- Home
- Entertainment
- Sandalwood
- ಕನ್ನಡದಲ್ಲಿ ಮುಂದೆ ಬರಲಿರೋ 9 ಬಿಗ್ ಸಿನಿಮಾಗಳು: ದರ್ಶನ್, ಧ್ರುವ ಸರ್ಜಾ, ಉಪ್ಪಿ ಕ್ರೇಜ್ ಬಲು ಜೋರು!
ಕನ್ನಡದಲ್ಲಿ ಮುಂದೆ ಬರಲಿರೋ 9 ಬಿಗ್ ಸಿನಿಮಾಗಳು: ದರ್ಶನ್, ಧ್ರುವ ಸರ್ಜಾ, ಉಪ್ಪಿ ಕ್ರೇಜ್ ಬಲು ಜೋರು!
ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ 70ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಿವೆ. ಒಂದಕ್ಕೂ ದೊಡ್ಡ ಗೆಲುವು ಸಿಕ್ಕಿಲ್ಲ. ಮುಂದೆ ಬರುವ ದೊಡ್ಡ ಸಿನಿಮಾಗಳು ಯಾವುವು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

1. ಕಾಂತಾರ 1: ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಈ ಸಿನಿಮಾ ಅದ್ಧೂರಿಯಾಗಿ ಮೂಡಿಬರುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ತಂತ್ರಜ್ಞರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅದ್ದೂರಿ ತಾರಾಗಣ ಇದೆ. ಅ.2ರಂದು ರಿಲೀಸ್ ಆಗುತ್ತಿದೆ.
2. ಕೆಡಿ: ಟೈಟಲ್ ಟೀಸರ್‌ನಿಂದಲೇ ಕುತೂಹಲ ಮೂಡಿಸಿದೆ. ಧ್ರುವ ಸರ್ಜಾ, ಜೋಗಿ ಪ್ರೇಮ್ ಸಿನಿಮಾ ಎಂದ ಮೇಲೆ ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಕರೆಸೋದು ಪಕ್ಕಾ. ಜತೆಗೆ ರೆಟ್ರೋ ದಿನಗಳ ಗ್ಯಾಂಗ್‌ಸ್ಟರ್ ಕತೆ.
3. 45: ಅರ್ಜುನ್ ಜನ್ಯ ನಿರ್ದೇಶನದ, ರಮೇಶ್ ರೆಡ್ಡಿ ಅದ್ದೂರಿ ನಿರ್ಮಾಣದ ಚಿತ್ರ. ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಈ ಸಿನಿಮಾದ ಹೆಗ್ಗಳಿಕೆ.
4. ಡೆವಿಲ್: ಮಿಲನ ಪ್ರಕಾಶ್ ನಿರ್ದೇಶನದ ಚಿತ್ರ. ಜತೆಗೆ ದರ್ಶನ್ ಎಂಬ ದೈತ್ಯ ಪ್ರತಿಭೆ. ದೊಡ್ಡ ಸಂಖ್ಯೆಯಲ್ಲಿರುವ ಅವರ ಅಭಿಮಾನಿಗಳು ಈ ಚಿತ್ರವನ್ನು ಕೈ ಬಿಡಲ್ಲ ಎನ್ನುವ ಭರವಸೆ.
5. ಲ್ಯಾಂಡ್ ಲಾರ್ಡ್: ದುನಿಯಾ ವಿಜಯ್ ಸಿನಿಮಾ. ಖ್ಯಾತ ನಿರ್ದೇಶಕ ಜಡೇಶ್ ಕುಮಾರ್ ಹಂಪಿ ನೈಜ ಘಟನೆ ಆಧರಿಸಿದ ಕತೆ ಹೇಳುತ್ತಿದ್ದಾರೆ.
6. ಯುವರ್ಸ್ ಸಿನ್ಸಿಯರ್ಲಿ ರಾಮ್: ರಮೇಶ್ ಅರವಿಂದ್ ಹಾಗೂ ಗಣೇಶ್ ನಟನೆಯ, ನಿರ್ಮಾಪಕ ವಿಖ್ಯಾತ್ ಅವರ ಮೊದಲ ನಿರ್ದೇಶನದ ಚಿತ್ರ.
7. ಎಕ್ಕ: ಪಕ್ಕಾ ಮಾಸ್ ಹಾಗೂ ಭೂಗತ ಲೋಕದ ಕತೆ. ರೋಹಿತ್ ಪದಕಿ ಹಾಗೂ ಯುವ ರಾಜ್‌ಕುಮಾರ್ ಇಬ್ಬರಿಗೂ ಒಂದು ಗೆಲುವು ಬೇಕಿದೆ. ಈ ಸಿನಿಮಾ ಆ ಗೆಲುವು ದೊರಕಿಸಿಕೊಡುವಂತಿದೆ.
8. ಕರಾವಳಿ: ನಿರ್ದೇಶಕ ಗುರುದತ್ತ ಗಾಣಿಗ ಒಳ್ಳೆಯ ಕತೆ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಕಾರಣಕ್ಕೆ. ಜತೆಗೆ ಚಿತ್ರದಲ್ಲಿನ ಪ್ರಜ್ವಲ್ ದೇವರಾಜ್ ಅವರ ಗೆಟಪ್, ಚಿತ್ರದ ಮೇಕಿಂಗ್ ಬೇರೆ ರೀತಿ ಇದೆ.
9. ಸಿಟಿ ಲೈಟ್ಸ್: ದುನಿಯಾ ವಿಜಯ್ ನಿರ್ದೇಶನದ ಚಿತ್ರ. ವಿನಯ್ ರಾಜ್‌ಕುಮಾರ್, ದುನಿಯಾ ವಿಜಯ್ ಪುತ್ರಿ ಮೋನಿಷಾ ನಟನೆಯ ಚಿತ್ರ.