MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ರೀಲ್ಸ್ ಮಾಡಬೇಡ ಎಂದ ಗಂಡನನ್ನ ಯೂಟ್ಯೂಬ್ ಐಡಿಯಾ ನೋಡಿ ಕೊಲೆ ಮಾಡಿದ ಹೆಂಡ್ತಿ!

ರೀಲ್ಸ್ ಮಾಡಬೇಡ ಎಂದ ಗಂಡನನ್ನ ಯೂಟ್ಯೂಬ್ ಐಡಿಯಾ ನೋಡಿ ಕೊಲೆ ಮಾಡಿದ ಹೆಂಡ್ತಿ!

Wife killed husband ಮಹಿಳೆಯೊಬ್ಬಳು ತನ್ನ ರೀಲ್ ಅಪ್‌ಲೋಡ್ ಮಾಡಲು ನಿರಾಕರಿಸಿದ್ದಕ್ಕೆ ಪತಿಯನ್ನು ಕೊಂದಿದ್ದು, ಇಬ್ಬರ ನಡುವೆ ಜಗಳವಾಗಿದೆ. ಜಗಳ ತಾರಕಕ್ಕೆ ಎರಿ ಕತ್ತು ಹಿಸುಕಿ ಕೊಂದಳು. 

1 Min read
Author : Sushma Hegde
Published : Feb 05 2026, 04:13 PM IST
Share this Photo Gallery
  • FB
  • TW
  • Linkdin
  • Whatsapp
14
ರೀಲ್ಸ್ ಕ್ರೇಜ್ ನಿಂದ ಕುಟುಂಬ ನಾಶ
Image Credit : Asianet News

ರೀಲ್ಸ್ ಕ್ರೇಜ್ ನಿಂದ ಕುಟುಂಬ ನಾಶ

ಮನರಂಜನೆ ಎನ್ನುವ ಹೆಸರಿನಲ್ಲಿ ಆರಂಭವಾದ ರೀಲ್ಸ್ ಕ್ರೇಜ್ ಒಂದು ಕುಟುಂಬವನ್ನೇ ನಾಶಪಡಿಸಿದ ಘಟನೆ ಮಧ್ಯಪ್ರದೇಶದ ಝಬುವಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ರೀಲ್ಸ್ ಮಾಡಲು ಪತಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ಕೋಪಗೊಂಡ ಪತ್ನಿಯೇ ಆತನನ್ನು ಕತ್ತು ಹಿಸುಕಿ ಕೊಂದಿರುವುದು ಇದೀಗ ಬಹಿರಂಗವಾಗಿದೆ. ಜಿಲ್ಲೆಯ ಥಾಂಡ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಗುರುವಾರ 25 ವರ್ಷದ ಕೈಲಾಶ್ ಎಂಬ ಯುವಕನ ಶವ ಪತ್ತೆಯಾಗಿದೆ. ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಾಣಿಸದಿದ್ದರೂ, ಅನುಮಾನಾಸ್ಪದ ಸ್ಥಿತಿಯಲ್ಲಿ ಶವ ಕಂಡುಬಂದಿತ್ತು. ಶವದ ಬಳಿ ಪತ್ನಿ ಅಳುತ್ತಾ ಕುಳಿತಿದ್ದ ದೃಶ್ಯ ಮೊದಲಿಗೆ ಎಲ್ಲರನ್ನು ಮರುಳುಗೊಳಿಸಿತ್ತು.

24
 ಪತಿ-ಪತ್ನಿ ನಡುವೆ ಜಗಳ
Image Credit : Asianet News

ಪತಿ-ಪತ್ನಿ ನಡುವೆ ಜಗಳ

ತಡರಾತ್ರಿ ಪತಿ-ಪತ್ನಿ ನಡುವೆ ಭಾರೀ ಜಗಳ ನಡೆದಿತ್ತು ಎಂದು ಕುಟುಂಬ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪತ್ನಿಯೇ ಕೈಲಾಶ್‌ನನ್ನು ಕೊಂದಿದ್ದಾಳೆ ಎಂಬ ಶಂಕೆಯ ಮೇಲೆ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದರು.

34
ತನಿಖೆಯಲ್ಲಿ ಬಯಲಾದ ಭಯಾನಕ ಸತ್ಯ
Image Credit : Getty

ತನಿಖೆಯಲ್ಲಿ ಬಯಲಾದ ಭಯಾನಕ ಸತ್ಯ

ಪ್ರಾಥಮಿಕ ತನಿಖೆಯಲ್ಲಿ ಪ್ರಕರಣ ಸಹಜ ಸಾವು ಎನ್ನುವಂತೆ ಕಂಡರೂ, ವಿಚಾರಣೆ ವೇಳೆ ಭಯಾನಕ ಸತ್ಯ ಹೊರಬಂದಿದೆ. ಘಟನೆಗೆ ಒಂದು ದಿನ ಮೊದಲು, ಮದುವೆ ಸಮಾರಂಭದಲ್ಲಿ ನೃತ್ಯ ಮಾಡುವ ದೃಶ್ಯವನ್ನು ರೀಲ್ಸ್‌ಗಾಗಿ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಲು ಪತ್ನಿ ಬಯಸಿದ್ದರು. ಇದಕ್ಕೆ ಕೈಲಾಶ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

44
ಯೂಟ್ಯೂಬ್‌ನಲ್ಲಿ ಕೊಲೆಯ ವಿಧಾನ ಹುಡುಕಾಟ
Image Credit : ChatGPT AI

ಯೂಟ್ಯೂಬ್‌ನಲ್ಲಿ ಕೊಲೆಯ ವಿಧಾನ ಹುಡುಕಾಟ

ಈ ವಿಚಾರವಾಗಿ ಉಂಟಾದ ಜಗಳ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೋಪಗೊಂಡ ಪತ್ನಿ ಯೂಟ್ಯೂಬ್‌ನಲ್ಲಿ ಕೊಲೆಯ ವಿಧಾನಗಳನ್ನು ಹುಡುಕಿದ್ದು, ಅದೇ ರಾತ್ರಿ ಪೇಟದಿಂದ ಕೈಲಾಶ್‌ನ ಕತ್ತು ಹಿಸುಕಿ ಕೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರ ವಿಚಾರಣೆಯ ವೇಳೆ ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿತ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ಮುಂದಿನ ತನಿಖೆ ಮುಂದುವರೆದಿದೆ. ರೀಲ್ಸ್, ಲೈಕ್ಸ್ ಮತ್ತು ಸಾಮಾಜಿಕ ಮಾಧ್ಯಮದ ಅತಿರೇಕ ಯಾವ ಮಟ್ಟಕ್ಕೆ ಹೋಗಬಹುದು ಎಂಬುದಕ್ಕೆ ಈ ಘಟನೆ ಭಯಾನಕ ಉದಾಹರಣೆಯಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ಕ್ರೈಮ್ ನ್ಯೂಸ್
ಭಾರತ ಸುದ್ದಿ
ಸುದ್ದಿ

Latest Videos
Recommended Stories
Recommended image1
Affair Signs: ಅಕ್ರಮ ಸಂಬಂಧ ಇದ್ರೆ ನಿಮ್ಮ ಜಾತಕದಲ್ಲೇ ಗೊತ್ತಾಗುತ್ತೆ! ಆ ಸೂಚನೆಗಳೇನು?
Recommended image2
Valentine's week: ಶುರುವಾಗಿದೆ ಪ್ರೇಮಿಗಳ ಹಬ್ಬ… ಇನ್ನು ಒಂದು ವಾರ ಹೀಗಿರಲಿ ನಿಮ್ಮ ಪ್ರೇಮೋತ್ಸವ
Recommended image3
Valentine's Day Love Horoscope: ಯಾರ ಲವ್ ಸೆಟ್ಟಾಗುತ್ತೆ, ಯಾರಿಗೆ ಡಿವೋರ್ಸ್? ಯಾರ ಲವ್ ಯಕ್ಕುಟ್ಟೋಗುತ್ತೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved