MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • Valentine's week: ಶುರುವಾಗಿದೆ ಪ್ರೇಮಿಗಳ ಹಬ್ಬ… ಇನ್ನು ಒಂದು ವಾರ ಹೀಗಿರಲಿ ನಿಮ್ಮ ಪ್ರೇಮೋತ್ಸವ

Valentine's week: ಶುರುವಾಗಿದೆ ಪ್ರೇಮಿಗಳ ಹಬ್ಬ… ಇನ್ನು ಒಂದು ವಾರ ಹೀಗಿರಲಿ ನಿಮ್ಮ ಪ್ರೇಮೋತ್ಸವ

Valentine's week: ಇನ್ನೇನು ವ್ಯಾಲೆಂಟೈನ್ಸ್ ವೀಕ್ ಶುರುವಾಗಲಿದೆ. ಫೆಬ್ರುವರಿ 7ರಿಂದ ಫೆಬ್ರುವರಿ 14ರವರೆಗೆ ಪ್ರೇಮಿಗಳಿಗೆ ಹಬ್ಬ ಅಂತಾನೆ ಹೇಳಬಹುದು. ಈ ವಾರ ನಿಮ್ಮ ದಿನಚರಿ ಹೇಗಿರಬೇಕು, ನಿಮ್ಮ ಸಂಗಾತಿಗೆ ಏನೆಲ್ಲಾ ಗಿಫ್ಟ್ ನೀಡಬಹುದು, ಯಾವ ರೀತಿ ದಿನ ಕಳೆಯಬಹುದು ಇಲ್ಲಿದೆ ಮಾಹಿತಿ. 

2 Min read
Author : Pavna Das
Published : Feb 05 2026, 02:29 PM IST
Share this Photo Gallery
  • FB
  • TW
  • Linkdin
  • Whatsapp
18
ರೋಸ್ ಡೇ (ಫೆಬ್ರವರಿ 7)
Image Credit : Getty

ರೋಸ್ ಡೇ (ಫೆಬ್ರವರಿ 7)

ಲವ್ ವೀಕ್ ನ ಆರಂಭದ ದಿನ ರೋಸ್ ಡೇ, ಕೆಲವೊಮ್ಮೆ ಪದಗಳು ಹೇಳಲು ಸಾಧ್ಯವಾಗದೇ ಇರುವುದನ್ನು ಒಂದು ಹೂವು ಹೇಳುತ್ತೆ. ಹಾಗಾಗಿ ರೋಸ್ ನೀಡಿ ನಿಮ್ಮ ಪ್ರೀತಿಯನ್ನು ಹೇಳಿ.

ವಿಭಿನ್ನ ಬಣ್ಣಗಳು ವಿಭಿನ್ನ ಅರ್ಥ: ಕೆಂಪು ಪ್ರೀತಿಗೆ, ಹಳದಿ ಸ್ನೇಹಕ್ಕೆ, ಗುಲಾಬಿ ಮೆಚ್ಚುಗೆಗೆ ಮತ್ತು ಬಿಳಿ ಶಾಂತಿ ಅಥವಾ ಹೊಸ ಆರಂಭಕ್ಕೆ.

ಏನು ಮಾಡಬೇಕು: ಗುಲಾಬಿಯನ್ನು ನಿಮ್ಮವರಿಗೆ ಕೈಯಾರೆ ನೀಡಿ, ಕೆಲಸ ಅಥವಾ ಕಾಲೇಜಿನಲ್ಲಿ ಅವರಿಗೆ ಸರ್ಪ್ರೈಸ್ ನೀಡಿ, ಜೊತೆಗೆ ನಿಮ್ಮ ಪ್ರೀತಿಯನ್ನು ತಿಳಿಸುವ ಸಣ್ಣ ನೋಟ್ ಇರಲಿ

ಉಡುಗೊರೆ: ಫ್ರೆಶ್ ಹೂವುಗಳು, ಸಣ್ಣ ಪುಷ್ಪಗುಚ್ಛ, ಅಥವಾ ಬಾಳಿಕೆ ಬರುವ ಯಾವುದನ್ನಾದರೂ ಡ್ರೈ ಗುಲಾಬಿ ಬುಕ್‌ಮಾರ್ಕ್.

28
ಪ್ರಪೋಸ್ ಡೇ (ಫೆಬ್ರವರಿ 8)
Image Credit : pexels

ಪ್ರಪೋಸ್ ಡೇ (ಫೆಬ್ರವರಿ 8)

ಈ ದಿನ ನಿಮ್ಮ ಮನದಾಳದ ಪ್ರೀತಿಯನ್ನು ಹೇಳುವಂತಹ ದಿನವಾಗಿದೆ. ಇದಕ್ಕಾಗಿ ದೊಡ್ಡ ಸೆಟಪ್ ಬೇಕಾಗಿಲ್ಲ, ನಿಮ್ಮ ಭಾವನೆಗಳನ್ನು ತಿಳಿಸಿದರೆ ಸಾಕು.

ಏನು ಮಾಡಬೇಕು: ಕಾಫಿ ಡೇಟ್, ಲಾಂಗ್ ವಾಕ್ ಅಥವಾ ಫೋನ್ ಮಾಡಿ ನಿಮ್ಮ ಪ್ರೀತಿಯನ್ನು ಮನಸಾರೆ ಅವರಿಗೆ ತಿಳಿಸಿ. ಅಥವಾ ಪ್ರಪೋಸ್ ಮಾಡಲು ಸುಂದರವಾದ ಜಾಗಕ್ಕೆ ಕರೆದೊಯ್ಯಿರಿ.

ಉಡುಗೊರೆ: ಕೈಬರಹದ ಪತ್ರ, ನೆನಪುಗಳ ಸ್ಕ್ರ್ಯಾಪ್‌ಬುಕ್, ಅಥವಾ ಬಳೆ ಅಥವಾ ಉಂಗುರದಂತಹ ಸಣ್ಣ ಗಿಫ್ಟ್ ನೀಡಿ ಪ್ರಪೋಸ್ ಮಾಡಬಹುದು.

Related Articles

Related image1
Valentines Day: ಲವ್ ಪ್ರಪೋಸ್ ಮಾಡುವುದಕ್ಕೆ ಭಾರತದ ಪ್ರಸಿದ್ಧ ರೋಮ್ಯಾಂಟಿಕ್ ತಾಣಗಳು
Related image2
Valentines Day: ಹುಡುಗಿಯನ್ನು ಮೆಚ್ಚಿಸೋಕೆ ಗುಲಾಬಿ ನೀಡಿದ್ರೆ ಸಾಲದು, ಹೀಗ್‌ ಮಾಡಿ ಅಂತಾನೆ ವಾತ್ಸಾಯನ!
38
ಚಾಕೊಲೇಟ್ ಡೇ (ಫೆಬ್ರವರಿ 9)
Image Credit : Getty

ಚಾಕೊಲೇಟ್ ಡೇ (ಫೆಬ್ರವರಿ 9)

ಚಾಕೊಲೇಟ್ ದಿನವು ಪ್ರತಿಯೊಬ್ಬರೂ ಆನಂದಿಸಲು ಇಷ್ಟಪಡುವ ದಿನವಾಗಿದೆ. ಇದು ವ್ಯಾಲೆಂಟೈನ್ ವೀಕ್ ಗೆ ಮತ್ತಷ್ಟು ಸಿಹಿಯಾದ ಅನುಭವ ನೀಡುತ್ತೆ.

ಏನು ಮಾಡಬೇಕು: ಸಿಹಿತಿಂಡಿಗಳನ್ನು, ಚಾಕಲೇಟ್ ಗಳನ್ನು ಪ್ರೀತಿ ಪಾತ್ರರಿಗೆ ನೀಡಿ. ಒಟ್ಟಿಗೆ ಚಾಕಲೇಟ್ ತಯಾರಿಸಿ, ಅಥವಾ ನಿಮ್ಮವರಿಗೆ ಚಾಕೊಲೇಟ್ ಹ್ಯಾಂಪರ್ ಕಳುಹಿಸಿ.

ಉಡುಗೊರೆ: ಆರ್ಟೀಶಿಯನ್ ಚಾಕೊಲೇಟ್‌ಗಳು, ಮನೆಯಲ್ಲಿ ತಯಾರಿಸಿದ ಬ್ರೌನಿಗಳು, ಕುಕೀಸ್ ಅಥವಾ ಹಾಟ್ ಚಾಕೊಲೇಟ್ ಕಿಟ್ ನಿಮ್ಮವರಿಗೆ ನೀಡಿ, ಜೊತೆಗೊಂದು ಪ್ರೀತಿಯ ಮೆಸೇಜ್ ಇರಲಿ.

48
ಟೆಡ್ಡಿ ಡೇ (ಫೆಬ್ರವರಿ 10)
Image Credit : Freepik

ಟೆಡ್ಡಿ ಡೇ (ಫೆಬ್ರವರಿ 10)

ಟೆಡ್ಡಿ ಡೇ ಚೈಲ್ಡಿಶ್ ಅಂತ ನಿಮಗೆ ಅನಿಸಬಹುದು,ಆದರೆ ಈ ಸಾಫ್ಟ್ ಟಾಯ್ ನಿಮ್ಮ ಜೀವನದಲ್ಲೂ ಮೃದುವಾದ ಮಧುರವಾದ ಪ್ರೀತಿಯನ್ನು ಹರಡುತ್ತದೆ. .

ಏನು ಮಾಡಬೇಕು: ಟೆಡ್ಡಿ ಬೇರ್ ಅಥವಾ ಅವರಿಗೆ ನಿಮ್ಮನ್ನು ನೆನಪಿಸುವ ಯಾವುದೇ ಗೊಂಬೆಯನ್ನು ಉಡುಗೊರೆಯಾಗಿ ನೀಡಿ.

ಉಡುಗೊರೆ: ಸಾಫ್ಟ್ ಟಾಯ್ಸ್, ಹೂಡಿಗಳು, ಕಂಬಳಿಗಳು ಅಥವಾ ಮುದ್ದಾದ ಸಂದೇಶವಿರುವ ಕುಶನ್.

58
ಪ್ರಾಮಿಸ್ ಡೇ (ಫೆಬ್ರವರಿ 11)
Image Credit : pexels

ಪ್ರಾಮಿಸ್ ಡೇ (ಫೆಬ್ರವರಿ 11)

ಪ್ರಾಮಿಸ್ ಡೇ ಉಡುಗೊರೆಗಳಿಂದ ಬದ್ಧತೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ. ಇದು ನಂಬಿಕೆಯನ್ನು ಬೆಳೆಸುವುದು ಮತ್ತು ನಿಮ್ಮ ಬಾಂಧವ್ಯವನ್ನು ಬಲಪಡಿಸುವುದರ ದಿನ.

ಏನು ಮಾಡಬೇಕು: ಒಟ್ಟಿಗೆ ಹೆಚ್ಚು ಸಮಯ ಕಳೆಯುವುದು ಅಥವಾ ಪರಸ್ಪರರ ಗುರಿಗಳನ್ನು ಬೆಂಬಲಿಸುವಂತಹ ಸಣ್ಣ, ಭರವಸೆಗಳನ್ನು ನಿಮ್ಮವರಿಗೆ ನೀಡಬಹುದು.

ಉಡುಗೊರೆ: ಯಾವಾಗಲೂ ಜೊತೆಯಾಗಿರುವುದನ್ನು ಸಂಕೇತಿಸುವ ಪ್ರಾಮಿಸ್ ಕಾರ್ಡ್‌ಗಳು, ಜರ್ನಲ್‌ಗಳು ಅಥವಾ ಒಂದೇ ರೀತಿಯ ಕೀಚೈನ್‌ಗಳು.

68
ಹಗ್ ಡೇ (ಫೆಬ್ರವರಿ 12)
Image Credit : Getty

ಹಗ್ ಡೇ (ಫೆಬ್ರವರಿ 12)

ಒಂದು ಅಪ್ಪುಗೆಯು ದೀರ್ಘ ಭಾಷಣಕ್ಕಿಂತ ಹೆಚ್ಚಿನ ಮಾತುಗಳನ್ನು, ಪ್ರೀತಿಯನ್ನು ನೀಡುತ್ತೆ. ನಿಮ್ಮವರನ್ನು ಗಟ್ಟಿಯಾಗಿ ತಬ್ಬಿಕೊಳ್ಳುವ ಮೂಲಕ ವಿಶ್ ಮಾಡೀ.

ಏನು ಮಾಡಬೇಕು: ಸಾಧ್ಯವಾದರೆ ವೈಯಕ್ತಿಕವಾಗಿ ಭೇಟಿ ಮಾಡಿ. ಜೊತೆಯಾಗಿ ಸಿನಿಮಾ ನೋಡಿ, ಮಾತನಾಡಿ, ಜೊತೆಗೆ ಸಮಯ ಕಳೆಯಿರಿ.

ಉಡುಗೊರೆ: ಆರಾಮದಾಯಕ ಸಂಜೆಗಾಗಿ ಸ್ಕಾರ್ಫ್‌ಗಳು, ಸ್ವೆಟ್‌ಶರ್ಟ್‌ಗಳು ಅಥವಾ ಪರಿಮಳಯುಕ್ತ ಮೇಣದಬತ್ತಿಗಳು. ಇವು ನಿಮ್ಮ ಸನಿಹವನ್ನು ಫೀಲ್ ಮಾಡಿಸುತ್ತೆ.

78
ಕಿಸ್ ಡೇ (ಫೆಬ್ರವರಿ 13)
Image Credit : our own

ಕಿಸ್ ಡೇ (ಫೆಬ್ರವರಿ 13)

ಕಿಸ್ ಡೇ ಎಂದರೆ ರೊಮ್ಯಾನ್ಸ್ ಮತ್ತು ಕನೆಕ್ಷನ್ ಗೆ ಸಂಬಂಧಿಸಿದ ದಿನ. ಪ್ರೇಮಿಗಳ ದಿನದ ಹಿಂದಿನ ದಿನ ಬರುವ ಈ ದಿನವನ್ನು ರೊಮ್ಯಾಂಟಿಕ್ ಆಗಿಯೇ ಆಚರಿಸಬಹುದು.

ಏನು ಮಾಡಬೇಕು: ಡೇಟಿಂಗ್ ನೈಟ್, ಕ್ಯಾಂಡಲ್‌ಲೈಟ್ ಡಿನ್ನರ್ ಅಥವಾ ಲಾಂಗ್ ಡ್ರೈವ್ ಮಾಡಿ. ಒಂದು ಮುದ್ದಾದ ಕಿಸ್ ಎಕ್ಸ್ ಚೇಂಜ್ ಮಾಡಿ.

ಉಡುಗೊರೆ: ಸುಗಂಧ ದ್ರವ್ಯ, ಲವ್ ಲೆಟರ್ ಅಥವಾ ಪರಸ್ಪರ ನೆನಪಿಸುವ ಹಾಡುಗಳ ಪ್ಲೇ ಲಿಸ್ಟ್ ಉಡುಗೊರೆಯಾಗಿ ನೀಡಿ.

88
ಪ್ರೇಮಿಗಳ ದಿನ (ಫೆಬ್ರವರಿ 14)
Image Credit : Getty

ಪ್ರೇಮಿಗಳ ದಿನ (ಫೆಬ್ರವರಿ 14)

ಪ್ರೇಮಿಗಳ ದಿನವನ್ನು ಸಂಪೂರ್ಣವಾಗಿ ರೊಮ್ಯಾಂಟಿಕ್ ಆಗಿ ಕಳೆಯಿರಿ. ದುಬಾರಿ ಪ್ಲ್ಯಾನಿಂಗ್ ಬದಲು, ಆರಾಮದಾಯಕ ಕ್ಷಣಗಳನ್ನು ಜೊತೆಯಾಗಿ ಕಳೆಯಿರಿ.

ಏನು ಮಾಡಬೇಕು: ಒಟ್ಟಿಗೆ ಊಟ ಮಾಡಿ, ಪಿಕ್ನಿಕ್ ಯೋಜಿಸಿ, ನಿಮ್ಮ ನೆಚ್ಚಿನ ಸ್ಥಳಕ್ಕೆ ಮತ್ತೆ ಭೇಟಿ ನೀಡಿ, ಅಥವಾ ಇಡಿ ದಿನ ಮಾತನಾಡುತ್ತಾ ಮತ್ತು ನಗುತ್ತಾ ಸಮಯವನ್ನು ಕಳೆಯಿರಿ.

ಉಡುಗೊರೆ: ಆಭರಣಗಳು, ಪುಸ್ತಕಗಳು, ಫೋಟೋ ಆಲ್ಬಮ್‌ಗಳು, ಕೈಬರಹದ ಪತ್ರಗಳು ಅಥವಾ ಸರ್ಪ್ರೈಸ್ ಟೂರ್ ಪ್ಲ್ಯಾನ್ ಮಾಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ವ್ಯಾಲೆಂಟೈನ್ಸ್ ಡೇ
ಪ್ರೀತಿ
ಸಂಬಂಧಗಳು
ಜೀವನಶೈಲಿ

Latest Videos
Recommended Stories
Recommended image1
Valentine's Day Love Horoscope: ಯಾರ ಲವ್ ಸೆಟ್ಟಾಗುತ್ತೆ, ಯಾರಿಗೆ ಡಿವೋರ್ಸ್? ಯಾರ ಲವ್ ಯಕ್ಕುಟ್ಟೋಗುತ್ತೆ?
Recommended image2
ಮೊಮ್ಮಕ್ಕಳಲ್ಲೇ ಭೇದಭಾವ ಮಾಡ್ತಿದ್ದಾರೆ; ಪತ್ರಕರ್ತನನ್ನು ತರಾಟೆಗೆ ತಗೊಂಡ Megastar Chiranjeevi ಸೊಸೆ!
Recommended image3
ಸರ್ಪ್ರೈಸ್ ಗಿಫ್ಟ್ ಕೊಟ್ಟು ಪ್ರಪೋಸ್ ಮಾಡಿ, ನಿಮ್ಮ GFಗೆ ಗೋಲ್ಡ್ ಮೂಗುತಿ ಕೊಡಿ
Related Stories
Recommended image1
Valentines Day: ಲವ್ ಪ್ರಪೋಸ್ ಮಾಡುವುದಕ್ಕೆ ಭಾರತದ ಪ್ರಸಿದ್ಧ ರೋಮ್ಯಾಂಟಿಕ್ ತಾಣಗಳು
Recommended image2
Valentines Day: ಹುಡುಗಿಯನ್ನು ಮೆಚ್ಚಿಸೋಕೆ ಗುಲಾಬಿ ನೀಡಿದ್ರೆ ಸಾಲದು, ಹೀಗ್‌ ಮಾಡಿ ಅಂತಾನೆ ವಾತ್ಸಾಯನ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved