ಮಗಳ ಜೊತೆ ನಟಿ ಅದಿತಿ ಪ್ರಭುದೇವ ಕ್ಯೂಟ್ ವಿಡಿಯೋ ಶೇರ್ ಮಾಡಿದರೆ, ನಟಿಯ ವಿರುದ್ಧ ಅಸಂಖ್ಯ ಅಭಿಮಾನಿಗಳು ಸಿಟ್ಟಾಗಿದ್ಯಾಕೆ? ಇಲ್ಲಿದೆ ನೋಡಿ ಅಸಲಿಯತ್ತು!
ಕೆಲವೊಂದು ಸಿನಿಮಾ ನಟ-ನಟಿಯರ ಬಗ್ಗೆ ಅಸಂಖ್ಯ ಅಭಿಮಾನಿಗಳು ಅದೇನೋ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಅವರ ಯಾವುದೋ ಒಂದು ಗುಣದಿಂದ ಜನರು ಅವರ ಅಭಿಮಾನಿಗಳಾಗುತ್ತಾರೆ. ಆದರೆ ಆ ಅಭಿಮಾನಕ್ಕೆ ಸ್ವಲ್ಪವೇ ಕುತ್ತು ಬಂದರೂ ಅವರು ಸಹಿಸುವುದಿಲ್ಲ. ತಾವು ಮೆಚ್ಚುವ ನಟ-ನಟಿ ಹೀಗೆಯೇ ಇರಬೇಕು ಎಂದು ಬಯಸುವ ದೊಡ್ಡ ವರ್ಗವೇ ಇದೆ. ಅದೇ ರೀತಿ ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ್ (Aditi Prabhudev) ಅವರಿಗೂ ಕೋಟ್ಯಂತರ ಮಂದಿ ಅಭಿಮಾನಿಗಳು ಇದ್ದಾರೆ. ಅದಕ್ಕೆ ಪ್ರಮುಖ ಕಾರಣ ಅವರ ಸೌಂದರ್ಯ, ನಟನೆ ಮಾತ್ರವಲ್ಲದೇ ಅವರ ಉಡುಗೆ-ತೊಡುಗೆ. ಅಶ್ಲೀಲತೆ ಎನ್ನುವಂಥ ಬಟ್ಟೆ ಧರಿಸದೇ ಒಳ್ಳೆಯ ರೀತಿಯಲ್ಲಿಯೇ ಜನರಿಗೆ ಹತ್ತಿರವಾದ ಕೆಲವೇ ಕೆಲವು ನಟಿಯರ ಪೈಕಿ ಅದಿತಿಯೂ ಒಬ್ಬರು. ಆದರೆ ಸ್ವಲ್ಪವೇ ಸ್ವಲ್ಪ ಆಚೀಚೆ ಆದರೂ ಹೆಚ್ಚಿನವರು ಅದನ್ನು ಸಹಿಸುವುದಿಲ್ಲ.
ಅಷ್ಟಕ್ಕೂ, ಅದಿತಿ ಪ್ರಭುದೇವ್ ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ, ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಜೊತೆಗೆ, ರಿಯಾಲಿಟಿ ಷೋಗಳಲ್ಲಿಯೂ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ, ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದ ನಟಿ ಸದ್ಯ ಸಂಪೂರ್ಣ ಅಮ್ಮ ಆಗಿದ್ದಾರೆ. ಮಗಳು ನೇಸರಳ ಲಾಲನೆ ಪಾಲನೆಯಲ್ಲಿ ತೊಡಗಿದ್ದಾರೆ. ಕಳೆದ ಏಪ್ರಿಲ್ 4ರಂದು ಅದಿತಿ ಅವರು ಮಗಳ ಮೊದಲ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಈ ಕಾರ್ಯಕ್ರಮಕ್ಕೆ ತಾರಾದಂಡೇ ಹರಿದು ಬಂದಿತ್ತು.
ಇದೀಗ ಮಗಳ ಜೊತೆ ನಟಿ ಕ್ಯೂಟ್ ವಿಡಿಯೋಶೂಟ್ ಮಾಡಿಸಿಕೊಂಡಿದ್ದಾರೆ. ಸಂಪ್ರದಾಯವೆನ್ನಲ್ಲಾ ಪಾಲಿಸುವ ಅದಿತಿ ಮಗಳಿಗೂ ಅದೇ ಸಂಸ್ಕಾರವನ್ನು ನೀಡುತ್ತಿರುವುದು ಹಲವರ ಶ್ಲಾಘನೆಗೂ ಕಾರಣವಾಗಿದೆ. ಆದರೆ ಈ ವಿಡಿಯೋ ನೋಡಿ ಮಾತ್ರ ಹಲವರು ರೊಚ್ಚಿಗೆದ್ದುಬಿಟ್ಟಿದ್ದಾರೆ. ನಿಮ್ಮ ಮೇಲೆ ಅಪಾರ ಅಭಿಮಾನವಿದೆ, ದಯವಿಟ್ಟು ಅದನ್ನು ಉಳಿಸಿಕೊಳ್ಳಿ ಎಂದು ಕಮೆಂಟ್ಗಳ ಮಹಾಪೂರವೇ ಹರಿದು ಬಂದಿದೆ. ಅದಕ್ಕೆ ಕಾರಣ, ಈ ವಿಡಿಯೋದಲ್ಲಿ ನಟಿ ಮಂಗಳಸೂತ್ರ ಹಾಕಿಲ್ಲ ಎನ್ನುವ ಕಾರಣಕ್ಕೆ! ಹಿಂದೂ ಸಂಪ್ರದಾಯ ಅಚ್ಚೂಕಟ್ಟಾಗಿ ಪಾಲಿಸಿಕೊಂಡು ಬರ್ತಿರೋ ನಟಿಯ ಕೊರಳು ಬೋಳಾಗಿ ಇರುವುದನ್ನು ಅವರ ಅಭಿಮಾನಿಗಳು ಸಹಿಸುತ್ತಿಲ್ಲ. ಗಂಡ ಬದುಕಿರುವಾಗ ಹೀಗೇಕೆ ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ತಮ್ಮ ನೆಚ್ಚಿನ ತಾರೆಯರು ಹೀಗೆಯೇ ಇರಬೇಕು ಎಂದು ಅಭಿಮಾನಿಗಳು ಬಯಸುವುದನ್ನು ಇದು ತೋರಿಸುತ್ತದೆ.
ಇನ್ನು ನಟಿಯ ಕುರಿತು ಹೇಳುವುದಾದರೆ, ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ್ (Aditi Prabhudev) ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ, ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಸಿನಿಮಾ ಜೊತೆಗೆ ವೈವಾಹಿಕ ಬದುಕನ್ನು ಬ್ಯಾಲೆನ್ಸ್ ಮಾಡ್ತಿದ್ದಾರೆ. ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಅದಿತಿ ಪ್ರಭುದೇವ ಅವರು ಸದ್ಯ ಗೃಹಿಣಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ, ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದವರು. ಇದರ ಹೊರತಾಗಿಯೂ ಅಡುಗೆಯಲ್ಲಿಯೂ ಇವರದ್ದು ಎತ್ತಿದ ಕೈ. ಅಡುಗೆ, ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು ಟಿಪ್ಸ್ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

