಡಿರುವ ನವೀನ್ ಸಜ್ಜು ಅಭಿನಯದ ಚೊಚ್ಚಲ ಸಿನಿಮಾ ‘ಲೋ ನವೀನ’ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದು, ಇದೀಗ ದೊಡ್ಮನೆ ಕುಟುಂಬದಿಂದಲೂ ವಿಶೇಷ ಪ್ರಶಂಸೆ ಸಿಕ್ಕಿದೆ. ವಿಶೇಷವಾಗಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಚಿತ್ರದ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯ ಚಿತ್ರತಂಡದ ಸಂತಸವನ್ನು ಮತ್ತಷ್ಟು ಹೆಚ್ಚಿಸಿದೆ.

ವಿಭಿನ್ನ ಪ್ರಯತ್ನಗಳಿಗೆ ಬೆಂಬಲ
ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಹೆಜ್ಜೆಗುರುತುಗಳಲ್ಲಿ ಸಾಗುತ್ತಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್, ಹೊಸ ಕಲಾವಿದರು ಮತ್ತು ವಿಭಿನ್ನ ಪ್ರಯತ್ನಗಳಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಅದೇ ರೀತಿ, ಇತ್ತೀಚೆಗೆ ಬಿಡುಗಡೆಯಾಗಿ ಗಮನ ಸೆಳೆಯುತ್ತಿರುವ ‘ಲೋ ನವೀನ’ ಚಿತ್ರವನ್ನು ವೀಕ್ಷಿಸಿ ಚಿತ್ರತಂಡವನ್ನು ಅಭಿನಂದಿಸಿದ್ದಾರೆ.
ಚಿತ್ರದ ದೊಡ್ಡ ಶಕ್ತಿ
ಚಿತ್ರ ವೀಕ್ಷಿಸಿದ ಬಳಿಕ ತಂಡದೊಂದಿಗೆ ಸಾಕಷ್ಟು ಸಮಯ ಚರ್ಚೆ ನಡೆಸಿದ ಅಶ್ವಿನಿ, ಚಿತ್ರದ ಕಥಾಹಂದರ, ಸಹಜ ಅಭಿನಯ ಮತ್ತು ಮನರಂಜನಾತ್ಮಕ ನಿರೂಪಣೆಯನ್ನು ಶ್ಲಾಘಿಸಿದ್ದಾರೆ. 'ಸರಳ ಕಥೆಯನ್ನು ಜನರ ಮನಸ್ಸಿಗೆ ತಲುಪುವ ರೀತಿಯಲ್ಲಿ ಹೇಳಿರುವುದು ಚಿತ್ರದ ದೊಡ್ಡ ಶಕ್ತಿ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ನಟ ನವೀನ್ ಸಜ್ಜು ಹಾಗೂ ಇಡೀ ಚಿತ್ರತಂಡದ ಪರಿಶ್ರಮವನ್ನು ಕೊಂಡಾಡಿದ ಅವರು, ಮುಂದಿನ ದಿನಗಳಲ್ಲಿ ಸಿನಿಮಾ ಇನ್ನಷ್ಟು ಜನರಿಗೆ ತಲುಪಲು ಯಾವ ರೀತಿಯ ಹೆಜ್ಜೆ ಇಡಬೇಕು ಎಂಬುದರ ಕುರಿತು ಸಲಹೆಗಳನ್ನೂ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಯುವ ಕಲಾವಿದರು ಅಗತ್ಯ
ಚಿತ್ರದ ಮತ್ತೊಂದು ವಿಶೇಷತೆಯಾಗಿ ಮಂಡ್ಯ ಶೈಲಿಯ ಭಾಷೆ, ನೈಜ ಬದುಕಿಗೆ ಹತ್ತಿರವಾಗಿರುವ ಪಾತ್ರಗಳು ಮತ್ತು ಸಹಜ ನಿರೂಪಣೆಯನ್ನು ಉಲ್ಲೇಖಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್, 'ಕನ್ನಡ ಚಿತ್ರರಂಗಕ್ಕೆ ನಿಮ್ಮಂತಹ ಪ್ರತಿಭಾವಂತ ಯುವ ಕಲಾವಿದರು ಅಗತ್ಯ' ಎಂದು ತಂಡಕ್ಕೆ ಶುಭ ಹಾರೈಸಿದ್ದಾರೆ. ಚೊಚ್ಚಲ ನಾಯಕನಟನಾಗಿ ನವೀನ್ ಸಜ್ಜುಗೆ ಸಿಕ್ಕಿರುವ ಈ ಮೆಚ್ಚುಗೆ, ‘ಲೋ ನವೀನ’ ಸಿನಿಮಾದ ಯಶಸ್ಸಿಗೆ ಮತ್ತೊಂದು ದೊಡ್ಡ ಬಲವಾಗಿ ಪರಿಣಮಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

