- Home
- Entertainment
- Cine World
- Jayam Ravi Divorce: ಅಕ್ರಮ ಸಂಬಂಧ ಇಟ್ಕೊಂಡ ನಟ ಜಯಂ ರವಿ! ತಿಂಗಳಿಗೆ ಇಷ್ಟು ಜೀವನಾಂಶ ಕೊಡಿ ಎಂದು ಪಟ್ಟುಹಿಡಿದ ಪತ್ನಿ ಆರತಿ
Jayam Ravi Divorce: ಅಕ್ರಮ ಸಂಬಂಧ ಇಟ್ಕೊಂಡ ನಟ ಜಯಂ ರವಿ! ತಿಂಗಳಿಗೆ ಇಷ್ಟು ಜೀವನಾಂಶ ಕೊಡಿ ಎಂದು ಪಟ್ಟುಹಿಡಿದ ಪತ್ನಿ ಆರತಿ
ವರ್ಷಗಳಿಂದ ಜಯಂ ರವಿ ಹಾಗೂ ಪತ್ನಿ ಆರತಿ ಮಧ್ಯೆ ಮನಸ್ತಾಪ ನಡೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಇವರಿಬ್ಬರು ಜಗಳ ಆಡಿಕೊಳ್ಳುತ್ತಿದ್ದಾರೆ. ನಟ ಜಯಂ ರವಿ ತಮ್ಮ ಪತ್ನಿ ಆರತಿಯಿಂದ ವಿಚ್ಛೇದನಕ್ಕಾಗಿ ಚೆನ್ನೈ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆರತಿ ಅವರು ಮಾಸಿಕ 40 ಲಕ್ಷ ರೂಪಾಯಿ ಜೀವನಾಂಶ ಕೇಳಿ ಅರ್ಜಿ ಸಲ್ಲಿಸಿದ್ದಾರೆ.

ಜಯಂ ಚಿತ್ರದ ಮೂಲಕ ಪರಿಚಿತರಾದ ರವಿ, ತಮ್ಮ ಹೆಸರನ್ನು ಜಯಂ ರವಿ ಎಂದು ಬದಲಾಯಿಸಿಕೊಂಡರು. ಎಂ.ಕುಮಾರನ್ ಸನ್ ಆಫ್ ಮಹಾಲಕ್ಷ್ಮಿ, ಪೇರಾಣ್ಮೈ, ಥನಿ ಒರುವನ್ ಸೇರಿದಂತೆ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ದೀರ್ಘಕಾಲದ ಗೆಳತಿ ಆರತಿಯನ್ನು 2009ರಲ್ಲಿ ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ.
ಈ ಸುದ್ದಿ ಎಲ್ಲರನ್ನೂ ಬೆಚ್ಚಿಬೀಳಿಸಿತು. ಈ ಸಂದರ್ಭದಲ್ಲಿ ತಮ್ಮ ಹೆಸರನ್ನು ರವಿ ಮೋಹನ್ ಎಂದು ಬದಲಾಯಿಸಿಕೊಂಡರು. ಆರ್ತಿಯಿಂದ ಬೇರ್ಪಡುವುದಾಗಿ ತಿಳಿಸಿದ ರವಿ ಮೋಹನ್ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹೂಡಿದರು. ನ್ಯಾಯಾಲಯವು ಸಮನ್ವಯಕ್ಕಾಗಿ ಕೌನ್ಸೆಲಿಂಗ್ ನಡೆಸಿತು. ಆದರೆ ರವಿ ಮೋಹನ್ ತಮ್ಮ ನಿರ್ಧಾರದಲ್ಲಿ ದೃಢವಾಗಿದ್ದರು.
ಇಂದು ಆರತಿಯಿಂದ ವಿಚ್ಛೇದನ ಪಡೆಯಲು ಕಾರಣಗಳೊಂದಿಗೆ ನಟ ರವಿ ಮೋಹನ್ ಚೆನ್ನೈ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅದೇ ರೀತಿ, ಆರ್ತಿ ಜೀವನಾಂಶ ಕೇಳಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ, ಮಾಸಿಕ 40 ಲಕ್ಷ ರೂಪಾಯಿ ಜೀವನಾಂಶ ನೀಡಬೇಕೆಂದು ಕೋರಿದ್ದಾರೆ ಎನ್ನಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದ ಈ ಜೋಡಿ ಇಷ್ಟು ವರ್ಷಗಳ ಕಾಲ, ತಾವು ಸುಂದರ ಜೀವನ ನಡೆಸುತ್ತಿದ್ದೇವೆ ಎಂದು ಎಲ್ಲರೂ ನಂಬುವ ಹಾಗೆ ಫೋಟೋಶೂಟ್ ಅಪ್‌ಲೋಡ್ ಮಾಡುತ್ತಿತ್ತು. ಈಗ ಹದಿನೆಂಟು ವರ್ಷಗಳ ಸಂಸಾರ ಹಳ್ಳ ಹಿಡಿದಿದೆ.
ಗಾಯಕಿ ಕೆನಿಷಾ ಫ್ರಾನ್ಸಿಸ್ ಮತ್ತು ರವಿ ಮೋಹನ್ ನಡುವೆ ಸಂಬಂಧವಿದ್ದುದರಿಂದ ತಮ್ಮ ದಾಂಪತ್ಯ ವಿಚ್ಛೇದನದವರೆಗೆ ಹೋಗಿದೆ ಎಂಬ ಮಾಹಿತಿ ಹೊರಬಿದ್ದಿತ್ತು. ಆರತಿ ಅವರೇ ಮೂರನೇ ವ್ಯಕ್ತಿಯಿಂದ ಡಿವೋರ್ಸ್ ಪಡೆಯಲು ನಿರ್ಧಾರ ಮಾಡಿರುವುದಾಗಿ ಹೇಳಿಕೊಂಡಿದ್ದರು. ಇಬ್ಬರೂ ಕೆಲವು ದಿನಗಳ ಹಿಂದೆ ಜೋಡಿಯಾಗಿ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದು ಇನ್ನಷ್ಟು ಕುತೂಹಲ ಮೂಡಿಸಿದೆ. ಪತಿ, ಕೆನಿಷಾ ವಿರುದ್ಧ ಆರತಿ ಸಾಕಷ್ಟು ಆರೋಪ ಮಾಡಿದ್ದಾರೆ.