ಬುದ್ಧಿವಂತ ಜನರು ಏಕಾಂಗಿಯಾಗಿರಲು ಏಕೆ ಇಷ್ಟಪಡುತ್ತಾರೆ ಗೊತ್ತಾ ?
ಹೆಚ್ಚಾಗಿ ನಾವು ನೀವು ನೋಡಿದಂತೆ, ಹೆಚ್ಚು ಬುದ್ದಿವಂತ ಜನರು, ಯಶಸ್ವಿ ಜನರು ಸಾಮಾನ್ಯವಾಗಿ ಒಬ್ಬಂಟಿಯಾಗಿರೋದನ್ನೆ ನಾವು ನೋಡಿರುತ್ತೇವೆ. ಯಾಕೆ ಹೀಗೆ ಒಬ್ಬಂಟಿಯಾಗಿರೋರು ಹೆಚ್ಚು ಯಶಸ್ವಿಯಾಗಿರುತ್ತಾರೆ ಅಥವಾ ಬುದ್ಧಿವಂತರಾಗಿರುತ್ತಾರೆ ಎಂದು ನೀವೂ ಅಂದುಕೊಂಡಿರಬಹುದು ಅಲ್ವಾ? ಜನರು ಏಕಾಂಗಿಯಾಗಿ ಕೆಲಸ ಮಾಡಿದಾಗ, ಅವರು ಯೋಚಿಸಲು ಹೆಚ್ಚು ಸಮಯ ಹೊಂದಿರುತ್ತಾರೆ. ಅವರು ತನ್ನ ಆಯ್ಕೆ ಮತ್ತು ತೆಗೆದುಕೊಂಡ ನಿರ್ಧಾರದ ಬಗ್ಗೆ ಚೆನ್ನಾಗಿ ಯೋಚಿಸಲು ಸಾಧ್ಯವಾಗುತ್ತೆ. ಇದರಿಂದಾಗಿ ಅವರು ಹೆಚ್ಚಾಗಿ ಏಕಾಂಗಿಯಾಗಿ ಕೆಲಸ ಮಾಡಲು ಬಯಸುತ್ತಾರೆ.

ಕೆಲವು ಜನರು ಸಾಮಾನ್ಯವಾಗಿ ಏಕಾಂಗಿಯಾಗಿರಲು (work alone) ಇಷ್ಟಪಡುತ್ತಾರೆ. ಅವರು ತನ್ನ ಎಲ್ಲಾ ಕೆಲಸಗಳನ್ನು ಏಕಾಂಗಿಯಾಗಿ ಮಾಡಲು ಇಷ್ಟಪಡುತ್ತಾರೆ. ಅವರಿಗೆ ಹೆಚ್ಚು ಸ್ನೇಹಿತರಿರೋದಿಲ್ಲ, ಅಥವಾ ಯಾವುದೇ ಸ್ನೇಹಿತರ ಗ್ರೂಪ್ ಕೂಡ ಇರೋದಿಲ್ಲ. ಅಂತಹ ಜನರನ್ನು ಬುದ್ಧಿವಂತರೆಂದು ಸಹ ಪರಿಗಣಿಸಲಾಗುತ್ತದೆ.
ಬುದ್ಧಿವಂತ ಜನರು (intelligent people) ತಾವು ತೊಡಗಿರುವ ಕೆಲಸ ಪೂರ್ಣಗೊಳಿಸುವಲ್ಲಿ ಮಾತ್ರ ಗಮನ ಹರಿಸುತ್ತಾರೆ. ಈ ಸಮಯದಲ್ಲಿ ಯಾರಾದರೂ ಅವರನ್ನು ಬೆಂಬಲಿಸುತ್ತಾರೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ಅವರು ಕೆಲಸ ಮಾಡುತ್ತಾರೆ.. ಅದೇ ಅವರನ್ನು ಉಳಿದವರಿಗಿಂತ ಭಿನ್ನವಾಗಿಸುತ್ತದೆ. ಕೆಲವು ಜನರು ಎಲ್ಲಾ ಕೆಲಸಗಳನ್ನು ಏಕಾಂಗಿಯಾಗಿ ಮಾಡಲು ಇಷ್ಟಪಡ್ತಾರೆ, ಎಲ್ಲವನ್ನೂ ಅವರು ಒಬ್ಬಂಟಿಯಾಗಿ ಯಾಕೆ ಮಾಡ್ತಾರೆ ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಆಗಾಗ ಉದ್ಭವಿಸುತ್ತದೆ.
ಬುದ್ಧಿವಂತರು (Intelligent) ಏಕಾಂಗಿಯಾಗಿರಲು ಇಷ್ಟಪಡೋದು ಯಾಕೆ ಅಂದರೆ ಅವರು ಅನೇಕ ಜನರ ಸಹವಾಸವನ್ನು ಇಷ್ಟಪಡುವುದಿಲ್ಲ. ತಾವಾಯಿತು, ತಮ್ಮ ಕೆಲಸವಾಯಿತು ಎಂದು ಇದ್ದು ಬಿಡ್ತಾರೆ. ಇದು ಏಕೆ ಹೀಗೆ? ಬುದ್ಧಿವಂತ ಜನರು ಏಕಾಂಗಿಯಾಗಿರಲು ಮತ್ತು ತಮ್ಮ ಕೆಲಸವನ್ನು ಏಕಾಂಗಿಯಾಗಿ ಮಾಡಲು ಏಕೆ ಇಷ್ಟಪಡುತ್ತಾರೆ ? ಅನ್ನೋದನ್ನು ತಿಳಿಯೋಣ.
ಭವಿಷ್ಯ (Future)ಕ್ಕಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು
ಜನರು ಏಕಾಂಗಿಯಾಗಿ ಕೆಲಸ ಮಾಡಿದಾಗ, ಅವರು ಯೋಚಿಸಲು ಹೆಚ್ಚು ಸಮಯ ಹೊಂದಿರುತ್ತಾರೆ. ಅವರು ತನ್ನ ಆಯ್ಕೆ ಮತ್ತು ತೆಗೆದುಕೊಂಡ ನಿರ್ಧಾರದ ಬಗ್ಗೆ ಸರಿಯಾಗಿ ಯೋಚಿಸಬಹುದು. ಜೊತೆಗೆ ತಮ್ಮ ಭವಿಷ್ಯವನ್ನು ರೂಪಿಸುವ ವಿಷಯಗಳ ಬಗ್ಗೆ ಯೋಚಿಸಬಹುದು. ಇದಲ್ಲದೆ, ಇದು ಅವರಿಗೆ ಗಮನ ಹರಿಸಲು ಸಹ ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ ಬುದ್ಧಿವಂತ ಜನರು ಏಕಾಂಗಿಯಾಗಿ ಕೆಲಸ ಮಾಡಲು ಇಷ್ಟಪಡುತ್ತಾರೆ.
ಪ್ರಾಡಕ್ಟಿವಿಟಿ ಹೆಚ್ಚಿಸುತ್ತೆ
ಜನರು ಹೆಚ್ಚು ಜನರೊಂದಿಗೆ ಬೆರೆಯುತ್ತಿದ್ದರೆ, ಅವರು ತನ್ನ ಕೌಶಲ್ಯಗಳ ಪ್ರಾಡಕ್ಟಿವಿಟಿ (productivity) ಸುಧಾರಿಸಲು ಹೆಚ್ಚಿನ ಸಮಯ ಪಡೆಯಲು ಸಾಧ್ಯವಾಗೋದಿಲ್ಲ. ಪ್ರಾಡಕ್ಟಿವಿಟಿ ಮೇಲೆ ಕೆಲಸ ಮಾಡುವುದು ಒಬ್ಬ ವ್ಯಕ್ತಿಯು ತನ್ನ ಕೆಲಸವನ್ನು ತ್ವರಿತವಾಗಿ ಮತ್ತು ದಕ್ಷತೆಯಿಂದ ಪೂರ್ಣಗೊಳಿಸಲು ಸಹಾಯ ಮಾಡುತ್ತದೆ ಮತ್ತು ಬುದ್ಧಿವಂತ ಜನರು ತಮ್ಮ ಗುರಿಯನ್ನು ಸಮಯಕ್ಕೆ ಸರಿಯಾಗಿ ಕಂಪ್ಲೀಟ್ ಮಾಡಲು ಬಯಸುತ್ತಾರೆ.
ವಿಭಿನ್ನ ದೃಷ್ಟಿಕೋನಗಳಲ್ಲಿ ಆಲೋಚಿಸಬಹುದು
ಒಬ್ಬ ವ್ಯಕ್ತಿಯು ಏಕಾಂಗಿಯಾಗಿದ್ದಾಗ, ಅವನ ಆಲೋಚನಾ ಸಾಮರ್ಥ್ಯ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯವು ಹೆಚ್ಚಾಗುತ್ತೆ. ಈ ಸನ್ನಿವೇಶವು ಅವನಿಗೆ ಅನೇಕ ವಿಷಯಗಳನ್ನು ವಿಭಿನ್ನವಾಗಿ ಆಲೋಚಿಸುವ ಅವಕಾಶ ನೀಡುತ್ತದೆ, ಇದು ಅವನ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಸೃಜನಶೀಲ ಕೌಶಲ್ಯಗಳನ್ನು ಸುಧಾರಿಸುವುದು
ಬುದ್ಧಿವಂತ ಜನರು ಏಕಾಂಗಿಯಾಗಿ ಕೆಲಸ ಮಾಡಲು ಬಯಸುತ್ತಾರೆ ಏಕೆಂದರೆ ಅದು ಅವರ ಆಂತರಿಕ ಸೃಜನಶೀಲ ವ್ಯಕ್ತಿತ್ವಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ. ನೀವು ವಿಭಿನ್ನ ರೀತಿಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬಹುದು ಮತ್ತು ಡಿಫರೆಂಟ್ ಆಗಿ ಯೋಚಿಸಬಹುದು (different thinking). ಸುತ್ತಲೂ ಹೆಚ್ಚು ಜನರನ್ನು ಹೊಂದಿರುವುದು ಕ್ರಿಯೇಟಿವ್ ಆಗಿ ಯೋಚಿಸಲು ಕಷ್ಟವಾಗುತ್ತದೆ, ಏಕೆಂದರೆ ಸುತ್ತಲೂ ಗದ್ದಲವಿರುತ್ತೆ.