- Home
- Entertainment
- Sandalwood
- Samyukta Hegde: ಜಿಮ್’ನಲ್ಲಿ ದೇಹ ದಂಡಿಸಿ ಬೈಸೆಪ್ಸ್ ಪ್ರದರ್ಶಿಸಿದ ಸ್ಯಾಂಡಲ್’ವುಡ್ ಸುಂದರಿ
Samyukta Hegde: ಜಿಮ್’ನಲ್ಲಿ ದೇಹ ದಂಡಿಸಿ ಬೈಸೆಪ್ಸ್ ಪ್ರದರ್ಶಿಸಿದ ಸ್ಯಾಂಡಲ್’ವುಡ್ ಸುಂದರಿ
ಸ್ಯಾಂಡಲ್ ವುಡ್ ನ ಕಿರಿಕ್ ಬ್ಯೂಟಿ ಅಂದ್ರೆ ಯಾರು ಅಂತ ಹೇಳಬೇಕಾಗಿಲ್ಲ. ಅದು ಸಂಯುಕ್ತ ಹೆಗ್ಡೆ. ಇದೀಗ ಆಕೆ ತನ್ನ ಕಟ್ಟುಮಸ್ತಾದ ದೇಹಸಿರಿ ಪ್ರದರ್ಶಿಸಿ, ನಾನು ಯಾರ್ಗೂ ಕಮ್ಮಿ ಇಲ್ಲ ಎನ್ನುತ್ತಿದ್ದಾರೆ.

ಚಂದನವನಕ್ಕೆ ಹೊಸ ತಿರುವು ಕೊಟ್ಟ ಸಿನಿಮಾ ಅಂದ್ರೆ ಅದು ಕಿರಿಕ್ ಪಾರ್ಟಿ (Kirik Party). ಕಿರಿಕ್ ಪಾರ್ಟಿ ಮೂಲಕ ರಶ್ಮಿಕಾ ಮಂದಣ್ಣ ಹೇಗೆ ಕರ್ನಾಟಕ ಕ್ರಶ್ ಆದ್ರೋ, ಆ ಸಿನಿಮಾದ ಇನ್ನೊಬ್ಬ ಬೆಡಗಿ ಕೂಡ ಅಲ್ಲಿಂದಲೇ ಸಿಕ್ಕಾಪಟ್ಟೆ ಫೇಮಸ್ ಅದ್ರು.
ಹೌದು, ಕಿರಿಕ್ ಪಾರ್ಟಿಯಲ್ಲಿ ಆರ್ಯ ಪಾತ್ರದ ಮೂಲಕ ಬಬ್ಲಿ ಗರ್ಲ್ ಆಗಿ ನಟಿಸಿ, ತಮ್ಮ ಕಿರಿಕ್ ಗಳಿಂದಲೇ ಸುದ್ದಿಯಲ್ಲಿದ್ದ ಕಿರಿಕ್ ಬ್ಯೂಟಿ ಸಂಯುಕ್ತಾ ಹೆಗ್ಡೆ (Samyuktha Hegde). ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ಸಂಯುಕ್ತಾ, ಸಿನಿಮಾಗಳಿಂದ ಅಂತರ ಕಾಯುತ್ತಲೇ ಹೋದರು.
ಸದ್ಯ ತಮ್ಮ ಫಿಟ್ನೆಸ್ ಬಗ್ಗೆ ಗಮನ ಹರಿಸಿರುವ ಸಂಯುಕ್ತಾ ಹೆಗ್ಡೆ, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕಟ್ಟುಮಸ್ತಾದ ದೇಹವನ್ನು (toned body) ಪ್ರದರ್ಶಿಸುತ್ತಾ, ಜಿಮ್ ಮಾಡೋ ಹುಡುಗಿಯರಿಗೆ ಸ್ಪೂರ್ತಿಯಾಗ್ತಿರೋದಂತೂ ನಿಜಾ.
ಇದೀಗ ಇನ್’ಸ್ಟಾಗ್ರಾಂನಲ್ಲಿ ಸಂಯುಕ್ತಾ ಹೆಗ್ಡೆ ತಮ್ಮ ಬೈಸೆಪ್ಸ್, ಮಸಲ್ಸ್, ಟೋಂಡ್ ಬಾಡಿ ಫೋಟೊಗಳನ್ನು ಶೇರ್ ಮಾಡಿದ್ದು, ಜೊತೆಗೆ ಜಿಮ್ ನಲ್ಲಿ ಹೆವಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಕೂಡ ಹಂಚಿಕೊಂಡಿದ್ದು, ನಟಿಯ ಫಿಟ್ನೆಸ್ ನೋಡಿ ಜನ ಶಾಕ್ ಆಗಿದ್ದಾರೆ.
ತಮ್ಮ ಫೋಟೊಗಳ ಜೊತೆಗೆ ನಟಿ That body won’t build itself, babe! ಎಂದು ಕ್ಯಾಪ್ಶನ್ ಹಾಕಿದ್ದಾರೆ. ಇದಕ್ಕೆ ನಟಿ ಚೈತ್ರಾ ಆಚಾರ್ ಫೈರ್ ಇಮೋಜಿ ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಇತರ ಸ್ನೇಹಿತರು ಕೂಡ ನೀವು ನಿಜಕ್ಕೂ ಪ್ರೇರಣೆ ನೀಡ್ತೀರಿ. ಉಫ್ ನಿಮ್ಮ ಮಸಲ್ಸ್ ಸೂಪರ್ ಎಂದು ಕಾಮೆಂಟ್ ಮಾಡಿದ್ದಾರೆ.
ಸಂಯುಕ್ತಾ ಹೆಗ್ಡೆ ಮೊದಲಿನಿಂದ ಸ್ಪೋರ್ಟ್ಸ್ ಪರ್ಸನ್ ಆಗಿದ್ದು, ಜಿಮ್ನಾಸ್ಟಿಕ್, ಯೋಗ ಮಾಡಿಕೊಂಡು ಫಿಟ್ನೆಸ್ ಪಡೆದಿದ್ದಾರೆ. ಇದರ ಜೊತೆಗೆ ಜಿಮ್ ವರ್ಕೌಟ್ ಕೂಡ ಮಾಡ್ತಾರೆ. ಅದ್ಭುತ ಡ್ಯಾನ್ಸರ್ ಆಗಿರುವ ಈ ಬೆಡಗಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫಿಟ್ನೆಸ್ ಪ್ರದರ್ಶಿಸುತ್ತಲೇ ಇರುತ್ತಾರೆ.
ಸಿನಿಮಾ ವಿಚಾರಕ್ಕೆ ಬರೋದಾದ್ರೆ ಕಿರಿಕ್ ಪಾರ್ಟಿ ಅಲ್ಲದೇ, ಕಾಲೇಜು ಕುಮಾರ, ಒಮ್ಮೆ ನಿಶ್ಯಬ್ಧ ಒಮ್ಮೆ ಯುದ್ಧ, ರಾಣಾ, ತುರ್ತು ನಿರ್ಗಮನ, ಕ್ರೀಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲೂ ನಟಿಸಿದ್ದು, ವಾಚ್ ಮ್ಯಾನ್, ಕೋಮಾಲಿ, ಪಪ್ಪಿ, ಇವರು ನಟಿಸಿದ ಸಿನಿಮಾಗಳು.
ಸಾಹಸಪ್ರಿಯೆಯಾಗಿರುವ ಸಂಯುಕ್ತಾ ಹೆಗ್ಡೆ ಬಿಗ್ ಬಾಸ್ ಕನ್ನಡದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದರು. ಬಳಿಕ ಎಂಟಿವಿ ರೋಡೀಸ್ 12, ಎಂಟಿವಿ ಸ್ಪಿಟ್ ವಿಲ್ಲಾ 15ನಲ್ಲಿ ಸ್ಪರ್ಧಿಸಿದ್ದರು. ಅಷ್ಟೇ ಅಲ್ಲ ಪಂಚ್ ಬೀಟ್ 2 ವೆಬ್ ಸೀರಿಸ್ ನಲ್ಲೂ ಸಹ ಸಂಯುಕ್ತಾ ನಟಿಸಿದ್ದರು.