- Home
- Entertainment
- Sandalwood
- ಮೋಸ ಮಾಡೋದು ಹೇಳ್ಕೊಟ್ಟಿಲ್ಲ: ಪತಿ Yuva Rajkumar, ಆ ನಟಿ ಬಗ್ಗೆ ಶ್ರೀದೇವಿ ಬೈರಪ್ಪ ಖಡಕ್ ಪೋಸ್ಟ್
ಮೋಸ ಮಾಡೋದು ಹೇಳ್ಕೊಟ್ಟಿಲ್ಲ: ಪತಿ Yuva Rajkumar, ಆ ನಟಿ ಬಗ್ಗೆ ಶ್ರೀದೇವಿ ಬೈರಪ್ಪ ಖಡಕ್ ಪೋಸ್ಟ್
Yuva Rajkumar Wife Sridevi Byrappa: ಶ್ರೀದೇವಿ ಬೈರಪ್ಪ, ನಟ ಯುವರಾಜ್‌ಕುಮಾರ್ ನಡುವಿನ ಮನಸ್ತಾಪ, ಡಿವೋರ್ಸ್‌ಗೋಸ್ಕರ ಕೋರ್ಟ್ ಮೆಟ್ಟಿಲೇರಿರೋದು ಎಲ್ಲರಿಗೂ ಗೊತ್ತಿದೆ. ಶ್ರೀದೇವಿ ಬೈರಪ್ಪ ಅವರು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಈ ಬಗ್ಗೆ ಮಾತನಾಡೋದುಂಟು. ಈಗ ಮತ್ತೆ ಈ ಬಗ್ಗೆ ಮಾತನಾಡಿದ್ದಾರೆ.

ಲವ್ ಮ್ಯಾರೇಜ್
ಶ್ರೀದೇವಿ ಬೈರಪ್ಪ ಹಾಗೂ ಯುವರಾಜ್‌ಕುಮಾರ್ ಅವರು 9 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದರು. ಡಾ ರಾಜ್‌ಕುಮಾರ್ ಅಕಾಡೆಮಿಯಲ್ಲಿ ಶ್ರೀದೇವಿ ಕೆಲಸ ಮಾಡುತ್ತಿದ್ದರು. ಅಲ್ಲಿಂದ ಸ್ನೇಹ ಸಂಬಂಧ ಶುರುವಾಗಿ, ಲವ್ ಆಗಿತ್ತು. ಯುವರಾಜ್‌ಕುಮಾರ್‌ಗಿಂತ ಶ್ರೀದೇವಿ ಐದು ವರ್ಷ ಚಿಕ್ಕವರು ಎನ್ನಲಾಗಿದೆ.
ಮದುವೆಯಾದ್ಮೇಲೆ ವಿದೇಶದಲ್ಲಿ ಶ್ರೀದೇವಿ ಶಿಕ್ಷಣ
ರಾಘವೇಂದ್ರ ರಾಜ್‌ಕುಮಾರ್ ಕುಟುಂಬಕ್ಕೆ ವಿದೇಶದಲ್ಲಿ ಓದುವ ಸ್ಕಾಲರ್‌ಶಿಪ್ ಬಂದಿತ್ತು. ವಿನಯ್ ರಾಜ್‌ಕುಮಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ರೆ, ಯುವರಾಜ್‌ಕುಮಾರ್ ಅವರು ಅಷ್ಟು ಓದಿಲ್ಲ ಎನ್ನಲಾಗಿದೆ. ಹೀಗಾಗಿ ಶ್ರೀದೇವಿ ಅವರು ಓದಲು ವಿದೇಶಕ್ಕೆ ಹೋದರು. ಎಲ್ಲವೂ ಚೆನ್ನಾಗಿತ್ತು, ಡಿಸೆಂಬರ್ ನಂತರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಕುಟುಂಬವು ಶ್ರೀದೇವಿ ಜೊತೆ ಚೆನ್ನಾಗಿ ಮಾತನಾಡಲಿಲ್ಲ, ಕಾಂಟ್ಯಾಕ್ಟ್ ಮಾಡಲಿಲ್ಲ ಎನ್ನೋ ಆರೋಪ ಇದೆ.
ಶ್ರೀದೇವಿ ವಿರುದ್ಧ ಮಾನನಷ್ಟ ಮೊಕದ್ದಮೆ?
ಇನ್ನು ಯುವರಾಜ್‌ಕುಮಾರ್ ಅವರು ಶ್ರೀದೇವಿಗೆ ಡಿವೋರ್ಸ್ ನೋಟೀಸ್ ಕಳಿಸಿದ್ದರು. ಆ ನಂತರದಲ್ಲಿ ಶ್ರೀದೇವಿ ಅವರು, ನಟಿಯ ಜೊತೆ ಯುವರಾಜ್‌ಕುಮಾರ್‌ಗೆ ಅಕ್ರಮ ಸಂಬಂಧ ಇದೆ, ರೂಮ್‌ನಲ್ಲಿ ಸಿಕ್ಕಿಹಾಕಿಕೊಂಡರು ಎಂದೆಲ್ಲ ಆರೋಪ ಮಾಡಿದ್ದರು. ಆಮೇಲೆ ಆ ನಟಿ ಶ್ರೀದೇವಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದರು.
ನಿಮ್ಮ ಮನೆಯಲ್ಲಿ ಹೆಣ್ಣಿಗೆ ಅನ್ಯಾಯ ಆಗಿಲ್ವಾ?
ರಮ್ಯಾರಿಗೆ ದರ್ಶನ್ ಅಭಿಮಾನಿಗಳು ಕೆಟ್ಟದಾಗಿ ಕಾಮೆಂಟ್ ಮಾಡಿದಾಗ ಶಿವರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್ ವಿರೋಧಿಸಿದ್ದರು. ಆಗ ಶ್ರೀದೇವಿ ಅವರು, “ನಿಮ್ಮ ಮನೆಯಲ್ಲಿ ಹೆಣ್ಣಿಗೆ ಅನ್ಯಾಯ ಆದಾಗ ಯಾಕೆ ಸುಮ್ಮನಿದ್ರಿ?” ಎಂದು ಪ್ರಶ್ನೆ ಮಾಡಿದ್ದರು. ಈಗ ಮತ್ತೆ ಇದೇ ವಿಚಾರವಾಗಿ ಮಾತನಾಡಿದ್ದಾರೆ.
ಯುವರಾಜ್‌ಕುಮಾರ್ ಬಗ್ಗೆ ಏನಂದ್ರು?
ಅಂದಹಾಗೆ ಇನ್‌ಸ್ಟಾಗ್ರಾಮ್‌ನಲ್ಲಿ Question And Answer ಒಂದಿಷ್ಟು ಸೆಗ್ಮೆಂಟ್ ಮಾಡಿದ್ದು, ಜನರ ಒಂದಿಷ್ಟು ಪ್ರಶ್ನೆಗೆ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಆ ವೇಳೆ ಯುವರಾಜ್‌ಕುಮಾರ್ ಬಗ್ಗೆ ಏನು ಮಾತಾಡ್ತೀರಿ ಎಂಬ ಪ್ರಶ್ನೆ ಬಂದಿತ್ತು. ಆಗ ಅವರು “ಬಾನಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಂದು..” ಎನ್ನುವ ಹಾಡು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

