MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • Actress Amulya: ಆರ್.ಆರ್.ನಗರ ಬೆಟ್ಟದ ಮೇಲೆ ಐಷಾರಾಮಿ ಪಬ್ ಕಟ್ಟಿದ ನಟಿ ಅಮೂಲ್ಯ; ಇದು ಸೋಮರಸದ ಸ್ವರ್ಗ!

Actress Amulya: ಆರ್.ಆರ್.ನಗರ ಬೆಟ್ಟದ ಮೇಲೆ ಐಷಾರಾಮಿ ಪಬ್ ಕಟ್ಟಿದ ನಟಿ ಅಮೂಲ್ಯ; ಇದು ಸೋಮರಸದ ಸ್ವರ್ಗ!

ಸ್ಯಾಂಡಲ್‌ವುಡ್ ನಟಿ ಅಮೂಲ್ಯ (Actress Amulya) ಮತ್ತು ಅವರ ಪತಿ ಜಗದೀಶ್ ಆರ್. ಚಂದ್ರ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ 'ಝೀರೋ ಡಿಗ್ರಿ ಆನ್ ದಿ ಹಿಲ್' ಎಂಬ ಹೊಸ ಪಬ್ ಅನ್ನು ಆರಂಭಿಸಿದ್ದಾರೆ. ಬೆಟ್ಟದ ಮೇಲೆ ನಿರ್ಮಿಸಲಾದ ಈ ಐಷಾರಾಮಿ ಪಬ್ ವಿಶಿಷ್ಟ ವಿನ್ಯಾಸಗಳನ್ನು ನೀವೇ ನೋಡಿ.

2 Min read
Author : Sathish Kumar KH
Published : Jun 25 2026, 06:55 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Instagram

ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ, ಸಿನಿಮಾದಿಂದ ದೂರವಾಗಿ ಹಲವು ವರ್ಷಗಳೇ ಕಳೆದಿವೆ. ಆದರೆ ಚೆಲುವಿನ ಚಿತ್ತಾರದ ಮೂಲಕ ಬೆಳ್ಳಿತೆರೆಗೆ ಬಂದ ಅಮೂಲ್ಯ ಕನ್ನಡಿಗರ ಮನೆ ಮಗಳಾಗಿದ್ದಳು. ಸಿನಿಮಾದಲ್ಲಿ ಉತ್ತುಂಗದಲ್ಲಿರುವಾಗಲೇ ಉದ್ಯಮಿ ಹಾಗೂ ರಾಜಕಾರಣಿಯನ್ನು ಮದುವೆ ಮಾಡಿಕೊಂಡು ಸುಖ ದಾಂಪತ್ಯ ನಡೆಸುತ್ತಿದ್ದಾರೆ. 

ಇತ್ತೀಚೆಗೆ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗದಲ್ಲಿ 2ನೇ ಇನ್ನಿಂಗ್ಸ್ ಆರಂಭಿಸಲು ಸಿದ್ಧತೆ ನಡೆಸಿದ್ದರು. ಹೀಗಿರುವಾಗಲೇ ಜೀವನಕ್ಕೆ ಶಾಶ್ವತ ಆದಾಯ ಬರುವಂತಹ ಪಬ್ ಒಂದನ್ನು ನಿರ್ಮಿಸಿ, ಉದ್ಯಮದ ಒಡತಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : Instagram

ಬೆಂಗಳೂರಿನ ರಾಜರಾಜೇಶ್ವರಿ ನಗರ (ಆರ್.ಆರ್.ನಗರ) 5 ನೇ ಹಂತ, ಶಕ್ತಿ ಹಿಲ್ ರೆಸಾರ್ಟ್ ಹತ್ತಿರ ಝೀರೋ ಡಿಗ್ರಿ ಆನ್ ದಿ ಹಿಲ್ ಬ್ರೂವರಿ ಅಂಡ್ ಕಿಚನ್ ಎಂಬ ಪಬ್ ಅನ್ನು ಆರಂಭಿಸಿದ್ದಾರೆ. ಈ ಪಬ್ ಭೂಮಿಯ ಮೇಲಿನ ಸ್ವರ್ಗದಂತಿದೆ. ಬೆಟ್ಟದ ಮೇಲಿರುವ ಈ ಪಬ್‌ನಲ್ಲಿ ಸ್ಥಳೀಯ ಮತ್ತು ಪಾಶ್ಚಿಮಾತ್ಯ ಸಂಪ್ರದಾಯದ ಥೀಮ್‌ಗಳನ್ನು ಅಳವಡಿಕೆ ಮಾಡಲಾಗಿದೆ. 

ಜೊತೆಗೆ, ಬಂಡೆಗಳು, ನೀರಿನ ಕೊಳಗಳು, ನೀರಿನ ಝರಿ ಸೇರಿದಂತೆ ಒಂದು ಸುಂದರ ರಮಣೀಯ ತಾಣದಂತೆ ನಿರ್ಮಿಸಲಾಗಿದೆ. ಇದನ್ನು ಸೋಮರಸ ಹೀರುವ ಸ್ವರ್ಗವೆಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

Related Articles

Related image1
ಪತಿ, ಮಕ್ಕಳ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ ಅಮೂಲ್ಯ
Related image2
'ಜಿಗರಿ ದೋಸ್ತ್‌ಗಳು' ಅಮೂಲ್ಯ-ವೈಷ್ಣವಿ ಗೌಡ ಅಪರೂಪದ ಸ್ನೇಹದ ಕಥೆಗೆ ಸಾಕ್ಷಿಯಾಗಿರೋ 'ಪಿಯುಸಿ' ಫೋಟೋ ವೈರಲ್!
36
Image Credit : Instagram

ನಟಿ ಅಮೂಲ್ಯ ಹಾಗೂ ಅವರ ಗಂಡ ಜಗದೀಶ್ ಆರ್. ಚಂದ್ರ ಜಂಟಿಯಾಗಿ ನಿರ್ಮಿಸಿದ ಈ ಪಬ್‌ನ ಉದ್ಘಾಟನೆಗೆ ಕನ್ನಡ ಚಿತ್ರರಂಗದ ಅನೇಕ ದಿಗ್ಗಜರು ಆಗಮಿಸಿದ್ದರು. ಕನ್ನಡ ಚಿತ್ರರಂಗದ ಬಾದ್‌ಷಾ ಕಿಚ್ಚ ಸುದೀಪ್‌, ಗೋಲ್ಡನ್‌ ಸ್ಟಾರ್‌ ಗಣೇಶ್‌, ರಿಷಬ್‌ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ, ಡಾಲಿ ಧನಂಜಯ್, ಹಿರಿಯ ನಟಿಯರಾದ ಶ್ರುತಿ, ಮಾಳವಿಕಾ ಅವಿನಾಶ್‌ ಸೇರಿದಂತೆ ಹಲವು ಸ್ಟಾರ್‌ ಸೆಲೆಬ್ರಿಟಿಗಳು 'ಜೀರೋ ಡಿಗ್ರಿ ಆನ್ ದಿ ಹಿಲ್' ಪಬ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಮೂಲ್ಯ-ಜಗದೀಶ್‌ ದಂಪತಿಯ ಹೊಸ ಉದ್ಯಮಕ್ಕೆ ಶುಭ ಕೋರಿದ್ದಾರೆ.

46
Image Credit : Instagram

ಇನ್ನು ಈ ಐಷಾರಾಮಿ ಪಬ್‌ನ ಹೆಸರೇ ಸೂಚಿಸುವಂತೆ, 'ಜೀರೋ ಡಿಗ್ರಿ ಆನ್‌ ದಿ ಹಿಲ್‌' ಪಬ್‌ ಬೆಟ್ಟದ ಮಾದರಿಯಲ್ಲಿ ಎತ್ತರದ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಬೆಂಗಳೂರಿನ ಗಿಜಿಗಿಡುವ ಪ್ರದೇಶದಿಂದ ಕೊಂಚ ದೂರದಲ್ಲಿ ಆರ್.ಆರ್. ನಗರದ ಎಸ್.ಎಸ್. ಹಿಲ್ಸ್‌ನಲ್ಲಿ ನಿರ್ಮಿಸಲಾಗಿದ್ದು, ಇಲ್ಲಿ ಬೆಂಗಳೂರಿನ ಸುಂದರ ಸಮಯ ಕಳೆಯಬಹುದು. ವಾರಾಂತ್ಯದ ದಿನಗಳನ್ನು ಎಂಜಾಯ್ ಮಾಡುವುದಕ್ಕೆ ಈ ಪಬ್ ಹೇಳಿ ಮಾಡಿಸಿದಂತಿದೆ.

56
Image Credit : Instagram

ಪಬ್‌ನಲ್ಲಿ ಗುಡಿಸಲು ಮಾದರಿ, ಅರಮನೆಯ ಮಾದರಿ, ಸಿಂಹ ಮತ್ತು ಹುಲಿ ಬಾಯಿಯಲ್ಲಿ ಕೌಂಟರ್‌ಗಳು, ಮನುಷ್ಯನ ಮುಖದಾಕೃತಿಯಲ್ಲಿ ನೀರಿನ ಝರಿ, ಗುಹೆಯಾಕಾರದ ತಾಣ, ಹಳ್ಳಿ ಸೊಗಡಿನ ನೆಲಹಾಸು, ವಿಶಾಲವಾದ ಪಾರ್ಟಿ ಪ್ರಾಂಗಣ, ಲೈಟಿಂಗ್ಸ್ ಹಾಗೂ ಪೂಲ್ ಮಾದರಿಯ ವಿನ್ಯಾಸ ಎಲ್ಲವೂ ಪಬ್‌ನ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. 

ಕೆಲವೊಂದು ಕಲಾಕೃತಿಗಳು ಮಾತ್ರ ಮೈ ಝುಮ್ ಎನ್ನಿಸುವುದಂತೂ ನಿಜ. ನಿಜಕ್ಕೂ ಭೂಮಿಯ ಮೇಲಿನ ಸರ್ಗದಂತೆ ನಿರ್ಮಾಣ ಮಾಡಲಾಗಿದ್ದು, ಗ್ರಾಹಕರಿಗೆ ನಾಳೆ ಜೂ.26ರಿಂದ ಸೇವೆ ಆರಂಭವಾಗಲಿದೆ.

66
Image Credit : Instagram

ನಟಿ ಅಮೂಲ್ಯ ಅವರು ಉದ್ಯಮಿ ಹಾಗೂ ರಾಜಕಾರಣದ ಕುಟುಂಬವನ್ನು ಮದುವೆಯಾಗಿದ್ದು, ರಾಜಕಾರಣಕ್ಕೆ ಬರುತ್ತಾರೆ ಎಂಬುದು ಬಹುತೇಕರ ನಿರೀಕ್ಷೆಯಾಗಿತ್ತು. ಆದರೆ, ಅದಕ್ಕೂ ಮೊದಲು ಉದ್ಯಮವನ್ನು ಆರಂಭಿಸಿ ಅದಕ್ಕೆ ಅವರೇ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ.

ಸ್ವತಃ ನಟಿ ಅಮೂಲಗ್ಯ ಅವರೇ ಪಬ್‌ನ ಮೂಲೆ, ಮೂಲೆಗಳನ್ನು ಗ್ರಾಹಕರಿಗೆ ಪರಿಚಯಿಸುವಂತೆ ಪಬ್‌ ಅನ್ನು ಎಕ್ಸ್‌ಪ್ಲೋರ್ ಮಾಡಿದ್ದಾರೆ. ಇನ್ನು ಪಬ್‌ನ ಒಟ್ಟಾರೆ ವಿಡಿಯೋ ನೋಡುವ ನೈಟ್‌ಲೈಫ್ ಪ್ರಿಯರಿಗಂತೂ ಇದು ಹೇಳಿ ಮಾಡಿಸಿದ ಜಾಗವಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಅಮೂಲ್ಯ
ಸ್ಯಾಂಡಲ್‌ವುಡ್
ವ್ಯವಹಾರ
ಬೆಂಗಳೂರು
ಕಿಚ್ಚ ಸುದೀಪ್

Latest Videos
Recommended Stories
Recommended image1
Viashak Death: ವೈಶಾಖ್ ಪತ್ನಿ ಬಿಚ್ಚಿಟ್ಟ ಸ್ಫೋಟಕ ಸತ್ಯಗಳು- ಮಾತು ಬಿಟ್ಟಿದ್ದರು; ಮೆಸೇಜ್ ಮಾಡುತ್ತಿದ್ದರು; ನಿನ್ನೆ ಲಾಸ್ಟ್ ಮೆಸೇಜ್ ಇದು..!
Recommended image2
ಶರ್ಟ್ ಬಟನ್ಸ್​ ಓಪನ್​ ಇಡೋದ್ಯಾಕೆ Ravichandran, Rakshit Shetty? ಕ್ರೇಜಿಸ್ಟಾರ್ ಉತ್ತರಕ್ಕೆ ಫ್ಯಾನ್ಸ್​ ದಂಗು​
Recommended image3
ವೈಶಾಕ್‌ಗೆ ಮದುವೆ ಆಗಿ 14 ವರ್ಷದ ಮಗನಿದ್ದ; ಆದ್ರೂ ನಟಿ ಕೃಷಿ ತಾಪಾಂಡ ಮನೆಗೆ ಬರುತ್ತಿದ್ದನೇಕೆ? ಬಿಗ್‌ ಟ್ವಿಸ್ಟ್‌ ಕೊಟ್ಟ ಆ ಒಂದು ಸುಳಿವು!
Related Stories
Recommended image1
ಪತಿ, ಮಕ್ಕಳ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ ಅಮೂಲ್ಯ
Recommended image2
'ಜಿಗರಿ ದೋಸ್ತ್‌ಗಳು' ಅಮೂಲ್ಯ-ವೈಷ್ಣವಿ ಗೌಡ ಅಪರೂಪದ ಸ್ನೇಹದ ಕಥೆಗೆ ಸಾಕ್ಷಿಯಾಗಿರೋ 'ಪಿಯುಸಿ' ಫೋಟೋ ವೈರಲ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved