MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಶುರುವಾಗಿದ್ಯಂತೆ ಥ್ರೋನಿಂಗ್ ಟ್ರೆಂಡ್….. ಇದ್ರಲ್ಲಿ ಪ್ರೀತಿ, ಗೀತಿ ಏನು ಇಲ್ಲ ಹಣ, ಅಂತಸ್ತು ಇದ್ರೆ ಡೇಟಿಂಗ್ ಫಿಕ್ಸ್!

ಶುರುವಾಗಿದ್ಯಂತೆ ಥ್ರೋನಿಂಗ್ ಟ್ರೆಂಡ್….. ಇದ್ರಲ್ಲಿ ಪ್ರೀತಿ, ಗೀತಿ ಏನು ಇಲ್ಲ ಹಣ, ಅಂತಸ್ತು ಇದ್ರೆ ಡೇಟಿಂಗ್ ಫಿಕ್ಸ್!

ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತಿರುವ ಈ ಸಮಯದಲ್ಲಿ ಒಂದಲ್ಲ ಒಂದು ರೀತಿಯ ಟ್ರೆಂಡ್ ಗಳು ಸೃಷ್ಟಿಯಾಗುತ್ತವೆ. ಕೆಲ ಸಮಯದ ಹಿಂದೆ Dinks ಕಪಲ್ಸ್ ಟ್ರೆಂಡ್ ಭಾರಿ ಚರ್ಚೆಯಾಗಿತ್ತು. ಇದೀಗ ಥ್ರೋನಿಂಗ್ ಟ್ರೆಂಡ್ ನಲ್ಲಿದೆ. ಈ ವಿಚಿತ್ರ ರಿಲೇಶನ್’ಶಿಪ್ ಬಗ್ಗೆ ತಿಳಿದ್ರೆ ನೀವೂ ಅಚ್ಚರಿ ಪಡ್ತೀರಿ.  

2 Min read
Author : Pavna Das
| Updated : Nov 12 2024, 05:48 PM IST
Share this Photo Gallery
  • FB
  • TW
  • Linkdin
  • Whatsapp
17

ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಅರ್ಥವನ್ನೇ ಕಳೆದುಕೊಳ್ಳುತ್ತಿವೆ. ಹಿಂದೆ ರಿಲೇಶನ್ನ್’ಶಿಪ್ ಲವ್ವಲ್ಲಿ ಬಿದ್ದರೆ, ಅದು ಸಾಯೋವರೆಗಿನ ಸಂಬಂಧ ಎನಲಾಗುತ್ತಿತ್ತು. ಆದರೆ ಈಗ ಅದು ತಿಂಗಳಿಗೊಮ್ಮೆ ಬದಲಾಯಿಸುವ ಟ್ರೆಂಡ್ ಆಗಿದೆ. ಕೆಲವು ದಿನಗಳ ಹಿಂದೆ Dinks ಕಪಲ್ ಟ್ರೆಂಡ್ ಹೆಚ್ಚಾಗಿತ್ತು, Dinks  ಅಂದ್ರೆ ದ್ಯುವಲ್ ಇನ್’ಕಮ್ ನೋ ಕಿಡ್ಸ್. ಅಂದರೆ ಈ ರಿಲೇಶನ್’ಶಿಪ್ ನಲ್ಲಿ ಜೋಡಿಗಳು ಮಕ್ಕಳನ್ನು ಮಾಡುವ ಬಗ್ಗೆ ಯೋಚನೆ ಮಾಡೋದಿಲ್ಲ. ಆದರೆ ಇಬ್ಬರು ದುಡಿದು ಹೆಚ್ಚು ಸಂಪಾದನೆ ಮಾಡುವ ಬಗ್ಗೆ ಗಮನ ಹರಿಸುತ್ತಾರೆ. 
 

27

ಈ Dinks  ಕಪಲ್ಸ್ ಹೆಚ್ಚಾಗಿ ತಮ್ಮ ಕರಿಯರ್ ಬಗ್ಗೆಯೇ ಯೋಚನೆ ಮಾಡ್ತಾರೆ, ಹಾಗಾಗಿ ನೋ ಕಿಡ್ಸ್ ಸೂತ್ರವನ್ನು (no kids formula) ಅಳವಡಿಸಿಕೊಳ್ಳುತ್ತಾರೆ. ಅವರ ಸಂಪೂರ್ಣ ಗಮನವು ಹಣ ಸಂಪಾದಿಸುವುದು ಮತ್ತು ಉತ್ತಮ ಜೀವನಶೈಲಿಯನ್ನು ಅನುಸರಿಸುವುದು. ಈ ಜೋಡಿಗಳು ಹೆಚ್ಚು ಹಣ ಸಂಪಾದನೆ ಮಾಡೋದನ್ನು ಹಾಗೂ ದೇಶ, ವಿದೇಶ ಸುತ್ತೋದನ್ನು ಇಷ್ಟಪಡ್ತಾರೆ.  

37

ಇದೇ ಟ್ರೆಂಡ್ ಅನ್ನೇ ಜನ ಒಪ್ಪಿಕೊಳ್ಳೋದಕ್ಕೆ ಕಷ್ಟ ಪಡ್ತಿದ್ರೆ, ಇದೀಗ ಮತ್ತೊಂದು ರಿಲೇಶನ್ ‘ಶಿಪ್ ಟ್ರೆಂಡಿಂಗ್ ನಲ್ಲಿದೆ. ಅದುವೇ ಥ್ರೋನಿಂಗ್ (throning), ಈ ಪದವೇ ವಿಚಿತ್ರವಾಗಿದೆ. ಜೊತೆಗೆ ಈ ಸಂಬಂಧ ಮತ್ತಷ್ಟು ವಿಚಿತ್ರವಾಗಿದೆ.  ಸಂಬಂಧ ಮತ್ತು ಡೇಟಿಂಗ್ ಟ್ರೆಂಡ್ ಪ್ರತಿದಿನ ಬದಲಾಗುತ್ತದೆ. ಥ್ರೋನಿಂಗ್ ಇವುಗಳಲ್ಲಿ ಒಂದಾಗಿದೆ, ಇದು ರಿಲೇಶನ್’ಶಿಪ್ ಡೇಟಿಂಗ್ಗೆ ಸಂಬಂಧಿಸಿದೆ. ನೀವು ಯಾರೊಂದಿಗಾದರೂ ಡೇಟಿಂಗ್ ಮಾಡುತ್ತಿದ್ದರೆ ಅಥವಾ ಅದನ್ನು ಮಾಡಲು ಹೊರಟಿದ್ದರೆ, ನೀವು ಥ್ರೋನಿಂಗ್ ಬಗ್ಗೆ ಎಲ್ಲವನ್ನೂ ತಿಳಿದಿದ್ರೆ ಒಳಿತು. ಇದರಿಂದ ನೀವು ಸಂಬಂಧವನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಬರುವ ಸವಾಲುಗಳನ್ನು ಎದುರಿಸಬಹುದು. 
 

47

ಥ್ರೋನಿಂಗ್ ಎಂದರೇನು?
ಮೊದಲನೆಯದಾಗಿ, ಥ್ರೋನಿಂಗ್ ಎಂದರೇನು ಅನ್ನೋದನ್ನ ತಿಳಿಯಿರಿ. ಥ್ರೋನಿಂಗ್ ಹೊಸ ಕಾಲನಿರ್ಣಯ ಪದವಾಗಿದೆ. ಇದರಲ್ಲಿ, ಸಂಬಂಧಗಳನ್ನು ಬಲಪಡಿಸುವ ಬದಲು, ಸಾಮಾಜಿಕ ಸ್ಥಾನಮಾನದ ಮೇಲೆ ಗಮನ ಹರಿಸಲಾಗುತ್ತದೆ. ಸಂಗಾತಿಯ ಭಾವನೆಗಳು ಮತ್ತು ಪ್ರೀತಿಯ ಬದಲು, ಅವನ ಹಣವನ್ನು ನೋಡುವ ಮೂಲಕ ಸಂಬಂಧವನ್ನು ಬೆಳೆಸೋದೆ ಥ್ರೋನಿಂಗ್.  ಇಲ್ಲಿ ಪರಸ್ಪರ ಪ್ರಯೋಜನವನ್ನು ಮಾತ್ರ ನೋಡಲಾಗುತ್ತೆ. ಇದನ್ನ ರಿಲೇಶನ್ ಶಿಪ್ (relationship) ಅನ್ನೋದಕ್ಕಿಂತ ಶೋ ಆಫ್ ಅಂತಾನೆ ಹೇಳಬಹುದು. 

57

ಥ್ರೋನಿಂಗ್ ನಿಂದ ಏನಾದ್ರೂ ಪ್ರಯೋಜನ ಇದ್ಯಾ? 
ಥ್ರೋನಿಂಗ್ ನಿಂದ ಪ್ರಯೋಜನಗಳಿಗಿಂತ ಅಡ್ಡಪರಿಣಾಮಗಳೇ ಜಾಸ್ತಿ.  ಸಮಾಜದ ಎದುರು ನಮ್ಮ ಬಳಿ ಹಣ ಇದೆ, ಅಂತಸ್ತು ಇದೆ ಅಂತ ಶೋ ಆಫ್ ಮಾತ್ರ ಮಾಡಬಹುದು, ಆದರೆ ಇದರಿಂದ ಸಂಬಂಧದ ಮೇಲೆ ನೆಗೆಟೀವ್ ಪರಿಣಾಮ ಬೀರುತ್ತೆ. ಒಬ್ಬ ವ್ಯಕ್ತಿಯು ತನ್ನನ್ನು ಇನ್ನೊಬ್ಬರಿಗಿಂತ ದೊಡ್ಡವನು, ರಿಚ್ ಎಂದು ಭಾವಿಸಲು ಪ್ರಾರಂಭಿಸುತ್ತಾನೆ.  ಇದರಿಂದಾಗಿಯೇ ಸಂಬಂಧದ ಮೇಲೆ ಪೆಟ್ಟು ಬೀಳೋದಕ್ಕೆ ಶುರುವಾಗುತ್ತೆ. 

67

ಸಂಬಂಧಗಳು ಬೇಗನೆ ಮುರಿದುಬೀಳುತ್ತವೆ
ಸಾಮಾಜಿಕ ಸ್ಥಾನಮಾನ ನೋಡಿ ರಚಿಸಲಾದ ಸಂಬಂಧಗಳು ಹೆಚ್ಚು ಕಾಲ ಉಳಿಯುವುದಿಲ್ಲ. ಯಾವುದೇ ಸಂಬಂಧವನ್ನು ಬಲಪಡಿಸಲು, ಪ್ರೀತಿ-ವಿಶ್ವಾಸ ಮತ್ತು ಭಾವನೆಗಳು ಅಗತ್ಯ. ಆದರೆ ಥ್ರೋನಿಂಗ್ ನಲ್ಲಿ, ಸಂಬಂಧ ಅನ್ನೋದೆ ಸುಳ್ಳು, ಇಲ್ಲಿ ಎಲ್ಲವೂ ಹಣ ಅಂತಸ್ತು ಆಗಿರುತ್ತೆ. ಅದು ಬೋರ್ ಅಂತ ಅನಿಸಿದ್ರೆ, ಇನ್ನೊಂದು ಕಡೆಗೆ ವಾಲುವಂತಹ ಸಂಬಂಧ ಇದಾಗಿದೆ.

77

ಥ್ರೋನಿಂಗ್ ನಿಂದ ಅನೇಕ ಅನಾನುಕೂಲತೆಗಳಿವೆ
ಥ್ರೋನಿಂಗ್ ರಿಲೇಶನ್’ಶಿಪ್ಸ್ ಅನೇಕ ಅನಾನುಕೂಲಗಳನ್ನು ಹೊಂದಿವೆ. ಇಲ್ಲಿ ಜೋಡಿಗಳಿಗೆ ನಾವು ಒಂದೇ ಅನ್ನೋ ಭಾವನೆ ಇರೋದೆ ಇಲ್ಲ, ನನ್ನ ಬಳಿ ಹಣ ಜಾಸ್ತಿ ಇದೆ, ಅವರ ಬಳಿ ಕಡಿಮೆ ಇದೆ, ಅದೊಂದೇ ತಲೆಯಲ್ಲಿ ಓಡಾಡುತ್ತೆ. ಈ ಅಸಮಾನತೆ ಇಬ್ಬರ ಮಧ್ಯದಲ್ಲಿ ಜಗಳ, ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತೆ. ಈ ಜೋಡಿಗಳು ಬಹಿರಂಗವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ, ಅಥವಾ ಪರಸ್ಪರ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ಮತ್ತು ಸಮಾನತೆಯ ಕೊರತೆಯಿಂದಾಗಿ ಈ ಸಂಬಂಧ ಬೇಗನೆ ಮುರಿದು ಬೀಳುತ್ತೆ. 
 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸಂಬಂಧಗಳು

Latest Videos
Recommended Stories
Recommended image1
ಮದುವೆ ದಿನ ಮಳೆ ಬಂದ್ರೆ ಒಳ್ಳೇದಾ? ಕೆಟ್ಟದ್ದಾ?
Recommended image2
Relationship Cheating: ಹಳೆಯ ಅಫೇರ್, ಅಬಾರ್ಷನ್ ಸತ್ಯ ಬಾಯ್ಬಿಟ್ಟಿದ್ದ ಗಂಡ ಅದಕ್ಕೂ ಮಿಗಿಲಾದ ಡೇಂಜರಸ್ ಸತ್ಯ ಮುಚ್ಚಿಟ್ಟಿದ್ದ!
Recommended image3
ವಿಜಯ್​ ಎದುರೇ ರಶ್ಮಿಕಾ ಮಂದಣ್ಣಗೆ, ರಕ್ಷಿತ್​ ಶೆಟ್ಟಿ ಬಗ್ಗೆ ಕನ್ನಡದಲ್ಲಿ ಪ್ರಶ್ನೆ! ನಟಿ ಏನ್​ ಹೇಳಿದ್ರು? ವಿಡಿಯೋ ವೈರಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved