- Home
- Entertainment
- Sandalwood
- Jayam Ravi: ಪತ್ನಿ ಆರತಿ ಜೊತೆ ಮನಸ್ತಾಪ, ಗಾಯಕಿ ಜೊತೆ ಸಂಬಂಧ; ಈಗ ಗುಡ್‌ನ್ಯೂಸ್ ಕೊಟ್ಟ Actor Ravi Mohan!
Jayam Ravi: ಪತ್ನಿ ಆರತಿ ಜೊತೆ ಮನಸ್ತಾಪ, ಗಾಯಕಿ ಜೊತೆ ಸಂಬಂಧ; ಈಗ ಗುಡ್‌ನ್ಯೂಸ್ ಕೊಟ್ಟ Actor Ravi Mohan!
ಪತ್ನಿ ಆರತಿಯಿಂದ ದೂರವಾಗಿ, ಗಾಯಕಿ ಕೆನಿಷಾ ಫ್ರಾನ್ಸಿಸ್ ಜೊತೆ ಸಂಬಂಧ ಬೆಳೆಸಿರೋ ನಟ ರವಿ ಮೋಹನ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಬ್ರೋಕೋಡ್ ಎಂಬ ಸಿನಿಮಾವನ್ನು ಅನೌನ್ಸ್ ಮಾಡಿರುವ ಅವರೀಗ, ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ.

ಇತ್ತೀಚೆಗೆಷ್ಟೇ ತಮ್ಮದೇ ನಿರ್ಮಾಣ ಸಂಸ್ಥೆ ಬಗ್ಗೆ ಮಾಹಿತಿ ನೀಡಿದ್ದ ರವಿ ಮೋಹನ್ ಆ ಸಂಸ್ಥೆಯ ಚೊಚ್ಚಲ ಚಿತ್ರ ಯಾವುದು ಎಂಬ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ರವಿ ಮೋಹನ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಬ್ರೋಕೋಡ್ ಸಿನಿಮಾಕ್ಕೆ ಅವರೇ ನಾಯಕ.
ಡಿಕ್ಕಿಲೂನಾ, ವಡಕ್ಕುಪಟ್ಟಿ ರಾಮಸಾಮಿಯಂತಹ ಚಿತ್ರಗಳ ನಿರ್ದೇಶಕ ಕಾರ್ತಿಕ್ ಯೋಗಿ 'ಬ್ರೋಕೋಡ್' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರವಿ ಮೋಹನ್ ಜೊತೆಗೆ ಎಸ್ ಜೆ ಸೂರ್ಯ, ನಾಲ್ವರು ನಟಿಯರು ಈ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಅವರು ಯಾರು ಅನ್ನೋದನ್ನು ಚಿತ್ರತಂಡ ಇನ್ನೂ ರಿವೀಲ್ ಮಾಡಿಲ್ಲ. ಪೊರ್ ತೋಝಿಲ್ ಸಿನಿಮಾ ಮೂಲಕ ಹೆಸರುವಾಸಿಯಾದ ಕಲೈಸೆಲ್ವನ್ ಶಿವಾಜಿ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇರಲಿದೆ.
ʼಅನಿಮಲ್ʼ ಮತ್ತು ʼಅರ್ಜುನ್ ರೆಡ್ಡಿʼಯಂತಹ ಹಿಟ್‌ಗಳ ಸಂಗೀತ ನಿರ್ದೇಶಕ ಹರ್ಷವರ್ಧನ್ ಮ್ಯೂಸಿಕ್, ಪ್ರದೀಪ್ ಇ ರಾಘವ್ ಸಂಕಲನ, ಎ ರಾಜೇಶ್ ಕಲಾ ನಿರ್ದೇಶನ 'ಬ್ರೋಕೋಡ್' ಸಿನಿಮಾದಲ್ಲಿ ಇರಲಿದೆ. ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೇನರ್ ಜೊತೆಗೆ ಕಾಮಿಡಿ ಜಾನರ್ ಕಥೆಯನ್ನು ಒಳಗೊಂಡಿದೆ.
'ಬ್ರೋಕೋಡ್' ಸಿನಿಮಾ ಬಗ್ಗೆ ಮಾತನಾಡಿದ ನಿರ್ದೇಶಕ ಕಾರ್ತಿಕ್ ಯೋಗಿ, "ನಾನು ರವಿ ಮೋಹನ್ ಅವರಿಗೆ ಕಥೆಯನ್ನು ಹೇಳಿದಾಗ, ಅವರು ಅದನ್ನು ಸಂಪೂರ್ಣವಾಗಿ ಆನಂದಿಸಿದರು, ತಕ್ಷಣವೇ ಅದನ್ನು ನಿರ್ಮಿಸಲು ಮುಂದೆ ಬಂದರು" ಎಂದು ಹೇಳಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಈ ಸಿನಿಮಾ ಶೂಟಿಂಗ್ ಪ್ರಾರಂಭವಾಗಲಿದೆ. ಇನ್ನೂ, ರವಿ ಮೋಹನ್ ಸುಧಾ ಕೊಂಗರ ನಿರ್ದೇಶನದ ಪರಾಶಕ್ತಿ, ಗಣೇಶ್ ಕೆ. ಬಾಬು ನಿರ್ದೇಶನದ ಕರಾಟೆ ಬಾಬು ಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ. ಇದೀಗ ಅವರು ಮತ್ತೊಂದು ಸಿನಿಮಾ ಘೋಷಣೆ ಮಾಡಿರುವುದು ಅವರ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.