ವರ್ಷಗಳೇ ಕಳೆದರೂ ಅಂದ ಕಮ್ಮಿ ಅಗಿಲ್ಲ; ಸುದೀಪ್ ಫ್ಯಾಮಿಲಿ ಜೊತೆ 'ಮಾಣಿಕ್ಯ' ವರ!
ಮದುವೆ ಕಾರ್ಡ್ ಹಂಚುವುದರಲ್ಲಿ ಬ್ಯುಸಿಯಾದ ವರಲಕ್ಷ್ಮಿ. ಕಿಚ್ಚ ಸುದೀಪ್ ಮನೆಯಲ್ಲಿ ಕಾಣಿಸಿಕೊಂಡ ವರ....

2014ರಲ್ಲಿ ಕಿಚ್ಚ ಸುದೀಪ್ ನಟನೆ ಮಾಣಿಕ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ವರಲಕ್ಷ್ಮಿ ಶರತ್‌ಕುಮಾರ್.
ಜುಲೈ 2ರಂದು ವರಲಕ್ಷ್ಮಿ ಶರತ್ ಕುಮಾರ್ ಮತ್ತು ನಿಕೊಲಾಯ್ ಸಚ್ದೇವ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬ ಸ್ಟಾರ್ ನಟನ ಮನೆಗೂ ಭೇಟಿ ನೀಡಿ ಆಮಂತ್ರಣ ಹಂಚುತ್ತಿದ್ದಾರೆ.
ಇತ್ತೀಚಿಗೆ ಬೆಂಗಳೂರಿಗೆ ಆಗಮಿಸಿದ ವರಲಕ್ಷ್ಮಿ ಸುಮಾರು ಕಿಚ್ಚ ಸುದೀಪ್ ನಿವಾಸಕ್ಕೆ ಭೇಟಿ ನೀಡಿ ಮದುವೆ ಆಮಂತ್ರಣ ನೀಡಿದ್ದಾರೆ. ಸೆಲ್ಫ್ ಹಂಚಿಕೊಂಡಿದ್ದಾರೆ ಕೂಡ.
ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗುತ್ತಿದ್ದು ವರ್ಷಗಳೇ ಕಳೆದರೂ ಇವರ ಅಂದ ಕಡಿಮೆ ಆಗಿಲ್ಲ' ಎಂದು ನೆಟ್ಟಿಗರು ಫೋಟೋ ವೈರಲ್ ಮಾಡುತ್ತಿದ್ದಾರೆ.
ಇತ್ತೀಚಿಗೆ ಕಿಚ್ಚ ಸುದೀಪ್, ವರಲಕ್ಷ್ಮಿ ಶರತ್‌ಕುಮಾರ್, ನಿಕೋಲೈ ಸಚ್‌ದೇವಿ, ಪ್ರಿಯಾ ಮತ್ತು ಸಾನ್ವಿ ಭೇಟಿ ಮಾಡಿದ್ದರು. ಈ ಫೊಟೋ ಕೂಡ ಸಖತ್ ವೈರಲ್ ಆಗಿತ್ತು.
ಹಿರಿಯ ನಟ ಶರತ್‌ಕುಮಾರ್ ಮತ್ತು ರಾಧಿಕಾ ಅವರ ಮುದ್ದಿನ ಮಗಳ ವರಲಕ್ಷ್ಮಿ. ಸುಮಾರು ವರ್ಷಗಳಿಂದ ಕಿಚ್ಚ ಸುದೀಪ್ ಫ್ಯಾಮಿಲಿ ಫ್ರೆಂಡ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.