MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ನಾರ್ಸಿಸಿಸ್ಟ್ ನಡವಳಿಕೆ ಅಂದ್ರೆ ಏನು? ಪುನೀತ್ ರಾಜ್‌ಕುಮಾರ್ ಜತೆ ವಿಭಿನ್ನ ಪಾತ್ರದಲ್ಲಿ ನಟಿಸಿದ್ದ ಈ ನಟಿ ಬ್ರೇಕ್‌ಅಪ್ ಮಾಡಿಕೊಂಡಿದ್ದೇಕೆ?

ನಾರ್ಸಿಸಿಸ್ಟ್ ನಡವಳಿಕೆ ಅಂದ್ರೆ ಏನು? ಪುನೀತ್ ರಾಜ್‌ಕುಮಾರ್ ಜತೆ ವಿಭಿನ್ನ ಪಾತ್ರದಲ್ಲಿ ನಟಿಸಿದ್ದ ಈ ನಟಿ ಬ್ರೇಕ್‌ಅಪ್ ಮಾಡಿಕೊಂಡಿದ್ದೇಕೆ?

ಪುನೀತ್ ರಾಜ್‌ಕುಮಾರ್ ಜತೆ ನಟಸಾರ್ವಭೌಮ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಅನುಪಮಾ ಪರಮೇಶ್ವರನ್ ಇತ್ತೀಚಿಗಿನ ಸಂದರ್ಶನವೊಂದರಲ್ಲಿ ತಮ್ಮ ಬಾಯ್‌ಫ್ರೆಂಡ್ ಬಾಯ್‌ಫ್ರೆಂಡ್ ಒಬ್ಬ 'ನಾರ್ಸಿಸಿಸ್ಟ್' ಆಗಿದ್ದ, ಅದಕ್ಕೇ ಬ್ರೇಕಪ್ ಮಾಡಿಕೊಂಡೆ ಎಂದಿದ್ದರು.

2 Min read
Author : Naveen Kodase
Published : Aug 18 2026, 12:36 PM IST
Share this Photo Gallery
  • FB
  • TW
  • Linkdin
  • Whatsapp
16
ನಾರ್ಸಿಸಿಸ್ಟ್ ನಡವಳಿಕೆ ಅಂದ್ರೇನು?
Image Credit : our own

ನಾರ್ಸಿಸಿಸ್ಟ್ ನಡವಳಿಕೆ ಅಂದ್ರೇನು?

ನಾನು ಪ್ರೀತಿಸಿದ್ದೇ ದೊಡ್ಡ ತಪ್ಪಾ? ನನ್ನದೇನೂ ತಪ್ಪಿಲ್ಲದಿದ್ದರೂ, ಎಲ್ಲವೂ ನನ್ನದೇ ತಪ್ಪು ಎಂದು ಅವರು ನನ್ನನ್ನು ನಂಬಿಸಿದ್ದರು. ನನ್ನ ವ್ಯಕ್ತಿತ್ವವನ್ನೇ ಕುಗ್ಗಿಸುವಂತೆ ಮಾಡಿದ್ದರು. ಹೀಗೆಂದು ನಟಿ ಅನುಪಮಾ ಪರಮೇಶ್ವರನ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಮಾಜಿ ಬಾಯ್‌ಫ್ರೆಂಡ್ ಬಗ್ಗೆ ಹೇಳಿ ಸಂಚಲನ ಮೂಡಿಸಿದ್ದರು. ಹಾಗಿದ್ರೆ ಈ ನಾರ್ಸಿಸಿಸ್ಟ್ ನಡವಳಿಕೆ ಅಂದ್ರೆ ಏನು? ಅದನ್ನು ಗುರುತಿಸೋದು ಹೇಗೆ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮನಃಶಾಸ್ತ್ರದ ಪ್ರಕಾರ 'ನಾರ್ಸಿಸಿಸ್ಟ್' ಅಂದ್ರೇನು?
Image Credit : our own

ಮನಃಶಾಸ್ತ್ರದ ಪ್ರಕಾರ 'ನಾರ್ಸಿಸಿಸ್ಟ್' ಅಂದ್ರೇನು?

ಬ್ರೇಕಪ್ ನಂತರ, ಆತ ಒಬ್ಬ 'ನಾರ್ಸಿಸಿಸ್ಟ್' (Narcissist) ಎಂದು ಓಪನ್ ಆಗಿ ಹೇಳಿಕೊಂಡಿದ್ದರು. ಅಷ್ಟಕ್ಕೂ ಅನುಪಮಾಗೆ ಅಷ್ಟೊಂದು ನರಕ ತೋರಿಸಿದ ಆ 'ನಾರ್ಸಿಸಿಸ್ಟ್ ನಡವಳಿಕೆ' ಅಂದ್ರೆ ಏನು? ಈ ಮನಸ್ಥಿತಿ ಇರುವವರು ಹೇಗೆ ವರ್ತಿಸುತ್ತಾರೆ? ಮನಃಶಾಸ್ತ್ರಜ್ಞರು ಏನು ಹೇಳ್ತಾರೆ ನೋಡೋಣ. ಮನಃಶಾಸ್ತ್ರದ ಪ್ರಕಾರ, ನಾರ್ಸಿಸಿಸಂ ಅಂದರೆ, ತಮ್ಮ ಬಗ್ಗೆ ತಾವೇ ಅತಿಯಾಗಿ ಭಾವಿಸಿಕೊಂಡು, ಬೇರೆಯವರ ಭಾವನೆಗಳನ್ನು ಸಂಪೂರ್ಣವಾಗಿ ತುಳಿದುಹಾಕುವ ಸ್ವಾರ್ಥ ಮನೋಭಾವ.

Related Articles

Related image1
'ಮದುವೆಯಾಗಿದ್ದರೆ ಖಂಡಿತ ವಿಚ್ಛೇದನ ಪಡೆಯುತ್ತಿದ್ದೆ': ನಟಿ ಅನುಪಮಾ ಲವ್‌ ಲೈಫ್‌ನಲ್ಲಿ ಏನಾಗಿತ್ತು?
Related image2
ಧ್ರುವ್ ವಿಕ್ರಮ್ ಜೊತೆ ಬ್ರೇಕಪ್ ಆಯ್ತಾ? ಅನುಪಮಾ ಪರಮೇಶ್ವರನ್ ಹೊಸ ಪೋಸ್ಟ್ ವೈರಲ್
36
'ಅಪರಿಚಿತ'ನಂತಹ ನಡವಳಿಕೆ (Extreme Mood Swings):
Image Credit : our own

'ಅಪರಿಚಿತ'ನಂತಹ ನಡವಳಿಕೆ (Extreme Mood Swings):

ಅನುಪಮಾ ಹೇಳಿದಂತೆ, ಇಂಥವರು ಒಂದು ದಿನ ವಿಪರೀತ ಪ್ರೀತಿ ತೋರಿಸುತ್ತಾರೆ, ಮರುದಿನವೇ ಸಣ್ಣ ವಿಷಯಕ್ಕೂ ರಾಕ್ಷಸರಂತೆ ಬದಲಾಗುತ್ತಾರೆ. ನಂತರ, ತಮ್ಮದೇನೂ ತಪ್ಪಿಲ್ಲ ಎಂಬಂತೆ ಬಂದು ಕ್ಷಮೆ ಕೇಳಿ ಅಳುತ್ತಾರೆ. ಈ ರೀತಿಯ ಸೈಕಲಾಜಿಕಲ್ ಡ್ರಾಮಾದಿಂದ ಎದುರಿಗಿದ್ದವರನ್ನು ಗೊಂದಲಕ್ಕೆ ತಳ್ಳುತ್ತಾರೆ.

46
ಗ್ಯಾಸ್‌ಲೈಟಿಂಗ್ (Gaslighting):
Image Credit : Image: Pexels

ಗ್ಯಾಸ್‌ಲೈಟಿಂಗ್ (Gaslighting):

ತಪ್ಪು ತಮ್ಮದೇ ಇದ್ದರೂ, ಮಾತಿನ ಚಾಕಚಕ್ಯತೆಯಿಂದ ಅದನ್ನು ಬೇರೆಯವರ ಮೇಲೆ ಹಾಕುತ್ತಾರೆ. "ನಿನ್ನಿಂದಲೇ ನಾನು ಹೀಗೆ ನಡೆದುಕೊಳ್ಳಬೇಕಾಯಿತು" ಎಂದು ನಂಬಿಸಿ, ಎದುರಿಗಿದ್ದವರೇ ತಪ್ಪಿತಸ್ಥರೆಂಬ ಭಾವನೆ ಬರುವಂತೆ ಮಾಡುತ್ತಾರೆ.

56
ಆತ್ಮವಿಶ್ವಾಸ ಕುಗ್ಗಿಸುವುದು:
Image Credit : our own

ಆತ್ಮವಿಶ್ವಾಸ ಕುಗ್ಗಿಸುವುದು:

"ಆ ಸಂಬಂಧದಲ್ಲಿ ನನ್ನ ವ್ಯಕ್ತಿತ್ವವೇ ಕುಸಿದುಹೋದಂತೆ ಅನಿಸಿತು" ಎಂದು ಅನುಪಮಾ ಹೇಳಿದ್ದರು. ನಾರ್ಸಿಸಿಸ್ಟ್‌ಗಳು ತಮ್ಮ ಸಂಗಾತಿಯ ಆತ್ಮವಿಶ್ವಾಸವನ್ನು ಸಂಪೂರ್ಣವಾಗಿ ನಾಶಮಾಡಿ, ಅವರು ತಮ್ಮ ಮೇಲೆ ಮಾತ್ರ ಅವಲಂಬಿತರಾಗುವಂತೆ ಮಾಡುತ್ತಾರೆ. ಸಂಬಂಧದಲ್ಲಿ ಎಷ್ಟೇ ಹಿಂಸೆ ನೀಡಿದರೂ, ಹೊರಗಿನ ಪ್ರಪಂಚದ ಮುಂದೆ ಅಥವಾ ಕೊನೆಯಲ್ಲಿ ತಾವೇ ಬಲಿಪಶುಗಳು (Victims) ಎಂದು ಬಿಂಬಿಸಿಕೊಳ್ಳುತ್ತಾರೆ.

66
ಸಹಾನುಭೂತಿ ಇಲ್ಲದಿರುವುದು (Lack of Empathy):
Image Credit : our own

ಸಹಾನುಭೂತಿ ಇಲ್ಲದಿರುವುದು (Lack of Empathy):

ಸಂಗಾತಿ ಎಷ್ಟೇ ಮಾನಸಿಕ ಯಾತನೆ ಅನುಭವಿಸುತ್ತಿದ್ದರೂ ಇವರಿಗೆ ಅದರ ಬಗ್ಗೆ ಕಾಳಜಿ ಇರುವುದಿಲ್ಲ. ಎಲ್ಲವೂ ತಮ್ಮ ಅಧಿಪತ್ಯ ಮತ್ತು ತಮ್ಮ ಅಗತ್ಯಗಳ ಸುತ್ತಲೇ ಇರಬೇಕೆಂದು ಬಯಸುತ್ತಾರೆ. ನಾರ್ಸಿಸಿಸ್ಟ್ ಮನಸ್ಥಿತಿ ಇರುವವರ ಜೊತೆ ಪ್ರೀತಿಯಲ್ಲಿರುವುದು ಎಂದರೆ ಪ್ರತಿದಿನ ಮಾನಸಿಕ ಯುದ್ಧ ಮಾಡಿದಂತೆ. ಇಂತಹ ನಡವಳಿಕೆ ಹುಡುಗಿಯರಲ್ಲೇ ಇರಲಿ, ಹುಡುಗರಲ್ಲೇ ಇರಲಿ, ಅವರೊಂದಿಗೆ ಜೀವನ ನಡೆಸುವುದು ತುಂಬಾ ಕಷ್ಟ. ಅಂತಹ ಸಂಬಂಧದಿಂದ ಹೊರಬರುವುದೇ ಉತ್ತಮ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಸಂಬಂಧಗಳು
ಜೀವನಶೈಲಿ

Latest Videos
Recommended Stories
Recommended image1
₹40 ಲಕ್ಷ ಪ್ಯಾಕೇಜ್, ಹ್ಯಾಂಡ್‌ಸಮ್ ಹುಡುಗ; 'ರಾಹುಲ್ ಗಾಂಧಿ' ಕಾರಣಕ್ಕೆ ಮದುವೆಯನ್ನೇ ರಿಜೆಕ್ಟ್ ಮಾಡಿದ ಹುಡುಗಿ!
Recommended image2
ಚಿಕ್ಕಬಾಣಾವರ ಅಪ್ಪ-ಮಗನ ಸಾವಿನ ಕೇಸಿಗೆ ಬಿಗ್ ಟ್ವಿಸ್ಟ್; ಪ್ರಿಯಕರನೊಂದಿಗೆ ಮಾಡಿದ ಮಸಲತ್ತು ಬಿಚ್ಚಿಟ್ಟ ಹೆಂಡತಿ!
Recommended image3
ಪ್ಯಾರೀಸ್ ಫೋಟೋ ರಹಸ್ಯ ಬಯಲಾಯ್ತು! Bigg Boss ಸ್ಪಂದನಾ ಜೊತೆಗಿನ ಆ ಹುಡುಗ ಯಾರು? ಮದುವೆ ಯಾವಾಗ
Related Stories
Recommended image1
'ಮದುವೆಯಾಗಿದ್ದರೆ ಖಂಡಿತ ವಿಚ್ಛೇದನ ಪಡೆಯುತ್ತಿದ್ದೆ': ನಟಿ ಅನುಪಮಾ ಲವ್‌ ಲೈಫ್‌ನಲ್ಲಿ ಏನಾಗಿತ್ತು?
Recommended image2
ಧ್ರುವ್ ವಿಕ್ರಮ್ ಜೊತೆ ಬ್ರೇಕಪ್ ಆಯ್ತಾ? ಅನುಪಮಾ ಪರಮೇಶ್ವರನ್ ಹೊಸ ಪೋಸ್ಟ್ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved