Asianet Suvarna News Asianet Suvarna News

ಆಸೆ ಶೂಟಿಂಗ್‌ ವೇಳೆ ಅವಘಡ, ಹಿರಿಯ ನಟ ಮಂಡ್ಯ ರಮೇಶ್‌ಗೆ ತೀವ್ರ ಗಾಯ

ನಟ ಮಂಡ್ಯ ರಮೇಶ್ ಅವರು ಆಸೆ ಸೀರಿಯಲ್‌ನಲ್ಲಿ ಪ್ರಮುಖ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೀರಿಯಲ್ ಶೂಟಿಂಗ್ ಬೆಂಗಳೂರಿನ ರಾಜರಾಜೇಶ್ವರಿ ನಗರದ ಹೊರಭಾಗದಲ್ಲಿರುವ ಕಲ್ಲು ಕ್ವಾರಿಯ ಬಳಿ ನಡೆಯುತ್ತಿತ್ತು ಎನ್ನಲಾಗಿದೆ. 

Sandalwood and small screen actor mandya ramesh had accident in shooting srb
Author
First Published Nov 29, 2023, 4:22 PM IST

ಹಿರಿಯ ನಟ ಮಂಡ್ಯ ರಮೇಶ್​​ರವರಿಗೆ ಶೂಟಿಂಗ್​ ಸಮಯದಲ್ಲಿ ಆ್ಯಕ್ಸಿಡೆಂಟ್​ ಆಗಿದೆಯಂತೆ. ಆಸೆ ಸೀರಿಯಲ್ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೊನ್ನೆ ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ. ಕಲ್ಲು ಕ್ವಾರಿಯಲ್ಲಿ ಶೂಟಿಂಗ್ ನಡೆಸುತ್ತಿದ್ದ ವೇಳೆ ನಟ ಮಂಡ್ಯ ರಮೇಶ್ ಅವರು ಕಾಲು ಜಾರಿ ಬಿದ್ದರಂತೆ. ಕಾಲಿಗೆ ಎರಡು ಆಪರೇಷನ್ ನಡೆಸಲಾಗಿದೆ ಎಂದು ವರದಿಯಾಗಿದೆ. ವೈದ್ಯರು 25 ದಿನ ರೆಸ್ಟ್ ಹೇಳಿದ್ದಾರೆ ಎನ್ನಲಾಗಿದೆ. 

ಬೆಳ್ಳಗಿರೋದೆಲ್ಲಾ ಹಾಲು ಅಂತ ನಂಬ್ತಾನೆ ರಾಮ; ಸೀತಾಳನ್ನ ನೀನೇ ಕಾಪಾಡ್ಬೇಕು ಅಶೋಕ ಎನ್ನುತ್ತಿರುವ ನೆಟ್ಟಿಗರು

ನಟ ಮಂಡ್ಯ ರಮೇಶ್ ಅವರು ಆಸೆ ಸೀರಿಯಲ್‌ನಲ್ಲಿ ಪ್ರಮುಖ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೀರಿಯಲ್ ಶೂಟಿಂಗ್ ಬೆಂಗಳೂರಿನ ರಾಜರಾಜೇಶ್ವರಿ ನಗರದ ಹೊರಭಾಗದಲ್ಲಿರುವ ಕಲ್ಲು ಕ್ವಾರಿಯ ಬಳಿ ನಡೆಯುತ್ತಿತ್ತು ಎನ್ನಲಾಗಿದೆ. ಮಳೆ ಬಿದ್ದಿರುವುದರಿಂದ ಸಾಕಷ್ಟು ನೀರು ಅಲ್ಲಿ ಶೇಖರಣೆ ಆಗಿದ್ದು, ನೀರಿನಲ್ಲಿ ಮುಳುಗಿರುವ ಕಲ್ಲು, ಅಲ್ಲಿನ ಆಳ ಯಾವುದೂ ಸರಿಯಾಗಿ ಗೊತ್ತಾಗುವಂತಿರಲಿಲ್ಲ. ಹೀಗಾಗಿ ನಟ ಮಂಡ್ಯ ರಮೇಶ್ ಕಾಲು ಜಾರಿ ಬಿದ್ದಿದ್ದು, ತುಂಬಾ ಪೆಟ್ಟಾಗಿದೆ ಎನ್ನಲಾಗುತ್ತಿದೆ. 

ಬಿಗ್‌ಬಾಸ್‌ ಮನೆಯಲ್ಲಿ ರಸಪ್ರಶ್ನೆ ಕಾರ್ಯಕ್ರಮ; ನವೆಂಬರ್ 14 ಎಂದು ಕಿರುಚಿದ ಅವಿನಾಶ್ ಶೆಟ್ಟಿಗೆ ಮುಖಭಂಗ!

ಸ್ಟಾರ್ ಸುವರ್ಣದಲ್ಲಿ ಆಸೆ ಧಾರಾವಾಹಿ ಪ್ರಸಾರವಾಗಲಿದ್ದು, ಈ ಸೀರಿಯಲ್ಲನ್ನು ನಟ, ನಿರೂಪಕ ರಮೇಶ್ ಅರವಿಂದ್ ನಿರ್ಮಾಣ ಮಾಡುತ್ತಿದ್ದಾರೆ ಎನ್ನಲಾಗಿದೆ, ಮಂಡ್ಯ ರಮೇಶ್ ನಟಿಸುತ್ತಿರುವ ಈ ಸೀರಿಯಲ್ ನಾಯಕರಾಗಿ ನಿನಾದ್ ಹರಿತ್ಸ ನಟಿಸುತ್ತಿದ್ದು, ಸೀರಿಯಲ್ ಪ್ರೊಮೋ ಬಿಡುಗಡೆಯಾಗಿ ಭಾರೀ ನಿರೀಕ್ಷೆ ಮೂಡಿಸಿದೆ. ಈಗ, ಸೀರಿಯಲ್ ನಟ ರಮೇಶ್ ಅರವಿಂದ್ ಅವರಿಗೆ ಏಟಾಗಿದೆ, 25 ದಿನಗಳು ಅವರು ಶೂಟಿಂಗ್‌ಗೆ ಲಭ್ಯವಿಲ್ಲ ಎನ್ನವಂತಾಗಿದೆ. 

ನಾನು ತುಂಬಾ ಕೆಟ್ಟ ಸ್ಟೂಡೆಂಟ್ ಆಗಿದ್ದೆ, ಲಾಸ್ಟ್‌ ಬೆಂಚ್‌ನಲ್ಲಿ ಕುಳಿತುಕೊಳ್ಳುತ್ತಿದ್ದೆ; ನಟ ಅಲ್ಲು ಅರ್ಜುನ್

Latest Videos
Follow Us:
Download App:
  • android
  • ios