- Home
- Entertainment
- Sandalwood
- ಬೆಸ್ಟ್ ಫ್ರೆಂಡ್ ಜೊತೆ ಎಂಗೇಜ್ ಆದ Actor Mandya Ramesh ಮಗಳು ದಿಶಾ! ಹುಡುಗ ಯಾರು?
ಬೆಸ್ಟ್ ಫ್ರೆಂಡ್ ಜೊತೆ ಎಂಗೇಜ್ ಆದ Actor Mandya Ramesh ಮಗಳು ದಿಶಾ! ಹುಡುಗ ಯಾರು?
ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸುಗ್ಗಿ ಶುರು ಆದಂತಿದೆ. ಒಬ್ಬರಾದ ಮೇಲೆ ಒಬ್ಬರಂತೆ ಕಲಾವಿದರು ನಿಶ್ಚಿತಾರ್ಥ ಮಾಡಿಕೊಳ್ತಿದ್ದಾರೆ, ಮದುವೆ ಆಗ್ತಿದೆ. ಅಷ್ಟೇ ಅಲ್ಲದೆ ಕಲಾವಿದರ ಮನೆಗೆ ಹೊಸ ಸದಸ್ಯರ ಆಗಮನವೂ ಆಗುತ್ತಿದೆ.
15

Image Credit : mandya ramesh daughter disha instagram
ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರ ಪುತ್ರಿ ದಿಶಾ ಕೂಡ ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
25
Image Credit : mandya ramesh daughter disha instagram
ದಿಶಾ ರಮೇಶ್ ಅವರು ಕೂಡ ತಂದೆಯಂತೆ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದಾರೆ. ಈಗಾಗಲೇ ಸಾಕಷ್ಟು ನಾಟಕಗಳನ್ನು ನೀಡಿರುವ ಅವರು ರಂಗಭೂಮಿಯಲ್ಲಿ ಮತ್ತೆ ಆಕ್ಟಿವ್ ಆಗಿದ್ದಾರೆ.
35
Image Credit : mandya ramesh daughter disha instagram
ದಿಶಾ ರಮೇಶ್ ಅವರು ಮನೋಜ್ ಎನ್ನುವವರ ಜೊತೆ ಎಂಗೇಜ್ ಆಗಿದ್ದಾರೆ. ಮನೋಜ್ ಕೂಡ ರಂಗಭೂಮಿ ಕಲಾವಿದರು, ಬರಹಗಾರರು. ದಿಶಾ ಹಾಗೂ ಮನೋಜ್ ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ.
45
Image Credit : mandya ramesh daughter disha instagram
ಈಗಾಗಲೇ ಈ ಜೋಡಿ ಒಟ್ಟಿಗೆ ಅನೇಕ ನಾಟಕಗಳನ್ನು ಮಾಡಿದೆ. ಇವರಿಬ್ಬರು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅನೇಕರು ಈ ಜೋಡಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
55
Image Credit : mandya ramesh daughter disha instagram
ದಿಶಾ ರಮೇಶ್ ಅವರು ಶ್ರೀ ಲಂಬೋದರ ವಿವಾಹ, ದೇವರ ನಾಡಲ್ಲಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಳ್ಳೆಯ ಪಾತ್ರಗಳು ಸಿಕ್ಕರೆ ಮಾತ್ರ ಸಿನಿಮಾದಲ್ಲಿ ನಟಿಸ್ತೀನಿ ಎನ್ನೋದು ದಿಶಾ ಮಾತು.
Latest Videos