ಪ್ರೇಮಿಗಳ ದಿನದಂದು ಕೇವಲ ಗುಲಾಬಿ ನೀಡಿದರೆ ಸಾಲದು, ಹುಡುಗಿಯರನ್ನು ಮೆಚ್ಚಿಸಲು ಇನ್ನೂ ಹಲವು ಸರ್ಕಸ್ ಮಾಡಬೇಕಾಗುತ್ತದೆ. ವ್ಯಾಲೆಂಟೈನ್ಸ್ ಡೇ ಹುರುಪಿನಲ್ಲಿರುವ ಹುಡುಗರೇ, ವಾತ್ಸಾಯನ ಹೇಳುವ ಈ ಸೂತ್ರಗಳನ್ನು ಪಾಲಿಸಿ, ನಿಮ್ಮ ಹುಡುಗಿಯನ್ನು ಇಂಪ್ರೆಸ್ ಮಾಡಿ!
ಪ್ರೇಮಿಗಳ ದಿನ ಹತ್ತಿರ ಹತ್ತಿರ ಬರ್ತಾ ಇದೆ. ನಿಮ್ಮ ಲವರ್‌ಗೆ ಕೆಂಪು ಗುಲಾಬಿ ಹೂ ನೀಡಿ ಆಕೆಯನ್ನು ಇಂಪ್ರೆಸ್ ಮಾಡೋಕೆ ನೀವು ಯೋಚನೆ ಮಾಡ್ತಾ ಇರಬಹುದು. ರೆಡ್ ರೋಸ್ ಕೊಟ್ಟರೆ ಹುಡುಗಿಯರು ತುಂಬಾ ಇಷ್ಟಪಡೋದೇನೋ ನಿಜ. ಆದರೆ ಅಷ್ಟಕ್ಕೇ ಅವರು ನಿಮಗೆ ಒಲಿಯುತ್ತಾರೆ ಎಂಬ ಭ್ರಮೆ ಇಟ್ಕೋಬೇಡಿ. ಹುಡುಗಿಯರನ್ನು ಮೆಚ್ಚಿಸೋಕೆ ಇನ್ನೂ ಹಲವಾರು ಸ್ಕಿಲ್‌ಗಳೂ ಹುಡುಗರಲ್ಲಿ ಇರಬೇಕು, ಅವುಗಳನ್ನು ತೋರಿಸಬೇಕು ಅಂತಾನೆ ಕಾಮಸೂತ್ರದ ಗುರು ವಾತ್ಸಾಯನ. ಹಾಗಾದ್ರೆ ಅವ್ಯಾವುದು?
ನಿಮ್ಮ ಬಾಡಿ ಲ್ಯಾಂಗ್ವೇಜ್: ಹುಡುಗಿಯನ್ನು ಮೆಚ್ಚಿಸಲು ನಿಮ್ಮ ಆತ್ಮವಿಶ್ವಾಸ ಬಳಸಿ. ಆಸಕ್ತಿಯನ್ನು ತೋರಿಸಲು ನಿಮ್ಮ ದೇಹಭಾಷೆ ಮತ್ತು ಸನ್ನೆಗಳನ್ನು ಬಳಸಿ. ಕಾನ್ಫಿಡೆಂಟ್ ಆಗಿ ನಿಂತುಕೊಳ್ಳಿ. ಕಣ್ಣಿನ ಸಂಪರ್ಕ ಮಾಡಿ. ಬೆಚ್ಚನೆಯ ನಗು ಇರಲಿ. ಅವಳ ಮಾತು ಆಲಿಸುವಾಗ ತಲ್ಲೀನತೆ ತೋರಿಸಿ. ಅವಳ ಚಲನೆಯನ್ನು ಸೂಕ್ಷ್ಮವಾಗಿ ಪ್ರತಿಬಿಂಬಿಸಿ. ಆಕೆಯ ದೇಹ ಭಾಷೆಗೂ ಗಮನ ಕೊಡಿ ಮತ್ತು ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸಿ. ನೆನಪಿಡಿ, ಮಾತಿಗಿಂತ ನಿಮ್ಮ ದೇಹವೇ ಪ್ರಬಲವಾಗಿ ಮಾತನಾಡುತ್ತದೆ!
ಉತ್ತಮ ಕೇಳುಗರಾಗಿರಿ: ಅವಳು ಹೇಳುವುದಕ್ಕೆ ಗಮನ ಕೊಡಿ. ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸಿ. ಅವಳ ಜೀವನದ ಕುರಿತು ಏನಾದರೂ ಹೇಳಿದರೆ, ಅವಳ ಆಲೋಚನೆಗಳ ಬಗ್ಗೆ ನಿಜವಾದ ಕುತೂಹಲವನ್ನು ತೋರಿಸಿ.
ಪ್ರಶ್ನೆಗಳನ್ನು ಕೇಳಿ: ಸರಳವಾದ ಹೌದು/ಇಲ್ಲ ಉತ್ತರಗಳನ್ನು ಕೊಟ್ಟು ಕೈತೊಳೆದುಕೊಳ್ಳಬೇಡಿ. ಅದನ್ನೂ ಮೀರಿದ ಪ್ರಶ್ನೆಗಳನ್ನು ಕೇಳುವ ಮೂಲಕ ಸಂಭಾಷಣೆಯನ್ನು ಪ್ರೋತ್ಸಾಹಿಸಿ. ಹೆಚ್ಚು ಮಾತನಾಡಿದಷ್ಟೂ ಹುಡುಗಿಯರು ಹೆಚ್ಚು ತೆರೆದುಕೊಳ್ಳುತ್ತಾರೆ. ಅವರು ಮಾತನಾಡಲು ಪ್ರೋತ್ಸಾಹ ಕೊಟ್ಟರೆ ಅವರಿಗೆ ನಿಮ್ಮಲ್ಲಿ ಉತ್ಸಾಹ ಹೆಚ್ಚುತ್ತದೆ.
ಗ್ರೀಟಿಂಗ್ಸ್ ನೀಡಿ: ಗ್ರೀಟಿಂಗ್ಸ್ ಅಂದ್ರೆ ಕಾರ್ಡ್ ಅಲ್ಲ. ಬದಲಾಗಿ ಅಭಿನಂದಿಸುವ ವಿಚಾರಗಳು ಬಂದಾಗ ಅಭಿನಂದಿಸಿ. ಅವಳ ಬುದ್ಧಿವಂತಿಕೆ, ಹಾಸ್ಯ ಪ್ರಜ್ಞೆ ಅಥವಾ ವಿಶಿಷ್ಟ ದೃಷ್ಟಿಕೋನಗಳನ್ನು ಮೆಚ್ಚಿಕೊಳ್ಳಿ. ಅವಳ ಲುಕ್ ಅನ್ನು ಹೊಗಳುವುದು ಸಾಮಾನ್ಯ ವಿಷಯ. ಇದೂ ಬೇಕು. ಆದರೆ ಇದೊಂದೇ ಸಾಲದು. ನೋಟವನ್ನು ಮೀರಿದ ಅಭಿನಂದನಾ ಅಂಶಗಳು.
ಅವಳನ್ನು ನಗುವಂತೆ ಮಾಡಿ: ಹುಡುಗರಲ್ಲಿ ಹಾಸ್ಯ ಪ್ರಜ್ಞೆಯನ್ನು ಹುಡುಗಿಯರು ಅತ್ಯಂತ ಹೆಚ್ಚು ಇಷ್ಟಪಡುತ್ತಾರೆ. ಆದ್ದರಿಂದ ಸನ್ನಿವೇಶಕ್ಕೆ ಸೂಕ್ತವಾದ ಜೋಕ್ ಹೇಳಬಹುದು. ತಮಾಷೆಯ ಕಥೆಗಳು ಅಥವಾ ಹಾಸ್ಯಗಳನ್ನು ಹಂಚಿಕೊಳ್ಳಬಹುದು. ಆದರೆ ಆಕೆಯ ದೇಹದ ಬಗ್ಗೆ, ಆಕೆಯ ಜಾತಿ- ಧರ್ಮ- ಕುಟುಂಬದ ಬಗ್ಗೆ ಜೋಕ್ ಮಾಡಿದರೆ ನೀವು ಔಟ್‌ರೈಟ್ ರಿಜೆಕ್ಟ್ ಆಗುತ್ತೀರಿ ಎಚ್ಚರ.
ಅವಳ ಗಡಿಗಳನ್ನು ಗೌರವಿಸಿ: ಅವಳನ್ನು ಸೌಜನ್ಯದಿಂದ ನೋಡಿಕೊಳ್ಳಿ. ಎಂದಿಗೂ ಅನುಚಿತವಾದ ಕಾಮೆಂಟ್‌ಗಳು, ಸನ್ನೆಗಳನ್ನು ಮಾಡಬೇಡಿ. ನಾನ್‌ವೆಜ್ ಜೋಕ್ ಹೇಳಬೇಡಿ. ಪೋಲಿ ಭಾಷೆ, ಅಶ್ಲೀಲ ಸೂಚನೆಗಳು ಬೇಡ. ಆಕೆಗೂ ಘನತೆ, ಒಂದು ಸಾಮಾಜಿಕ ಸ್ಥಾನಮಾನ ಇದೆ. ಅವಳನ್ನು ಪಬ್ಲಿಕ್ ಆಗಿ ಯಾರಾದರೂ ಕನಿಷ್ಠಗೊಳಿಸುವುದು ಇಷ್ಟವಾಗದು.
ಅರ್ಥಪೂರ್ಣ ಡೇಟಿಂಗ್ ಯೋಜಿಸಿ: ಡೇಟಿಂಗ್ ದಿನ, ವಿಷಯ, ತಾಣ ಇತ್ಯಾದಿ ಆಯ್ಕೆ ಮಾಡುವಾಗ ಆಕೆಯ ಆಸಕ್ತಿಗಳಿಗೂ ಗಮನ ಕೊಡಿ. ಒಳ್ಳೆಯ ಊಟ, ಅಡ್ವೆಂಚರ್, ಎಂಟರ್‌ಟೇನ್ಮೆಂಟ್‌ಗಳಿಗೆ ಕರದುಕೊಂಡು ಹೋಗಿ ನೀವು ಒಳ್ಳೆಯ ಅಭಿರುಚಿ ಹೊಂದಿದವರೆಂದು ತೋರಿಸುವುದು ಚೆನ್ನಾಗಿರುತ್ತದೆ.
ಸಂಸಾರಕ್ಕೆ ಮುಳ್ಳಾಗ್ಬಹುದು ವ್ಯಾಲೆಂಟೈನ್ ಡೇ ದಿನ ನೀಡೋ ಈ ಗಿಫ್ಟ್
ನೀವೇ ಆಗಿರಿ: ನಿಮ್ಮ ಸ್ವಂತ ವ್ಯಕ್ತಿತ್ವವನ್ನು ಮಾತ್ರವೇ ತೋರಿಸಿ. ನೀವಲ್ಲದ ವ್ಯಕ್ತಿಯಾಗಿ ಯಾವುದೇ ಶೋಆಫ್ ಮಾಡಬೇಡಿ. ಮುಖವಾಡಗಳು ಬಹಳ ಬೇಗೆ ಕಳಚಿ ಬೀಳುತ್ತವೆ.
ಡ್ರೆಸ್ ಸೆನ್ಸ್: ಸಂದರ್ಭಕ್ಕೆ ಸೂಕ್ತವಾದ ಡ್ರೆಸ್ಸಿಂಗ್ ಮಾಡಿಕೊಳ್ಳಿ. ಡೇಟಂಗ್‌ಗೆ ಹೋಗುವಾಗ ಸೂಟು ಬೂಟು ಚೆನ್ನಾಗಿರೋಲ್ಲ. ಆದ್ರೂ ಸಭ್ಯ, ಗಮನಸೆಳೆಯುವ ಬಟ್ಟೆ ಬೇಕು. ಶುಚಿತ್ವ ಕಾಪಾಡಿಕೊಳ್ಳಿ.
ಯೋಚಿಸಿ ವರ್ತಿಸಿ: ಕೆಲವು ಸಣ್ಣಪುಟ್ಟ ವರ್ತನೆಗಳು ನಿಮ್ಮ ಒಳ್ಳೆಯ ಗುಣವನ್ನು ಆಕೆಗೆ ಮನದಟ್ಟು ಮಾಡಿಸಲು ಸಹಾಯವಾಗುತ್ತದೆ. ಆಕೆಗಾಗಿ ಬಾಗಿಲು ತೆರೆಯುವುದು, ಕುರ್ಚಿಯನ್ನು ಹಿಂದಕ್ಕೆಳೆದು ಕೂರಿಸುವುದು ಅಥವಾ ಏನಾದರೂ ಸಹಾಯ ನೀಡುವುದು- ಇಂತಹ ಸಣ್ಣ ಸಣ್ಣ ಕ್ರಿಯೆಗಳು ಆಕೆಗೆ ಇಷ್ಟವಾಗುತ್ತವೆ.
