ನೇಸರ ಜೊತೆ ಅದಿತಿ ಪ್ರಭುದೇವ ಫೋಟೋಶೂಟ್…ಹೇಗಿದೆ ಅಮ್ಮ-ಮಗಳ ಮುದ್ದಾದ ಜೋಡಿ…
ನಟಿ ಅದಿತಿ ಪ್ರಭುದೇವ ತಮ್ಮ ಮುದ್ದಿನ ಮಗಳು ನೇಸರ ಜೊತೆ ಮುದ್ದಾಗಿ ಫೋಟೊ ಶೂಟ್ ಮಾಡಿಸಿದ್ದು ಸದ್ಯ ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೇಗಿದೆ ನೋಡಿ, ಅಮ್ಮ-ಮಗಳ ಮುದ್ದಾದ ಜೋಡಿ.

ನಟಿ ಅದಿತಿ ಪ್ರಭುದೇವ
ಚಂದನವನದ ನಟಿ ಅದಿತಿ ಪ್ರಭುದೇವ (Aditi Prabhudeva) ಮುದ್ದು ಮಗಳು ನೇಸರ ಜೊತೆ ಮುದ್ದಾದ ಫೋಟೊಶೂಟ್ ಮಾಡಿಸಿದ್ದಾರೆ. ಅಮ್ಮ-ಮಗಳ ಮುದ್ದಾದ ಫೋಟೊ ಶೂಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಅಮ್ಮ-ಮಗಳ ಟ್ವಿನ್ನಿಂಗ್
ಅದಿತಿ ಪ್ರಭುದೇವ ಮತ್ತು ಮಗಳು ಆಫ್ ವೈಟ್ ಬಣ್ಣದ ಲಂಗ ಬ್ಲೌಸ್ ಮತ್ತು ಫ್ರಾಕ್ ಧರಿಸಿ ಟ್ವಿನ್ನಿಂಗ್ ಮಾಡಿದ್ದಾರೆ. ಇಬ್ಬರೂ ಮುದ್ದು ಮುದ್ದಾದ ಪೋಸ್ ಗಳನ್ನು ಕೊಟ್ಟಿದ್ದಾರೆ. ಅಮ್ಮ ಮಗಳ ಮುದ್ದಾದ ಜೋಡಿಗೆ ನೆಟ್ಟಿಗರು ಪ್ರೀತಿಯ ಮಳೆ ಸುರಿಸಿದ್ದಾರೆ.
ನನ್ನ ಮ್ಯಾಜಿಕ್ ಎಂದ ಅದಿತಿ
ಅದಿತಿ ಫೋಟೊಗಳ ಜೊತೆಗೆ ಮುದ್ದಾ ಕ್ಯಾಪ್ಶನ್ ಕೊಟ್ಟು ಮೈ ಮಿನಿ ಮಿ, ಮೈ ಮ್ಯಾಜಿಕ್, ಮೈ ಹೀಲರ್ ಎಂದು ಬರೆದುಕೊಂಡಿದ್ದಾರೆ. ಅದಿತಿ ಪತಿ ಯಶಸ್ ಪಾಟ್ಲಾ ಕಾಮೆಂಟ್ ಮಾಡಿ ಮೈ ಬ್ಯೂಟಿಫುಲ್ ಡಾರ್ಲಿಂಗ್ಸ್ ಎಂದಿದ್ದಾರೆ.
ಅಂದೊಂದಿತ್ತು ಕಾಲ
ಮಗಳು ಹುಟ್ಟಿದ ಸ್ವಲ್ಪ ಸಮಯ ನಟನೆಯಿಂದ ದೂರ ಉಳಿದಿದ್ದ ಅದಿತಿ ಪ್ರಭುದೇವ ಬಳಿಕ ಅಂದೊಂದಿತ್ತು ಕಾಲ ಸಿನಿಮಾದಲ್ಲಿ ನಟಿಸಿದ್ದರು. ವಿನಯ್ ರಾಜ್ ಕುಮಾರ್, ನಿಶಾ ರವಿಕೃಷ್ಣನ್ ನಟನೆಯ ಈ ಸಿನಿಮಾ ಆಗಸ್ಟ್ ತಿಂಗಳಲ್ಲಿ ರಿಲೀಸ್ ಆಗಿದ್ದು, ಹಾಡುಗಳು ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದವು.
ಮದುವೆಯಾಗಿದ್ದು ಯಾವಾಗ?
ನಟಿ ಅದಿತಿ ಪ್ರಭುದೇವ 2022ರಲ್ಲಿ ಉದ್ಯಮಿ ಹಾಗೂ ರೈತನಾಗಿರುವ ಯಶಸ್ ಪಟ್ಲ (Yashas Patlaa) ಅವರನ್ನು ವಿವಾಹವಾಗಿದ್ದರು. ಇವರು ಮೂಲತಃ ಕೊಡಗಿನವರು ಆಗಿರುತ್ತಾರೆ. ಈ ದಂಪತಿಗೆ ನೇಸರ ಎಂಬ ಮುದ್ದಾದ ಮಗಳಿದ್ದಾಳೆ.
ಮಗಳ ಜೊತೆಗಿನ ಫೋಟೋಸ್
ಸೋಶಿಯಲ್ ಮೀಡೀಯಾದಲ್ಲಿ ಆಕ್ಟಿವ್ ಆಗಿರುವ ಅದಿತಿ ಪ್ರಭುದೇವ ಹೆಚ್ಚಾಗಿ ಮಗಳ ಜೊತೆಗಿನ ಮುದ್ದಾದ ಫೋಟೊಗಳು ಹಾಗೂ ವಿಡೀಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಹೆಚ್ಚಾಗಿ ನಟಿ ಮಗಳ ಜೊತೆಗೆ ಸಮಯ ಕಳೆಯೋದಕ್ಕೆ ಬಯಸುತ್ತಾರೆ.
ಮುಂದಿನ ಸಿನಿಮಾ ಯಾವುದು?
ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಅದಿತಿ, ಇತ್ತೀಚಿನ ದಿನಗಳಲ್ಲಿ ಸಿನಿಮಾದಿಂದ ದೂರ ಉಳಿದಿದ್ದಾರೆ. ಮಗಳ ಬಗ್ಗೆ ಕಾಳಜಿ ವಹಿಸಲು ಹೆಚ್ಚಿನ ಸಮಯ ಬೇಕಾಗಿರೋದರಿಂದ, ಟಿವಿ ಶೋಗಳಲ್ಲಿ ಸದ್ಯಕ್ಕೆ ಕಾಣಿಸಿಕೊಳ್ಳುವುದಾಗಿ ನಟಿ ತಿಳಿಸಿದ್ದರು.