- Home
- Entertainment
- Sandalwood
- Abhishek Ambareesh: ಕೊಡಗಿನಲ್ಲಿ ಅವಿವಾ ಬಿದ್ದಪ್ಪ; ಮಗ ರಾಣಾ ಅಮರ್ ಫೋಟೋ ರಿವೀಲ್ ಮಾಡಿದ ಅಭಿಷೇಕ್ ಅಂಬರೀಶ್ ಪತ್ನಿ
Abhishek Ambareesh: ಕೊಡಗಿನಲ್ಲಿ ಅವಿವಾ ಬಿದ್ದಪ್ಪ; ಮಗ ರಾಣಾ ಅಮರ್ ಫೋಟೋ ರಿವೀಲ್ ಮಾಡಿದ ಅಭಿಷೇಕ್ ಅಂಬರೀಶ್ ಪತ್ನಿ
ʼರೆಬೆಲ್ ಸ್ಟಾರ್ʼ ಅಂಬರೀಶ್ , ಅವಿವಾ ಬಿದ್ದಪ್ಪ ಅವರು ಮಗನ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಈಗ ಅವರು ಕೊಡಗಿನಲ್ಲಿ ಮಗನ ಜೊತೆ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದಾರೆ.

ʼರೆಬೆಲ್ ಸ್ಟಾರ್ʼ ಅಂಬರೀಶ್ ಅವರ ಮನೆಯಲ್ಲೀಗ ಮಗುವಿನ ಸದ್ದು. ಮರಿ ರೆಬೆಲ್ ಆಗಮನ ಆಗಿದೆ. ಅಂದಹಾಗೆ ತಿಂಗಳ ಹಿಂದೆ ಅದ್ದೂರಿಯಾಗಿ ನಾಮಕರಣ ಶಾಸ್ತ್ರವನ್ನು ಕೂಡ ಮಾಡಲಾಗಿತ್ತು.
ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರಿನ್ನೂ ಮಗುವಿನ ಫೋಟೋವನ್ನು ರಿವೀಲ್ ಮಾಡಿಲ್ಲ.
ಆರಂಭದಲ್ಲಿ ಅವಿವಾ ಬಿದ್ದಪ್ಪ ಅವರು ಮಗುವಿಗೆ ಜನ್ಮ ನೀಡಿದಾಗ ಆಸ್ಪತ್ರೆಯಲ್ಲಿ ತೆಗೆದ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಅಭಿಷೇಕ್ ಅವರು ತಮ್ಮ ಮುದ್ದಾದ ಮಗನಿಗೆ ರಾಣಾ ಅಮರ್ ಅಂಬರೀಶ್ ಎಂದು ನಾಮಕರಣ ಮಾಡಿದ್ದಾರೆ.
ಅಮರ್ ಎನ್ನೋದು ಅಂಬರೀಶ್ ಅವರ ಮೊದಲ ಹೆಸರು. ಮಗನಲ್ಲೂ ಕೂಡ ಅಭಿಷೇಕ್ ಅವರು ತಂದೆಯನ್ನು ಕಾಣುತ್ತಿದ್ದಾರೆ.
ಅಂದಹಾಗೆ ಅವಿವಾ ಬಿದ್ದಪ್ಪ ಅವರು ಫ್ಯಾಷನ್ ಡಿಸೈನಿಂಗ್ ಕ್ಷೇತ್ರದಲ್ಲಿಯೇ ಬ್ಯುಸಿ ಆಗಿದ್ದಾರೆ.
ಅಭಿಷೇಕ್ ಅಂಬರೀಶ್ ಅವರು ಸಿನಿಮಾಗಳತ್ತ ಗಮನ ಕೊಡುತ್ತಿದ್ದಾರೆ. ಇತ್ತೀಚೆಗೆ ಅವರು ಜಿಮ್‌ನಲ್ಲಿ ವರ್ಕೌಟ್ ಮಾಡುವ ವಿಡಿಯೋವೊಂದು ವೈರಲ್ ಆಗಿತ್ತು.
ಅಂದಹಾಗೆ ಯಾವಾಗ ಈ ಜೋಡಿ ಮಗನ ಮುಖವನ್ನು ರಿವೀಲ್ ಮಾಡಲಿದೆ ಎಂದು ಕಾದು ನೋಡಬೇಕಿದೆ.