ಹುಡುಗರ ಈ ಲುಕ್‌ಗೆ ಹುಡುಗಿಯರು ಫಿದಾ ಆಗೋದ್ರಲ್ಲಿ ಡೌಟೇ ಇಲ್ಲ
ಹುಡುಗಿಯರ ಮುಂದೆ ಗಡ್ಡ ಅಥವಾ ತಮ್ಮ ಬಾಡಿ ತೋರಿಸೋ ಮೂಲಕ ನೀವು ಅವರನ್ನು ಹೇಗೆ ಇಂಪ್ರೆಸ್ ಮಾಡಲು ಸಾಧ್ಯವಾಗುತ್ತದೆ ಎಂದು ನೀವು ಯೋಚಿಸುತ್ತಿದ್ದರೆ, ವಿಜ್ಞಾನವು ಈ ಕಠಿಣ ಪ್ರಶ್ನೆಗೆ ಪರಿಹಾರ ನೀಡಿದೆ. ಮಹಿಳೆಯರನ್ನು ಪುರುಷರ ಕಡೆಗೆ ಆಕರ್ಷಿಸುವ ನಿಮ್ಮ ಲುಕ್ ಗೆ ಸಂಬಂಧಿಸಿದ 5 ವಿಷಯಗಳು ಯಾವುವು ಎಂದು ತಿಳಿಯೋಣ.
ನೋಟಕ್ಕಿಂತ ವ್ಯಕ್ತಿತ್ವ ಮುಖ್ಯ. ಇದನ್ನು ಯಾರೂ ಅನುಮಾನಿಸಬಾರದು. ಆದರೆ, ಫಸ್ಟ್ ಇಂಪ್ರೆಶನ್ (first impression) ವಿಷಯಕ್ಕೆ ಬಂದಾಗ, ಮೊದಲ ಗಮನವು ಎಲ್ಲಾ ಸಂದರ್ಭಗಳಲ್ಲೂ ಲುಕ್ ಕಡೆಗೆ ಹೋಗುತ್ತದೆ ಅನ್ನೋದನ್ನು ಸುಳ್ಳು ಎನ್ನುವಂತಿಲ್ಲ. ಸಾಮಾನ್ಯವಾಗಿ ಹುಡುಗಿಯರು ಹುಡುಗರನ್ನು ನೋಡಿದಾಗ ಅಥವಾ ಹುಡುಗರು ಹುಡೂಗಿಯರನ್ನು ನೋಡಿದಾಗ, ಫಸ್ಟ್ ಸೈಟ್ ನಲ್ಲಿ ಗುಣದ ಬಗ್ಗೆ ಖಂಡಿತಾ ತಿಳಿದುಕೊಳ್ಳಲು ಸಾಧ್ಯವಿಲ್ಲ. ಬದಲಾಗಿ ಮೊದಲ ಬಾರಿಗೆ ಲುಕ್ ನೋಡಿಯೇ ಇಷ್ಟಪಡೋರು ತುಂಬಾ ಜನ ಇದ್ದಾರೆ. ಹುಡುಗಿಯರು ಹೆಚ್ಚು ಇಷ್ಟಪಡುವ ಹುಡುಗರ ಲುಕ್ ಗೆಸಂಬಂಧಿಸಿದ ವಿಷಯಗಳ ಬಗ್ಗೆ ಇಲ್ಲಿ ಹೇಳಲಿದ್ದೇವೆ ಮತ್ತು ವಿಜ್ಞಾನವು ಸಹ ಇದು ನಿಜಾ ಅನ್ನೋದನ್ನು ತಿಳಿಸಿದೆ.
ಟ್ರಿಮ್ ಮಾಡಿದ ಗಡ್ಡ: ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದ ಅಧ್ಯಯನದಲ್ಲಿ, ಟ್ರಿಮ್ ಮಾಡಿದ ಗಡ್ಡ (trimmed beard) ಅಥವಾ ಹೆವಿ ನ್ಯಾಚುರಲ್ ಗಡ್ಡ ಹೊಂದಿರುವ ಪುರುಷರ ಕಡೆಗೆ ಮಹಿಳೆಯರು ಹೆಚ್ಚು ಆಕರ್ಷಿತರಾಗುತ್ತಾರೆ ಎಂದು ತಿಳಿಸಿದೆ. ಮುಖದ ಮೇಲಿರೋ ಕೂದಲು ಅಥವಾ ಗಡ್ಡ ಪ್ರಾಬಲ್ಯ ಮತ್ತು ಅಟ್ಯಾಕಿಂಗ್ ನೇಚರ್ ಜೊತೆ ಸಂಬಂಧ ಹೊಂದಿದೆ, ಜೊತೆಗೆ ಪ್ರಬುದ್ಧತೆ ಮತ್ತು ಪುರುಷತ್ವದ ಚಿಹ್ನೆಯೂ ಇದಾಗಿದೆ ಎಂದು ಅಧ್ಯಯನದ ಲೇಖಕರಾದ ಜೇ ಡಿಕ್ಸನ್ ಮತ್ತು ರಾಬರ್ಟ್ ಸಿ. ಬ್ರೂಕ್ಸ್ ಹೇಳಿದರು.
ಹೆಚ್ಚು ಹೆವಿ ಅಲ್ಲದಾ… ಅಥವಾ ಹೆಚ್ಚು ಹಗುರವಲ್ಲದ ಗಡ್ಡವು ಹೆಚ್ಚು ಆಕರ್ಷಿಸುತ್ತದೆ. ಈ ರೀತಿ ಗಡ್ಡ ಇರೋರು ಲುಕ್ ಚೆನ್ನಾಗಿರುತ್ತೆ. ಇಂತಹ ಪುರುಷರನ್ನು ಮಹಿಳೆಯರು ಖಂಡಿತಾ ಇಷ್ಟ ಪಡ್ತಾರೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ಸೋ ನೀವು ಟ್ರಿಮ್ ಮಾಡಿದ್ರೆ ಖಂಡಿತವಾಗಿಯೂ ಮಹಿಳೆಯರು ಇಷ್ಟ ಪಡ್ತಾರೆ.
ವಯಸ್ಸಾದವರಂತೆ ಕಾಣುವ ಪುರುಷರು: 2010 ರ ಅಧ್ಯಯನದ ಪ್ರಕಾರ, ಹೆಚ್ಚಿನ ಮಹಿಳೆಯರು ಹೆಚ್ಚು ಚಿಕ್ಕವರಲ್ಲದ ಆದರೆ ನಿಜವಾದ ವಯಸ್ಸಿಗಿಂತ ಹೆಚ್ಚು ವಯಸ್ಸಾದಂತೆ ಅಥವಾ ಹೆಚ್ಚು ಪ್ರಬುದ್ಧರಾಗಿ ಕಾಣುವ ಪುರುಷರನ್ನು (matured man) ಇಷ್ಟಪಡ್ತಾರೆ. ಅದೇ ಸಮಯದಲ್ಲಿ, ಆರ್ಥಿಕವಾಗಿ ಸ್ವತಂತ್ರರಾಗಿರುವ ಮಹಿಳೆಯರು ವಯಸ್ಸಾದ ಮತ್ತು ಜೀವನದಲ್ಲಿ ಸ್ಥಿರತೆಯನ್ನು ಹೊಂದಿರುವ ಪುರುಷರನ್ನ ಇಷ್ಟಪಡುತ್ತಾರೆ ಎಂದು ಒಂದು ಅಧ್ಯಯನವು ತಿಳಿಸಿದೆ. ಇದಕ್ಕೆ 'ಜಾರ್ಜ್ ಕ್ಲೂನಿ ಎಫೆಕ್ಟ್' ಎಂದು ಹೆಸರಿಡಲಾಯಿತು.
ಡಿಯೋ/ಸುಗಂಧ ದ್ರವ್ಯ ಬಳಸುವವರು: ಸೆಂಟೆಡ್ ಡಿಯೋ ಅಥವಾ ಸುಗಂಧ ದ್ರವ್ಯ (deodorant) ಬಳಸುವ ಪುರುಷರು ಹೆಚ್ಚು ಆತ್ಮವಿಶ್ವಾಸದಿಂದ ತಮ್ಮನ್ನು ತಾವು ಪ್ರೆಸೆಂಟ್ ಮಾಡುತ್ತಾರೆ, ಇದು ಮಹಿಳೆಯರ ಗಮನವನ್ನು ಸೆಳೆಯುತ್ತದೆ. 2009ರಲ್ಲಿ ಜನರಲ್ ಆಫ್ ಕಾಸ್ಮೆಟಿಕ್ ಸೈನ್ಸ್ ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಇದು ವರದಿಯಾಗಿದೆ.
ಬಾಡಿ ಮಸಲ್ಸ್ (Body Muscles): ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಅಧ್ಯಯನವು ಮಹಿಳೆಯರು ದೈಹಿಕವಾಗಿ ಸದೃಢರಾಗಿರುವ ಪುರುಷರನ್ನು ಅಂದರೆ ಬಾಡಿ ಬಿಲ್ಡ್ ಮಾಡಿರುವ ಪುರುಷರನ್ನು ಇಷ್ಟಪಡುತ್ತಾರೆ ಎಂದು ಬಹಿರಂಗಪಡಿಸಿದೆ. ಆದಾಗ್ಯೂ, ಅವರು ತುಂಬಾ ಹೆವಿ ಮಸಲ್ಸ್ ಹೊಂದಿರುವ ಪುರುಷರೊಂದಿಗೆ ದೀರ್ಘ ಸಂಬಂಧ ಹೊಂದಲು ಇಷ್ಟ ಪಡೋದಿಲ್ಲ. ಸದೃಢವಾಗಿರೋ ಪುರುಷರು ಮಹಿಳೆಯರ ಮೊದಲ ಆಯ್ಕೆಯಾಗಿರುತ್ತಾರೆ.
ಹೈಜಿನ್ ಬಗ್ಗೆ ಗಮನ ಹರಿಸೋರು: ಇದಲ್ಲದೆ, ಮಹಿಳೆಯರು ತಮ್ಮ ಲುಕ್ ಮತ್ತು ಹೈಜಿನ್ ಬಗ್ಗೆ ಸಂಪೂರ್ಣ ಕಾಳಜಿ ವಹಿಸುವ ಪುರುಷರನ್ನು ಇಷ್ಟಪಡುತ್ತಾರೆ. ಉದಾಹರಣೆಗೆ, ಒಬ್ಬ ಹುಡುಗನು ಚೆನ್ನಾಗಿ ಡ್ರೆಸ್ ಮಾಡಿದ್ರೆ, ಆದರೆ ಅವನ ಉಸಿರು ವಾಸನೆ, ದೇಹದಿಂದ ಬೆವರಿನ ವಾಸನೆ, ಉಗುರುಗಳನ್ನು ಕತ್ತರಿಸದಿದ್ದರೆ ಅಥವಾ ಕೊಳಕಾಗದಿದ್ದರೆ, ಹುಡುಗಿಯರು ಅಂತಹ ಪುರುಷರ ಕಡೆಗೆ ಆಕರ್ಷಕರಾಗೋದಿಲ್ಲ.