- Home
- Entertainment
- Sandalwood
- ನಟಿ ಅಮೂಲ್ಯ ಅವಳಿ ಮಕ್ಕಳ ಜೊತೆ ನಟ ಗಣೇಶ್ ತುಂಟಾಟ; ಚೆಲುವಿನ ಚಿತ್ತಾರಕ್ಕೆ ಟ್ವಿಸ್ಟ್ ಕೊಟ್ಟ ನೆಟ್ಟಿಗರ ಕಾಮೆಂಟ್!
ನಟಿ ಅಮೂಲ್ಯ ಅವಳಿ ಮಕ್ಕಳ ಜೊತೆ ನಟ ಗಣೇಶ್ ತುಂಟಾಟ; ಚೆಲುವಿನ ಚಿತ್ತಾರಕ್ಕೆ ಟ್ವಿಸ್ಟ್ ಕೊಟ್ಟ ನೆಟ್ಟಿಗರ ಕಾಮೆಂಟ್!
ಗಣೇಶ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಡಿಯೋ ಹಂಚಿಕೊಂಡ ನಟಿ ಅಮೂಲ್ಯ ಗೌಡ. ಅಥರ್ವ್- ಆಧವ್ ವೈರಲ್ ವಿಡಿಯೋ....

43ರ ವಸಂತಕ್ಕೆ ಕಾಲಿಟ್ಟ ಕನ್ನಡ ಚಿತ್ರರಂಗದ ಗೋಲ್ಡನ್ ಸ್ಟಾರ್ ಗಣೇಶ್(Golden star Ganesh). ಹೊಸ ಸಿನಿಮಾ ಘೋಷಣೆ ಮಾಡಿದ ನಟ.
ನಟ ಗಣೇಶ್ ಮತ್ತು ನಟಿ ಅಮೂಲ್ಯ ಗೌಡ ಫ್ಯಾಮಿಲಿ ತುಂಬಾನೇ ಕ್ಲೋಸ್. ಹೀಗಾಗಿ ಅವಳಿ ಮಕ್ಕಳಾದ ಅಥರ್ವ್ ಮತ್ತು ಆಧವ್ ಜೊತೆ ಒಳ್ಳೆ ಬಾಂಡ್ ಹೊಂದಿದ್ದಾರೆ.
ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ ಅಥರ್ವ್- ಆಧವ್ (Atharv Aadhav) ಇನ್‌ಸ್ಟಾಗ್ರಾಂ ಖಾತೆಯಿಲ್ಲಿ ಸ್ಪೆಷಲ್ ವಿಡಿಯೋ ಹಂಚಿಕೊಂಡಿದ್ದಾರೆ.
'ನಮ್ಮ ಗೋಲ್ಡನ್ ಸ್ಟಾರ್‌ಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ಇಂದಿಗೂ ಎಂದೆಂದಿಗೂ ನಮಗೆ ಸ್ಫೂರ್ತಿ' ಎಂದು ಕ್ಯಾಪ್ಶನ್ ನೀಡಲಾಗಿದೆ.
ಅಥರ್ವ್ ಮತ್ತು ಆಧವ್‌ನ ಹಿಡಿದುಕೊಂಡು ಗಣೇಶ್ ಮುದ್ದಾಡಿದ್ದಾರೆ. ತಂದೆ ಜಗದೀಶ್ ಮಗುವನ್ನು ಎತ್ತಿಕೊಂಡಿರುವ ಗಣೇಶ್ ಬಾಕ್ಸಿಂಗ್ ಮಾಡುತ್ತಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಮಕ್ಕಳ ಜೊತೆ ನೀವು ಚಲುವಿನ ಚಿತ್ತಾರ ಸಿನಿಮಾ ಎರಡನೇ ಭಾಗ ಚಿತ್ರೀಕರಣ ಮಾಡಿ ಎಂದು ನೆಟ್ಟಿಗರು ಡಿಮ್ಯಾಂಡ್ ಮಾಡುತ್ತಿದ್ದಾರೆ.
ಹುಟ್ಟುಹಬ್ಬದ ದಿನ ಗಣೇಶ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಗಣೇಶ್ ನಟನೆಯ 42ನೇ ಸಿನಿಮಾ ಇದಾಗಿದ್ದು ವಿಖ್ಯಾತ ಆಕ್ಷನ್ ಕಟ್ ಹೇಳುತ್ತಿದ್ದಾರೆ.