Photos: ಅಭಿಷೇಕ್ ಅಂಬರೀಶ್, ಅವಿವಾ ಬಿದ್ದಪ್ಪ ಮಗನ ಅದ್ದೂರಿ ನಾಮಕರಣದ ಝಲಕ್ ಇದು!
ಕನ್ನಡ ನಟ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರ ಮಗನ ನಾಮಕರಣದ ಫೋಟೋಗಳು ಇಲ್ಲಿವೆ!

ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರು ಮಗನ ನಾಮಕರಣ ಶಾಸ್ತ್ರದಲ್ಲಿ ಭಾಗಿಯಾಗಿ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದ್ದಾರೆ.
ಬೆಂಗಳೂರಿನ ಜೆ ಡಬ್ಲ್ಯೂ ಮ್ಯಾರಿಯೆಟ್ ಹೋಟೆಲ್‌ನಲ್ಲಿ ಈ ನಾಮಕರಣ ನಡೆದಿದೆ. ಸಾಂಪ್ರದಾಯಿಕವಾಗಿ ಈ ಕಾರ್ಯಕ್ರಮ ನಡೆದಿದೆ.
ಅಂಬರೀಶ್ ಅವರು 'ರಾಕಿಂಗ್ ಸ್ಟಾರ್' ಯಶ್ ಮಗಳು ಆಯ್ರಾಗೋಸ್ಕರ ಕಲಘಟಗಿಯಿಂದ ಈ ತೊಟ್ಟಿಲು ತರಿಸಿಕೊಟ್ಟಿದ್ದರು. ಈಗ ಈ ತೊಟ್ಟಿಲು ಅಭಿಷೇಕ್ ಮಗನಿಗೆ ಸೇರಿದೆ.
ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರು ಎಷ್ಟು ಸುಂದರವಾಗಿ ಕಾಣ್ತಿದ್ದಾರೆ ನೋಡಿ. ಮಗನ ನಾಮಕರಣದ ಖುಷಿಯಲ್ಲಿ ಈ ಜೋಡಿ..!
ಮಗನ ಕಿವಿಯಲ್ಲಿ ಹೆಸರು ಪಠಿಸುತ್ತಿರುವ ನಟ ಅಭಿಷೇಕ್ ಅಂಬರೀಶ್. ಒಟ್ಟಿನಲ್ಲಿ ಅಂಬಿ ಕುಟುಂಬಕ್ಕೆ 'ಮರಿ ರೆಬೆಲ್ ಸ್ಟಾರ್' ಆಗಮನವಾಗಿದೆ.
ಅವಿವಾ ಬಿದ್ದಪ್ಪ ಅವರ ತಂದೆ ಪ್ರಸಾದ್ ಬಿದ್ದಪ್ಪ. ಬಾಲಿವುಡ್‌ನಿಂದ ಸ್ಯಾಂಡಲ್‌ವುಡ್‌ವರೆಗೆ ಸಾಕಷ್ಟು ನಟಿಯರನ್ನು ಪರಿಚಯಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ.
ಮಗನ ನಾಮಕರಣಕ್ಕೆ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅವರು ಭರ್ಜರಿಯಾಗಿ ರೆಡಿಯಾಗಿದ್ದಾರೆ. ನಟ ಅಭಿಷೇಕ್ ಖದರ್ ಹೀಗಿದೆ ನೋಡಿ.
ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರು ಬಹಳ ಸರಳವಾಗಿ ಈ ನಾಮಕರಣ ಕಾರ್ಯಕ್ರಮ ನೆರವೇರಿಸಿದ್ದಾರೆ. ತುಂಬ ಸುಂದರವಾಗಿ ಈ ಶಾಸ್ತ್ರ ನಡೆದಿದೆ.
ಅಂಬರೀಶ್ ಮೊಮ್ಮಗ, ಅಭಿಷೇಕ್ ಮಗ ರಾಣಾ ಅಮರ್ ಅಂಬರೀಶ್ ನಾಮಕರಣದಲ್ಲಿ ದೇವರ ವಿಗ್ರಹಕ್ಕೆ ಅಭಿಷೇಕ ಮಾಡಿದ್ದು ಹೀಗಿತ್ತು.
ಅಂಬರೀಶ್ ಅವರು ಇಂದು ದೈಹಿಕವಾಗಿ ನಮ್ಮೊಂದಿಗೆ ಇಲ್ಲ. ನಿಜಕ್ಕೂ ಇದ್ದಿದ್ದರೆ ಮೊಮ್ಮಗನನ್ನು ನೋಡಿ ಎಷ್ಟು ಖುಷಿ ಪಡುತ್ತಿದ್ದರೋ ಏನೋ!